Dailyhunt Logo
  • Light mode
    Follow system
    Dark mode
    • Play Story
    • App Story
ಬ್ರಹ್ಮಚಾರಿಯ (ಶಿಷ್ಯನ) ಆಚರಣೆ ಹೇಗಿರಬೇಕು? ಎಂಬ ಬಗ್ಗೆ ಕೂರ್ಮಪುರಾಣಕ್ಕನುಸಾರ ವಿವರಣೆ

ಬ್ರಹ್ಮಚಾರಿಯ (ಶಿಷ್ಯನ) ಆಚರಣೆ ಹೇಗಿರಬೇಕು? ಎಂಬ ಬಗ್ಗೆ ಕೂರ್ಮಪುರಾಣಕ್ಕನುಸಾರ ವಿವರಣೆ

೧. ಗುರುಗಳ ಜೊತೆಗೆ ಕುಳಿತುಕೊಳ್ಳುವುದು

. 'ಸದಾಚಾರ ಮತ್ತು ಸಂಯಮದಿಂದಿದ್ದು, ಗುರುಗಗಳು ಅನುಮತಿಸಿದ ನಂತರವೇ ಅವರ ಎದುರಿಗೆ ಕುಳಿತುಕೊಳ್ಳಬೇಕು.

ಆ. ಗುರುಗಳ ತೀರಾ ಹತ್ತಿರ ಕುಳಿತುಕೊಳ್ಳಬಾರದು.

ಇ. ಗುರುಗಳ ಹತ್ತಿರ ಶಿಷ್ಯನ ಆಸನವು ಯಾವಾಗಲೂ ಕೆಳಗಿರಬೇಕು.

ಗುರುಗಳು ನೋಡುತ್ತಿರುವಾಗ ಅವರ ಎದುರಿಗೆ ಮನಸ್ಸಿಗೆ ಬಂದಂತೆ ಕುಳಿತುಕೊಳ್ಳಬಾರದು.

ಈ. ಗುರುಗಳ ಕಡೆಗೆ ಕಾಲುಗಳನ್ನು ಚಾಚಿ ಕುಳಿತುಕೊಳ್ಳಬಾರದು, ಹಾಗೆಯೇ ಗುರುಗಳು ಹತ್ತಿರ ಇರುವಾಗ ಆಕಳಿಸುವುದು, ನಗುವುದು ಅಥವಾ ಗಲಾಟೆ/ಶಬ್ದ ಮಾಡಬಾರದು.

ಉ. ಆಸನ, ಹಾಸಿಗೆ ಮತ್ತು ವಾಹನದಲ್ಲಿ ಗುರುಗಳ ಜೊತೆಗೆ ಕುಳಿತುಕೊಳ್ಳಬಾರದು.

ಊ. ಎತ್ತು, ಕುದುರೆ, ಒಂಟೆ ಮುಂತಾದ ವಾಹನಗಳ ಮೇಲೆ, ಹಾಗೆಯೇ ದೇವಸ್ಥಾನ, ಬಂಡೆಗಲ್ಲು, ಚಾಪೆ ಮತ್ತು ಆಸನಗಳ ಮೇಲೆ ಗುರುಗಳೊಂದಿಗೆ ಕುಳಿತುಕೊಳ್ಳಬಹುದು.

೨. ಗುರುಗಳೊಂದಿಗೆ ಮಾತನಾಡುವುದು

ಅ. ಗುರುಗಳ ಜೊತೆ ಮಧುರವಾಣಿಯಿಂದ ಮಾತನಾಡಬೇಕು.

ಆ. ಗುರುಗಳ ಉತ್ತರಕ್ಕೆ ಮರುಉತ್ತರ ಕೊಡಬಾರದು.

ಇ. ಗುರುಗಳು ದೂರದಲ್ಲಿರುವಾಗ, ಕೋಪದಲ್ಲಿರುವಾಗ ಮತ್ತು ಸ್ತ್ರೀಯರ ಸಮೀಪದಲ್ಲಿರುವಾಗ ಅವರ ಪೂಜಾರ್ಚನೆ (ಪೂಜೆಯನ್ನು) ಮಾಡಬಾರದು.

೩. ಗುರುಗಳೊಂದಿಗೆ ವರ್ತನೆ

ಅ. ಯಾವಾಗಲೂ ಹಿತಕರವಾಗಿರಬೇಕು.

ಆ. ಕಾಮ, ಕ್ರೋಧ, ಲೋಭ, ಚಾಡಿ, ನಿದ್ದೆ ಇತ್ಯಾದಿ ತ್ಯಜಿಸಬೇಕು.

ಇ. ನಿಂತಿರುವಾಗ, ಕುಳಿತುಕೊಳ್ಳುವಾಗ, ತಿನ್ನುವಾಗ ಮತ್ತು ಮಲಗುವಾಗ ಗುರುಗಳಿಗೆ ಬೆನ್ನು ತೋರಿಸಿ ಅವರ ಆಜ್ಞೆಯನ್ನು ಸ್ವೀಕರಿಸಬಾರದು ಅಥವಾ ಅವರೊಂದಿಗೆ ಮಾತನಾಡಬಾರದು.

ಈ. ಗುರುಗಳಲ್ಲಿ ವಿಚಾರಿಸದೇ ಎಲ್ಲಿಯೂ ಹೋಗಬಾರದು.

ಉ. ಗುರುಗಳು ಹೊರಟರೆ, ಅವರ ಹಿಂದೆ ಹೋಗಬೇಕು.

ಊ. ಅವರಿಗೆ ಹಿತದ ಮತ್ತು ಆಜ್ಞಾನುಸಾರ ಸೇವೆ ಮಾಡಬೇಕು.

ಎ. ತಮಗೆ ದೊರೆತ ವಸ್ತುಗಳನ್ನು ಅವರಿಗೆ ಅರ್ಪಿಸಬೇಕು.

೪. ಗುರುಜನರೊಂದಿಗೆ ವ್ಯವಹಾರ

ಅ. ಗುರುಗಳ ಮೇಲಿರುವಷ್ಟೇ ಶ್ರದ್ಧೆಯನ್ನು ಅವರ ಗುರುಗಳ ಮೇಲೆಯೂ ಇಡಬೇಕು.

ಆ. ಗುರುಪತ್ನಿಯ ಸೇವೆಯನ್ನೂ ಗುರುಸಮಾನವಾಗಿ ಮಾಡಬೇಕು.

ಇ. ಗುರು ಪತ್ನಿ, ಪುತ್ರ, ಆಪ್ತರು ಮತ್ತು ಬಂಧುಗಳೊಂದಿಗೆ ಗುರುಗಳಂತೆಯೇ ವ್ಯವಹಾರ ಮಾಡಬೇಕು.

೫. ತ್ಯಜಿಸಬೇಕಾದ ಪಾಪಕೃತ್ಯಗಳು

ಅ. ಗುರುಗಳ ನಿರ್ಮಾಲ್ಯ (ಪೂಜಿಸಿದ ಹೂವುಹಾರ, ಊದುಬತ್ತಿ ಇತ್ಯಾದಿ), ಪಾದುಕೆಗಳು, ಚಪ್ಪಲಿ, ಆಸನ, ಹಾಸಿಗೆ ಮತ್ತು ನೆರಳನ್ನು ಎಂದಿಗೂ ದಾಟಬಾರದು.

ಆ. ಗುರುಗಳ ಎದುರು ಅವರ ಹೆಸರನ್ನು ಉಚ್ಚರಿಸಬಾರದು. ಅವರ ನಡಿಗೆ, ಮಾತಿನ ಶೈಲಿಯನ್ನು ಅನುಕರಿಸಬಾರದು.

ಇ. ಗುರುಗಳ ಬೋಧನೆಯನ್ನು ಖಂಡಿಸುವಲ್ಲಿ, ನಿಂದಿಸುವಲ್ಲಿ, ಶಿಷ್ಯನು ತನ್ನ ಕಿವಿಗಳನ್ನು ಮುಚ್ಚಿ ಅಲ್ಲಿಂದ ಬೇರೆಡೆ ಹೋಗಬೇಕು.

ಈ. ಗರ್ವಯುಕ್ತ ಕಾರ್ಯ ಮತ್ತು ಅಕಾರ್ಯವನ್ನು ತಿಳಿಯದ ಕುಮಾರ್ಗಿ ಗುರುಗಳನ್ನು ತ್ಯಜಿಸಬೇಕೆಂದು ಮನುವು ಹೇಳಿದ್ದಾನೆ.

ಬ್ರಹ್ಮಚಾರಿಯ ಕೆಲವು ಆಚಾರಗಳು

೧. ಆಚಮನ ಮಾಡಿ ಉತ್ತರದಲ್ಲಿ ಕುಳಿತು ಅಧ್ಯಯನ ಮಾಡಬೇಕು.

೨. ಪವಿತ್ರ ದರ್ಭೆಗಳನ್ನು ಧರಿಸಿ, ಮೂರು ಬಾರಿ ಪ್ರಾಣಾಯಾಮ ಮಾಡಿ ಮತ್ತು ಪವಿತ್ರರಾಗಿ ಓಂಕಾರವನ್ನು ಉಚ್ಚರಿಸಬೇಕು.

- ಪರಾತ್ಪರ ಗುರು ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ. (೧೫.೭.೨೦೧೬)

(ಆಧಾರ : 'ಬ್ರಹ್ಮಚಾರಿಚಾ ಆಚಾರ - ಕೂರ್ಮಪುರಾಣ, ಲೇಖಕರು - ಪ್ರ.ನ. ಜೋಶಿ, ಪುಟ ಕ್ರ. ೨೪೪ ಮತ್ತು ೨೪೫)

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada