Dailyhunt Logo
  • Light mode
    Follow system
    Dark mode
    • Play Story
    • App Story
ಢಾಕಾದಲ್ಲಿ ಹಿಂದೂ ಅರ್ಚಕನ ಮೇಲೆ ಅಮಾನುಷ ಹಲ್ಲೆ; ರಸ್ತೆಗೆ ಎಸೆದ ದುಷ್ಕರ್ಮಿಗಳು! : Bangladesh News

ಢಾಕಾದಲ್ಲಿ ಹಿಂದೂ ಅರ್ಚಕನ ಮೇಲೆ ಅಮಾನುಷ ಹಲ್ಲೆ; ರಸ್ತೆಗೆ ಎಸೆದ ದುಷ್ಕರ್ಮಿಗಳು! : Bangladesh News

ಢಾಕಾ (ಬಾಂಗ್ಲಾದೇಶ) - ಇಲ್ಲಿ ಸುಭಾಷ ದೇವೂರಿ ಎಂಬ ಹಿಂದೂ ವಿದ್ಯಾರ್ಥಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಸುಭಾಷ ಜಗನ್ನಾಥ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದು, ದೇವಸ್ಥಾನವೊಂದರಲ್ಲಿ ಅರ್ಚಕನಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಜೂನ್ ೨೯ ರ ರಾತ್ರಿ ಕೆಲವು ಅಪರಿಚಿತ ವ್ಯಕ್ತಿಗಳು ಅವರನ್ನು ಹಿಡಿದು, ಅವರಿಂದ ಹಣವನ್ನು ವಸೂಲಿ ಮಾಡಿ ರಸ್ತೆ ಬದಿಗೆ ಎಸೆದು ಪರಾರಿಯಾಗಿದ್ದಾರೆ.

​'ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಏಕತಾ ಪರಿಷತ್ತಿನ' ವಕ್ತಾರ ಕಾಜಲ್ ದೇವನಾಥ ಮಾತನಾಡಿ, 'ನಾವು ಈ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಕೇವಲ ದರೋಡೆ ಪ್ರಕರಣವಾಗಿದೆಯೇ ಎಂಬುದನ್ನೂ ಪತ್ತೆ ಹಚ್ಚುತ್ತಿದ್ದೇವೆ' ಎಂದರು. ಸುಭಾಷ ಅವರನ್ನು ಅವರ ಧರ್ಮದ ಕಾರಣಕ್ಕಾಗಿ ಗುರಿ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಎಂದು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada