Dailyhunt Logo
  • Light mode
    Follow system
    Dark mode
    • Play Story
    • App Story
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ

ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ

ನಾತನ ಭಾರತ : ಸಮಾಜ, ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮ ಇವುಗಳ ಸಂದರ್ಭದಲ್ಲಿ ಪ್ರಾಸಂಗಿಕ ವಿಷಯಗಳ ಮೇಲೆ ಬೆಳಕು ಬೀರುವ ಅಂಕಣ

ಶ್ರೀ. ಚೇತನ ರಾಜಹಂಸ

'ಧರ್ಮಶಾಸ್ತ್ರವು ನಿಯಮಗಳನ್ನು ಹೇಳುತ್ತದೆ; ಅಧ್ಯಾತ್ಮಶಾಸ್ತ್ರವು 'ಅನುಭೂತಿ' ಯನ್ನು ನೀಡುತ್ತದೆ.

'ನಾನು ಯಾರು? (ಕೋಹಮ್)' ಈ ಪ್ರಶ್ನೆಯಿಂದ ಆರಂಭವಾದ ಪ್ರವಾಸವನ್ನು 'ನಾನೇ ಬ್ರಹ್ಮ ಆಗಿದ್ದೇನೆ (ಸೋಹಮ್)' ಎಂಬ ಸಾಕ್ಷಾತ್ಕಾರದ ವರೆಗೆ ಕೊಂಡೊಯ್ಯುವ ಶಾಸ್ತ್ರವೆಂದರೆ ಅಧ್ಯಾತ್ಮಶಾಸ್ತ್ರ.'
- ಶ್ರೀ. ಚೇತನ ರಾಜಹಂಸ

ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗುವ ಅಧ್ಯಾತ್ಮಕ್ಕೆ ಸಂಬಂಧಿಸಿದ ಪ್ರವಚನಗಳಲ್ಲಿ ಜಿಜ್ಞಾಸುಗಳು 'ಧರ್ಮಶಾಸ್ತ್ರ' ಮತ್ತು 'ಅಧ್ಯಾತ್ಮಶಾಸ್ತ್ರ' ಇವು ಬೇರೆ ಬೇರೆ ಆಗಿವೆಯೇ ಅಥವಾ 'ಒಂದೇ ಅರ್ಥದ ಎರಡು ಪದಗಳಾಗಿವೆಯೋ ?' ಎಂಬ ಪ್ರಶ್ನೆಯನ್ನು ಅನೇಕ ಬಾರಿ ಕೇಳುತ್ತಾರೆ. ಅಧ್ಯಾತ್ಮಪ್ರಸಾರ ಮಾಡುವ ಸಾಧಕರಿಗೆ ಈ ಪ್ರಶ್ನೆಗೆ ಉತ್ತರಿಸಲು ಸುಲಭವಾಗಲಿ ಎಂಬ ಉದ್ದೇಶದಿಂದ ಈ ಲೇಖನವನ್ನು ಪ್ರಕಟಿಸಲಾಗಿದೆ.

 'ಧರ್ಮಶಾಸ್ತ್ರ'

೧. ವ್ಯಾಖ್ಯೆ ಮತ್ತು ಸ್ವರೂಪ

 ವಿಜ್ಞಾನ ಮತ್ತು ಅಧ್ಯಾತ್ಮಶಾಸ್ತ್ರ

ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ ಇವೆರಡೂ ಭಿನ್ನ ಅರ್ಥದ್ದಾಗಿದ್ದರೂ, ಅವು ಮಾನವ ಜೀವನದ ಉನ್ನತಿಗೆ ಬಹಳ ಮಹತ್ವದ್ದಾಗಿವೆ.

೧ ಅ. ಧರ್ಮಶಾಸ್ತ್ರ : ಇದು ಮುಖ್ಯವಾಗಿ ಸಮಾಜವ್ಯವಸ್ಥೆ, ನೀತಿಮತ್ತೆ, ನಿಯಮ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದ್ದು ವ್ಯಕ್ತಿಯು ಕುಟುಂಬದಲ್ಲಿ, ಸಮಾಜದಲ್ಲಿ ಮತ್ತು ರಾಷ್ಟ್ರದಲ್ಲಿ ಹೇಗೆ ವರ್ತಿಸಬೇಕೆಂಬ ಮಾರ್ಗದರ್ಶನ ಇರುತ್ತದೆ. (ಉದಾ. ಪಿತೃಧರ್ಮ, ಗೃಹಸ್ಥಧರ್ಮ, ರಾಜಧರ್ಮ, ಆಪದ್ಧರ್ಮ ಇತ್ಯಾದಿ). ಇದರಲ್ಲಿ ಕರ್ಮಕಾಂಡ, ಪೂಜೆ, ವಿಧಿ, ಹಬ್ಬ-ಉತ್ಸವಗಳು ಮತ್ತು ಸಾಮಾಜಿಕ ಕಟ್ಟುಪಾಡುಗಳಿಗೆ ಮಹತ್ವ ಇರುತ್ತದೆ.

೧ ಆ. ಅಧ್ಯಾತ್ಮಶಾಸ್ತ್ರ : ಇದು ಆತ್ಮದ ಸ್ವರೂಪದ ಅಭ್ಯಾಸವನ್ನು ಕಲಿಸುತ್ತದೆ. ದೃಶ್ಯ ಜಗತ್ತಿನ ಆಚೆಗಿರುವ ಆತ್ಮವನ್ನು ತಿಳಿದುಕೊಳ್ಳುವುದು

ಮತ್ತು ಈಶ್ವರನೊಂದಿಗೆ (ಪರಮಾತ್ಮನೊಂದಿಗೆ) ಏಕರೂಪವಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ಸಾಧನೆ, ಭಕ್ತಿ, ಧ್ಯಾನ, ಆತ್ಮಚಿಂತನೆ ಮತ್ತು ವೈರಾಗ್ಯದ ಮೂಲಕ ಸ್ವತಃದ ಅಂತರಂಗವನ್ನು ಅಭ್ಯಸಿಸಲಾಗುತ್ತದೆ.

ಸರಳ ಭಾಷೆಯಲ್ಲಿ ಹೇಳುವುದಾದರೆ, ಧರ್ಮಶಾಸ್ತ್ರವು 'ಹೇಗೆ ಬದುಕಬೇಕು' ಅಂದರೆ 'ಆಚಾರ'ವನ್ನು ಕಲಿಸುತ್ತದೆ; ಅಧ್ಯಾತ್ಮಶಾಸ್ತ್ರವು 'ನಾನು ಯಾರು' ಎಂಬ ಚಿಂತನೆ ಮಾಡಲು ಅಂದರೆ 'ವಿಚಾರ' ಮಾಡಲು ಕಲಿಸುತ್ತದೆ.

೨. ತುಲನಾತ್ಮಕ ಅಧ್ಯಯನ

೩. ಸಂಬಂಧ ಮತ್ತು ಸಮನ್ವಯ

ಧರ್ಮಶಾಸ್ತ್ರವನ್ನು ಅಧ್ಯಾತ್ಮದ ಮೊದಲ ಮೆಟ್ಟಿಲು ಎಂದು ನಂಬಲಾಗುತ್ತದೆ. ಎಲ್ಲಿಯವರೆಗೆ ಮನುಷ್ಯನು ಧರ್ಮದಂತೆ ನಡೆಯುವುದಿಲ್ಲವೋ (ಅಂದರೆ ನೀತಿವಂತನಾಗಿ ಇರುವುದಿಲ್ಲವೋ), ಅಲ್ಲಿಯವರೆಗೆ ಅವನು ಅಧ್ಯಾತ್ಮದ ಮಾರ್ಗದಲ್ಲಿ ಪ್ರಗತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಧರ್ಮವು ತಳಹದಿಯಾದರೆ ಅಧ್ಯಾತ್ಮವು ಅದರ ಮೇಲಿನ ಕಳಸವಾಗಿದೆ. ಧರ್ಮಾಚರಣೆಯಿಂದ ಚಿತ್ತಶುದ್ಧಿಯಾಗುತ್ತದೆ ಮತ್ತು ಶುದ್ಧ ಮನಸ್ಸಿಗೆ ಮಾತ್ರ ಆಧ್ಯಾತ್ಮಿಕ ಜ್ಞಾನವು ಪ್ರಾಪ್ತವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ, ಸಮಾಜವ್ಯವಸ್ಥೆಯು ಉತ್ತಮವಾಗಿರಲು 'ಧರ್ಮ' ಬೇಕು, ಮತ್ತು ತನ್ನನ್ನು ತಾನು ಮುಕ್ತಗೊಳಿಸಲು 'ಅಧ್ಯಾತ್ಮ'ವು ಆವಶ್ಯಕವಾಗಿರುತ್ತದೆ.

೪. ಪ್ರಮುಖ ಗ್ರಂಥಗಳ ಉದಾಹರಣೆಗಳು

ಟಿಪ್ಪಣಿ : 'ಭಗವದ್ಗೀತೆ'ಯು ಒಂದು ವಿಲಕ್ಷಣ ಗ್ರಂಥವಾಗಿದ್ದು, ಇದು ಧರ್ಮ (ಕರ್ತವ್ಯ) ಮತ್ತು ಅಧ್ಯಾತ್ಮ (ಜ್ಞಾನ) ಇವೆರಡರ ಸಂಗಮವೆಂದು ಒಪ್ಪಿಕೊಳ್ಳಲಾಗುತ್ತದೆ.

೫. ಸಮಾಜದ ದೃಷ್ಟಿಯಿಂದ ಧರ್ಮಶಾಸ್ತ್ರಮತ್ತು ಅಧ್ಯಾತ್ಮಶಾಸ್ತ್ರದ ಮಹತ್ವ

ಸಮಾಜ ವ್ಯವಸ್ಥೆಯು ಸದೃಢ ಮತ್ತು ಸುರಕ್ಷಿತವಾಗಿರಲು ಈ ಶಾಸ್ತ್ರಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಧರ್ಮಶಾಸ್ತ್ರವು ಸಮಾಜಕ್ಕೆ ಒಂದು ನೈತಿಕ ನಿಯಮಾವಳಿ' (ಅoಜe oಜಿ ಅoಟಿಜuಛಿಣ)ಯನ್ನು ನೀಡುತ್ತದೆ. ಇದರಿಂದ ಸಮಾಜದಲ್ಲಿ ಅರಾಜಕತೆ ಹರಡುವುದಿಲ್ಲ. 'ಧರ್ಮೋ ರಕ್ಷತಿ ರಕ್ಷಿತಃ' (ಯಾರು ಧರ್ಮವನ್ನು ರಕ್ಷಿಸುತ್ತಾರೋ, ಅವರನ್ನು ಧರ್ಮವು (ಈಶ್ವರ) ರಕ್ಷಿಸುತ್ತದೆ) ಎಂಬ ವಚನದಂತೆ ಸಮಾಜವು ಸುಸ್ಥಿತಿಯಲ್ಲಿ ಉಳಿಯುತ್ತದೆ. ಧರ್ಮಶಾಸ್ತ್ರವು ಸಮಾಜಕ್ಕೆ ಪ್ರಾಮಾಣಿಕತೆ, ನ್ಯಾಯ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವನ್ನು ಮೂಡಿಸುತ್ತದೆ. ಅಧ್ಯಾತ್ಮಶಾಸ್ತ್ರವು ಎಲ್ಲಾ ಜೀವರಾಶಿಗಳಲ್ಲಿಯೂ ಒಂದೇ ಆತ್ಮವಿದೆ ಎಂದು ಕಲಿಸುತ್ತದೆ. ಈ ಭಾವನೆಯು ಸಮಾಜದಲ್ಲಿನ ಭೇದಭಾವಗಳನ್ನು ಕಡಿಮೆ ಮಾಡಲು ಮತ್ತು ವಿಶ್ವ ಬಂಧುತ್ವವನ್ನು ಬೆಳೆಸಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕಾಗಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಧ್ಯಾತ್ಮದ ಆಧಾರದಲ್ಲಿ ರಾಷ್ಟ್ರರಚನೆಯ ಸಿದ್ಧಾಂತವನ್ನು ಮಂಡಿಸಿದ್ದಾರೆ. ರಾಷ್ಟ್ರದ ರಚನೆಯು ಅಧ್ಯಾತ್ಮದ ಆಧಾರದಲ್ಲಿ ನಡೆದರೆ, ಸಮಾಜದಲ್ಲಿ ಮೇಲು-ಕೀಳು, ಜಾತಿ, ಭಾಷೆ, ಪ್ರಾಂತ್ಯ ಮುಂತಾದ ಭೇದಭಾವ ಗಳನ್ನು ಕಡಿಮೆ ಮಾಡಲು ಮತ್ತು ವಿಶ್ವ ಬಂಧುತ್ವವನ್ನು ಬೆಳೆಸಲು ಪ್ರತ್ಯೇಕ ಪ್ರಯತ್ನಗಳ ಅವಶ್ಯಕತೆ ಇರುವುದಿಲ್ಲ.

೬. ನಿಷ್ಕರ್ಷ

ಇಂದಿನ ಕಾಲದಲ್ಲಿ ಉತ್ತಮ ಸಮಾಜ ವ್ಯವಸ್ಥೆಗಾಗಿ ಧರ್ಮಶಾಸ್ತ್ರವು ಆವಶ್ಯಕವಾಗಿದೆ. ಧರ್ಮಶಾಸ್ತ್ರವು ಸಮಾಜವನ್ನು ನಿಯಮಗಳ ಚೌಕಟ್ಟಿನಲ್ಲಿ ಹಾಗೂ ಅಧ್ಯಾತ್ಮಶಾಸ್ತ್ರವು ಮನುಷ್ಯನನ್ನು ಬಂಧನಗಳಿಂದ ಮುಕ್ತಗೊಳಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ 'ಧರ್ಮ' ಎಂದರೆ ಕೇವಲ ಪೂಜೆಯಲ್ಲ, ಬದಲಿಗೆ ಅದು 'ಧಾರಣೆ' (ಏಕಾಗ್ರತೆ) ಆಗಿದೆ. ಧರ್ಮಶಾಸ್ತ್ರಗಳು ಮಾನವ ಜೀವನದ ನೈತಿಕ ಚೌಕಟ್ಟನ್ನು ರೂಪಿಸುತ್ತವೆ. ಸತ್ಯವನ್ನು ನುಡಿಯುವುದು, 'ಮಾತೃ-ಪಿತೃ ದೇವೋ ಭವ' ಮತ್ತು ಅತಿಥಿ ಸತ್ಕಾರದಂತಹ ಮೌಲ್ಯಗಳು ಧರ್ಮಶಾಸ್ತ್ರಗಳಿಂದಲೇ ಬಂದಿವೆ. ಧರ್ಮಶಾಸ್ತ್ರವು ನಿಯಮಗಳನ್ನು ತಿಳಿಸುತ್ತದೆ; ಆದರೆ ಅಧ್ಯಾತ್ಮಶಾಸ್ತ್ರವು 'ಅನುಭೂತಿ'ಯನ್ನು ನೀಡುತ್ತದೆ.

ಸಂಕ್ಷಿಪ್ತವಾಗಿ, ಅಧ್ಯಾತ್ಮಶಾಸ್ತ್ರದಲ್ಲಿ ಬಾಹ್ಯ ಕರ್ಮಕಾಂಡಗಳಿಗಿಂತ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

- ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ, (೭.೪.೨೦೨೬)

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada