Dailyhunt Logo
  • Light mode
    Follow system
    Dark mode
    • Play Story
    • App Story
ಧ್ರುವ್ ರಾಠಿ ವಿವಾದಾತ್ಮಕ ವಿಡಿಯೋ: 15 ದಿನಗಳಲ್ಲಿ ನಿರ್ಧಾರ : Dhruv Rathee Controversy

ಧ್ರುವ್ ರಾಠಿ ವಿವಾದಾತ್ಮಕ ವಿಡಿಯೋ: 15 ದಿನಗಳಲ್ಲಿ ನಿರ್ಧಾರ : Dhruv Rathee Controversy

  • ಕೇಂದ್ರ ಸರಕಾರಕ್ಕೆ ದೆಹಲಿ ಹೈಕೋರ್ಟ್‌ ಆದೇಶ
  • ನ್ಯಾಯವಾದಿ ಅಮಿತಾ ಸಚ್‌ದೇವ್ ಅವರ ಅರ್ಜಿಯ ಮೇರೆಗೆ ಕೋರ್ಟ್ ಆದೇಶ

('ಯೂಟ್ಯೂಬರ್' ಎಂದರೆ ಸ್ವಂತ ಯೂಟ್ಯೂಬ್ ಚಾನೆಲ್ ಮೂಲಕ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ವ್ಯಕ್ತಿ)

ನವದೆಹಲಿ - ಯೂಟ್ಯೂಬರ್ ಧ್ರುವ್ ರಾಠಿ ಹಿಂದೂ ದೇವತೆಗಳ ಕುರಿತು ಪ್ರಸಾರ ಮಾಡಿರುವ ವಿಡಿಯೋವನ್ನು ತೆಗೆದುಹಾಕಬೇಕೋ ಬೇಡವೋ ಎಂಬ ಬಗ್ಗೆ ಮುಂದಿನ 15 ದಿನಗಳಲ್ಲಿ ತುರ್ತು ನಿರ್ಧಾರ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರಕಾರದ ಕುಂದು ಕೊರತೆ ಮೇಲ್ಮನವಿ ಸಮಿತಿಗೆ ನಿರ್ದೇಶನ ನೀಡಿದೆ.

ಈ ವಿಡಿಯೋ ಮೂಲಕ ಮಾನಹಾನಿ ಮಾಡಲಾಗಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ.

ನ್ಯಾಯವಾದಿ ಅಮಿತಾ ಸಚ್‌ದೇವ್ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ನ್ಯಾಯವಾದಿ ಸಚ್‌ದೇವ್ ಅವರು ರಾಠಿ ವಿಡಿಯೋ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಿದ್ದಾರೆ.

ಹಿಂದೂ ದೇವತೆಗಳ ನಿಂದನೆಯನ್ನು ಸಹಿಸಲು ಸಾಧ್ಯವಿಲ್ಲ! - ಕೇಂದ್ರ ಸರಕಾರ

ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು, "ಈ ವಿಡಿಯೋದಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳಿದ್ದು, ಅದನ್ನು ಸಹಿಸಲು ಸಾಧ್ಯವಿಲ್ಲ. ಮಧ್ಯಸ್ಥಗಾರರು (ಸೋಷಿಯಲ್ ಮೀಡಿಯಾ ಸಂಸ್ಥೆಗಳು) ತಾವಾಗಿಯೇ ಈ ವಿಡಿಯೋವನ್ನು ತೆಗೆದುಹಾಕಬೇಕು ಅಥವಾ ಹಾಗೆ ಮಾಡಲು ನ್ಯಾಯಾಲಯ ಆದೇಶ ಹೊರಡಿಸಬೇಕು" ಎಂದು ನ್ಯಾಯಾಲಯದಲ್ಲಿ ಹೇಳಿದರು.

ವಿಡಿಯೋದಲ್ಲೇನಿದೆ?

ಧ್ರುವ್ ರಾಠಿ ಮಾರ್ಚ್ 21 ರಂದು ಬಿಡುಗಡೆ ಮಾಡಿದ ವಿಡಿಯೋ ಒಂದಕ್ಕೆ ಸಚ್‌ದೇವ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ 'ಕ್ಯಾನ್ ಹಿಂದೂಸ್ ಈಟ್ ಬೀಫ್? ಕೇರಳಾಸ್ ಸ್ಟೋರಿ 2 ಎಕ್ಸ್‌ಪೋಸ್ಡ್' ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ರಾಠಿ ಹಿಂದೂ ಧರ್ಮಗ್ರಂಥಗಳಲ್ಲಿನ ಆಹಾರ ಪದ್ಧತಿಗಳ ಬಗ್ಗೆ ಚರ್ಚಿಸಿದ್ದಾನೆ. ಪ್ರಭು ಶ್ರೀರಾಮ ಮತ್ತು ಭಗವಾನ್ ಶ್ರೀಕೃಷ್ಣ ಮುಂತಾದ ದೇವತೆಗಳು ಮಾಂಸಾಹಾರ ಮಾಡಿರುವುದನ್ನು ಹಿಂದೂ ಶಾಸ್ತ್ರಗಳಲ್ಲಿ & ಮುನಿಗಳು ಉಲ್ಲೇಖಿಸಿದ್ದಾರೆಂದು ಧ್ರುವ್ ವಿಡಿಯೋದಲ್ಲಿ ವಾದಿಸಿದ್ದಾನೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada