Dailyhunt Logo
  • Light mode
    Follow system
    Dark mode
    • Play Story
    • App Story
'ಗಣೇಶೋತ್ಸವದ ಮೆರವಣಿಗೆಯಲ್ಲಿ 1 ಲಕ್ಷಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಬೇಕಾಗುತ್ತದೆಯಂತೆ !'

'ಗಣೇಶೋತ್ಸವದ ಮೆರವಣಿಗೆಯಲ್ಲಿ 1 ಲಕ್ಷಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಬೇಕಾಗುತ್ತದೆಯಂತೆ !'

ರಾಜ್ಯದ ಕಾಂಗ್ರೆಸ್ ಸರಕಾರದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಹಿಂದೂಗಳಿಗೆ ಕರೆ!

ಬೆಂಗಳೂರು - 2025 ರಲ್ಲಿ ರಾಜ್ಯದಲ್ಲಿ 80 ಸಾವಿರ 558 ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳು ಜರುಗಿದವು. ಅವು ಶಾಂತಿಯುತವಾಗಿ ಮತ್ತು ಸುರಕ್ಷಿತವಾಗಿ ನೆರವೇರಲು 1 ಲಕ್ಷ 2 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕದಳ ಸಿಬ್ಬಂದಿ ಹಾಗೂ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿತ್ತು.

1 ಲಕ್ಷಕ್ಕೂ ಅಧಿಕ ಸಮವಸ್ತ್ರಧಾರಿ ಪುರುಷ ಮತ್ತು ಮಹಿಳಾ ಸಿಬ್ಬಂದಿ ಈ ಹಬ್ಬವನ್ನು ತಮ್ಮ ಸ್ವಂತ ಕುಟುಂಬಗಳಿಂದ ದೂರದಲ್ಲಿ ಕಳೆದುಕೊಂಡರು, ಇದರಿಂದ ನಾವೆಲ್ಲರೂ ನಮ್ಮ ಕುಟುಂಬದೊಂದಿಗೆ ಆನಂದದಿಂದ ಹಬ್ಬವನ್ನು ಆಚರಿಸಬಹುದು.

ಅವರು ಇಂತಹ ತ್ಯಾಗ ಮಾಡುವಾಗ, ನಾವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಅವರ ಈ ತ್ಯಾಗವನ್ನು ಗೌರವಿಸುವುದು. ಜವಾಬ್ದಾರಿಯುತ ನಾಗರಿಕರಾಗಿ. ಪೊಲೀಸರಿಗೆ ಸಹಕರಿಸಿ. ಅವರ ಸೂಚನೆಗಳನ್ನು ಪಾಲಿಸಿ. ಅವರನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ 'ಎಕ್ಸ್' ಖಾತೆಯ ಮೂಲಕ ಹಿಂದೂಗಳಿಗೆ ಮನವಿ ಮಾಡಿದರು. ಇದಕ್ಕೆ ಹಿಂದೂಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿನ ಪ್ರತಿಕ್ರಿಯೆಗಳು

1. 'ಖರ್ಗೆ ಸಾಹೇಬ್, ಇದು ನಮ್ಮ ಹಬ್ಬ. ಅಲ್ಪಸಂಖ್ಯಾತರ ಹಬ್ಬಗಳ ಸಮಯದಲ್ಲಿ ನೀವು ಹೀಗೇಕೆ ಮಾತನಾಡುವುದಿಲ್ಲ?' - ರವಿ

2. 'ನನಗೆ ಪೊಲೀಸರಿಗೆ ಗೌರವ ತೋರಲು ಖಂಡಿತ ಇಷ್ಟವಾಗುತ್ತದೆ; ಆದರೆ ಪೊಲೀಸರು ಮಧ್ಯರಾತ್ರಿ 2 ಗಂಟೆಗೆ 350 ಕಿ.ಮೀ. ಪ್ರಯಾಣಿಸಿ ವ್ಯಕ್ತಿಯೊಬ್ಬರನ್ನು (ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ. ಮೋಹನ ಗೌಡ ಅವರ ಪ್ರಕರಣ) ಅವರ ಫೇಸ್‌ಬುಕ್ ಪೋಸ್ಟ್‌ಗಾಗಿ ಕಾನೂನುಬಹಿರವಾಗಿ ಬಂಧಿಸಿದಾಗ, ನಾವು ಪೊಲೀಸರ ಮತ್ತು ಅವರಿಗೆ ಆದೇಶ ನೀಡುವವರ ಮೇಲೆ ಹೇಗೆ ವಿಶ್ವಾಸ ಇಡುವುದು? ಪೊಲೀಸರಿಗೆ ಈ ಆದೇಶ ನೀಡುತ್ತಿರುವವರು ಯಾರು ಎಂಬುದು ನಮಗೆ ತಿಳಿದಿಲ್ಲ ಎಂದು ನೀವು ಭಾವಿಸುತ್ತೀರಾ?' - ವಸುಧೈವ ಕುಟುಂಬಕಮ್

3. 'ಕಳೆದ ವರ್ಷ ಗಣೇಶೋತ್ಸವ ಮೆರವಣಿಗೆಗಳ ಮೇಲೆ ಕಲ್ಲುತೂರಾಟ ಯಾವಾಗ ಮತ್ತು ಎಲ್ಲಿ ನಡೆಯಿತು?' ಎಂಬುದು ಪೊಲೀಸರಿಗೆ ತಿಳಿದಿದೆ. ಕಲ್ಲುತೂರಾಟ ಮಾಡುವವರನ್ನು ಯಾರು ಬೆಂಬಲಿಸುತ್ತಾರೆ, ಅವರಿಗೆ ಹಣಕಾಸಿನ ನೆರವು ಯಾರು ನೀಡುತ್ತಾರೆ ಮತ್ತು ಅವರ ಮೇಲಿನ ಮೊಕದ್ದಮೆಗಳನ್ನು ಯಾರು ಹಿಂಪಡೆಯುತ್ತಾರೆ ಎಂಬುದು ಕೂಡ ಪೊಲೀಸರಿಗೆ ತಿಳಿದಿದೆ.' - ಜಯದೇವ ಎಂ.

4. 'ಒಮ್ಮೆ ಯೋಚಿಸಿ, ಮೆರವಣಿಗೆಯಲ್ಲಿ ಜನರ ರಕ್ಷಣೆ ಮಾಡಲು ನಮಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪೊಲೀಸರ ಅವಶ್ಯಕತೆ ಏಕೆ ಬೀಡುತ್ತದೆ? ಮತ್ತು ರಕ್ಷಣೆ ಖಂಡಿತ ಯಾರಿಂದ ಮತ್ತು ಯಾವುದರಿಂದ ಮಾಡಬೇಕು? ನಾವು ಇತರೆ ಧರ್ಮಗಳ ಮೆರವಣಿಗೆಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುತ್ತೇವೆಯೇ?' - ಟೆಕ್ ಪ್ರೆನ್ಯೂರ್

5. 'ಪೊಲೀಸರು ಹಿಂದೂಗಳನ್ನು ಯಾರಿಂದ ರಕ್ಷಿಸುತ್ತಿದ್ದಾರೆ? ರಾಜ್ಯದಲ್ಲಿ ಉಗ್ರರು ನುಗ್ಗಿದ್ದಾರೆಯೇ ಅಥವಾ ನಮ್ಮ ಹಬ್ಬಗಳನ್ನು ಆಚರಿಸುವುದಕ್ಕೆ ಅಡ್ಡಿಪಡಿಸಲು ಸ್ಲೀಪರ್ ಸೆಲ್‌ಗಳು (ರಹಸ್ಯವಾಗಿ ಉಗ್ರರಿಗೆ ಸಹಾಯ ಮಾಡುವ ಮತಾಂಧ ಮುಸ್ಲಿಮರ ಸ್ಥಳೀಯ ಗುಂಪುಗಳು) ಸಕ್ರಿಯವಾಗಿವೆಯೇ? ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬದಲು ಹಿಂದೂಗಳನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಆಧಾರರಹಿತ ನಿರ್ಬಂಧಗಳನ್ನು ಹೇರಲಾಗುತ್ತಿದೆ.' - ಗುರು ಗೌಡರ್

6. 'ಈ ಕೆಲಸವಿಲ್ಲದ ರಾಜಕಾರಣಿಗಳು ಮತ್ತು ಅವರ ಕುಟುಂಬದವರ ರಕ್ಷಣೆಗಾಗಿ ಎಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ? ಈ ಜನರು ಕೇವಲ ಹಿಂದೂಗಳ ಹಬ್ಬಗಳ ಮೇಲೆ ಮಾತ್ರ ಜ್ಞಾನ ಬೋಧಿಸುತ್ತಾರೆ.' - ರೇವಣ್ಣ

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada