Dailyhunt Logo
  • Light mode
    Follow system
    Dark mode
    • Play Story
    • App Story
ಗುರುವೇ ಆತ್ಮಜ್ಞಾನ, ಬ್ರಹ್ಮಜ್ಞಾನ ಹಾಗೂ ಭಗವಂತನ ಪ್ರಾಪ್ತಿಯ ಕಾರಣ

ಗುರುವೇ ಆತ್ಮಜ್ಞಾನ, ಬ್ರಹ್ಮಜ್ಞಾನ ಹಾಗೂ ಭಗವಂತನ ಪ್ರಾಪ್ತಿಯ ಕಾರಣ

ಪ.ಪೂ. ಗುರುದೇವ ಡಾ.ಕಾಟೆಸ್ವಾಮೀಜೀ

೧. ಗುರುಗಳಿಲ್ಲದೆ ಹಾಗೂ ಸೇವೆಯಿಲ್ಲದೆ ಆತ್ಮಜ್ಞಾನ ಸಿಗದು ಹಾಗಾಗಿ ಗುರುಗಳ ಸೇವೆ ಮಾಡಬೇಕು

ಗುರುಗಳಿಲ್ಲದೆ ಹಾಗೂ ಸೇವೆಯಿಲ್ಲದೆ ಆತ್ಮಜ್ಞಾನ ಅಥವಾ ಯಾವುದೇ ಜ್ಞಾನವು ಸಿಗುವುದಿಲ್ಲ. ಯಾವುದೇ ರಹಸ್ಯವು ತಿಳಿಯುವುದಿಲ್ಲ ಅದಕ್ಕಾಗಿ ಗುರುಗಳ ಸೇವೆ ಮಾಡಲೇಬೇಕು ಸೇವೆಯಿಂದ ಅಹಂಕಾರ ಹೋಗಲಾಡಿಸಬೇಕು.

ಶಿಷ್ಯನು ಗುರುಗಳ ಅನುಕರಣೆ ಮಾಡಬೇಕು, ಧ್ಯಾನ ಹಾಗೂ ಚಿಂತನೆ ಮಾಡಬೇಕು. ಅನಂತರ ಅವನಿಗೆ ಗುರುವಿಲ್ಲದೆ ಉಳಿಯಲು ಬರಬೇಕು. ಅವನಿಗೆ ಗುರುಗಳ ಆವಶ್ಯಕತೆಯು ಉಳಿಯಬಾರದು. ಕೊನೆಯದಾಗಿ ಶಿಷ್ಯನೇ ಗುರುವಾಗಬೇಕಾಗಿದೆ.

೨. ಭಗವಂತನನ್ನು ತಿಳಿಯಲು ಶಿಷ್ಯನು ಅಖಂಡ ಮಾರ್ಗಕ್ರಮಣ ನಡೆಸುವುದು ಆವಶ್ಯಕವಾಗಿದೆ

ಭಗವಂತನ ಧಾರೆಯನ್ನು ಬೇರೆಬೇರೆ ರೂಪದಲ್ಲಿ ಹರಿಯಲು ಬಿಡಿ. ಮನಸ್ಸು ಸ್ವಲ್ಪ ಶಾಂತವಾದರೆ ಸುಖವೆನಿಸುತ್ತದೆ, ವಿಶ್ರಾಂತಿ ಸಿಗುತ್ತದೆ ಹಾಗೂ ಆನಂದವಾಗುತ್ತದೆ. ಆದರೆ ಅದು ಒಂದು ಮಿಂಚಿನಂತೆ ತುಣುಕಾಗಿದೆ. ಅಲ್ಲಿ ನಿಲ್ಲದಿರಿ. ಎಷ್ಟೇ ಸಿಗಲಿ ಚಲನೆಯು ನಡೆಯುತ್ತಿರಲಿ. ಇನ್ನು ತುಂಬ ಸಿಗಲಿದೆ. ಭಗವಂತನು ಅನಂತನಾಗಿದ್ದಾನೆ. ಪರಮೇಶ್ವರನ ರಹಸ್ಯ ಅನಂತವಾಗಿದೆ. ಎಷ್ಟು ನೋಡಿದರೂ ಗುರುತಿಸಲು ಆಗುವುದಿಲ್ಲ. ನೋಡುತ್ತಾ ನೋಡುತ್ತಾ ನೋಡುವವನೇ ಮುಗಿಯಬೇಕು. ನಾನು ಎಂಬುದು ಪೂರ್ಣ ಮುಗಿಯಬೇಕು. ನಾನು ಎಂಬುದು ಪೂರ್ಣವಾಗಿ ನಷ್ಟವಾಗದೆ ವಿರಾಟರೂಪದಲ್ಲಿ ಒಂದಾಗಲು ಸಾಧ್ಯವಿಲ್ಲ.

೩. ಆತ್ಮಜ್ಞಾನಿ ಗುರುಗಳಿಗೆ ನಮಸ್ಕರಿಸಿ ಶಿಷ್ಯನು ನಮ್ರತೆಯಿಂದ ತನ್ನ ಸಂಶಯವನ್ನು ವಿಚಾರಿಸಬೇಕು

ಆತ್ಮಜ್ಞಾನ, ಬ್ರಹ್ಮಜ್ಞಾನ ಮತ್ತು ಭಗವಂತನನ್ನು ಪಡೆಯುವ ಸಾಧನ ಯಾವುದು? ಸದ್ಗುರುಗಳೇ ಅದಕ್ಕೆ ಏಕೈಕ ಸಾಧನ ! ಆ ಆತ್ಮಜ್ಞಾನ ಮತ್ತು ಭಗವಂತನ ಜ್ಞಾನವನ್ನು ಪಡೆಯುವುದು ಹೇಗೆ ? ಯಾರು ಆತ್ಮಜ್ಞಾನಿಗಳೋ, ಯಾರು ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೋ ಮತ್ತು ಯಾರು ಭಗವಂತನನ್ನು ಹೊಂದಿ ದ್ದಾರೋ, ಅಂತಹ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ! ವಿನಮ್ರತೆಯಿಂದ ನಿಮ್ಮ ಶಂಕೆಗಳನ್ನು ಅವರ ಮುಂದೆ ಇಡಿ, ನಿಮ್ಮ ಸಮಸ್ಯೆಗಳನ್ನು ತಿಳಿಸಿ ಮತ್ತು ಪ್ರಶ್ನೆಗಳನ್ನು ಕೇಳಿ?ಈ ಸಂಸಾರ ಎಂದರೇನು ? ನಾನು ಯಾರು ? ಈ ದುಃಖಮಯ ಸಂಸಾರದಿಂದ ನನಗೆ ಮುಕ್ತಿ ಹೇಗೆ ಸಿಗುತ್ತದೆ? ಪದೇ ಪದೇ ಹುಟ್ಟು ಮತ್ತು ಪದೇ ಪದೇ ಸಾವು ಎಂಬ ಈ ಕರ್ಮಚಕ್ರ ಯಾವಾಗ ನಿಲ್ಲುತ್ತದೆ? ಬೇರೆ ಬೇರೆ ಯೋನಿಗಳಲ್ಲಿಯ ಸಂಚಾರವು ಯಾವಾಗ ಮತ್ತು ಹೇಗೆ ನಿಲ್ಲುವುದು ? ಈ ಸಂಸಾರದಿಂದ ಹೇಗೆ ನಿವೃತ್ತನಾಗಬಹುದು ? ನಾನು ಯಾರು ? ಇದರ ಜ್ಞಾನ ಹೇಗಾಗುವುದು? ನನಗೆ ಸಾಕ್ಷಾತ್ಕಾರ ಹೇಗಾಗುವುದು ?

- ಪ.ಪೂ. ಗುರುದೇವ ಡಾ.ಕಾಟೆಸ್ವಾಮೀಜೀ

(ಕೃಪೆ : ಮಾಸಿಕ ಘನಘರ್ಜಿತ, ೧ ಡಿಸೆಂಬರ ೨೦೨೧)

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada