Dailyhunt Logo
  • Light mode
    Follow system
    Dark mode
    • Play Story
    • App Story
India-Nepal Border Dispute : ​ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! - ಭಾರತ

India-Nepal Border Dispute : ​ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! - ಭಾರತ

ನೇಪಾಳದ ಪ್ರಧಾನಿ ಬಾಲೆನ್ ಶಾ, ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್

ನವ ದೆಹಲಿ - ನೇಪಾಳವು ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ನೇಪಾಳದ ಪ್ರಧಾನಿ ಬಾಲೆನ್ ಶಾ ಸಂಸತ್ತಿನಲ್ಲಿ ಹೇಳಿದ್ದರು. ಅಲ್ಲದೆ ಈ ಸಂದರ್ಭದಲ್ಲಿ ಬ್ರಿಟನ್ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಗಡಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಮತ್ತು ಪರಿಹರಿಸಲು ಭಾರತ ಮತ್ತು ನೇಪಾಳದ ನಡುವೆ ಈಗಾಗಲೇ ದ್ವಿಪಕ್ಷೀಯ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ ಎಂದು ಹೇಳಿದ್ದಾರೆ. ಗಡಿಯ ಪ್ರಶ್ನೆಯು ಉಭಯ ದೇಶಗಳ ನಡುವಿನ ವಿಷಯವಾಗಿದ್ದು, ಇದರಲ್ಲಿ ಯಾವುದೇ ಮೂರನೇ ಪಕ್ಷದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

​ಜೈಸ್ವಾಲ್ ಅವರು ಮುಂದುವರಿದು ಮಾತನಾಡಿ, ಉಭಯ ದೇಶಗಳ ನಡುವಿನ ಸುಮಾರು ೯೮% ರಷ್ಟು ಗಡಿಯನ್ನು ಈಗಾಗಲೇ ನಿರ್ಧರಿಸಲಾಗಿದೆ; ಆದರೆ ಕೆಲವು ಭಾಗಗಳ ಕುರಿತು ಇನ್ನೂ ಒಮ್ಮತಕ್ಕೆ ಬರಬೇಕಾಗಿರುವುದು ಬಾಕಿ ಇದೆ. ಗಂಡಕ್ ನದಿಯು ತನ್ನ ಹರಿವಿನ ಮಾರ್ಗವನ್ನು ಬದಲಾಯಿಸಿರುವುದರಿಂದ ಕೆಲವು ಪ್ರದೇಶಗಳಲ್ಲಿ ಗಡಿಗೆ ಸಂಬಂಧಿಸಿದ ಪ್ರಶ್ನೆಗಳು ಉದ್ಭವಿಸಿವೆ. ಇದಲ್ಲದೆ ಕೆಲವು ಸ್ಥಳಗಳಲ್ಲಿ ಗಡಿ ನಿಯಮ ಉಲ್ಲಂಘಿಸಿ ಒತ್ತುವರಿ ಮಾಡಿಕೊಂಡಿರುವುದು ಮತ್ತು 'ನೋ-ಮ್ಯಾನ್ಸ್ ಲ್ಯಾಂಡ್' (ಯಾವುದೇ ವ್ಯಕ್ತಿಯ ಅಥವಾ ದೇಶದ ಮಾಲೀಕತ್ವದಲ್ಲಿ ಇಲ್ಲದ ಅಥವಾ ಎರಡು ಗಡಿಗಳ ನಡುವಿನ ತಟಸ್ಥ ಪ್ರದೇಶ) ಮೇಲಿನ ಒತ್ತುವರಿಯ ಪ್ರಕರಣಗಳೂ ಇವೆ, ಇವುಗಳನ್ನು ಉಭಯ ದೇಶಗಳು ಜೊತೆಯಾಗಿ 'ಮ್ಯಾಪಿಂಗ್' (ಭೂಮಿಯ ನಿಖರವಾದ ಗಡಿ, ವಿಸ್ತೀರ್ಣ, ಸ್ಥಾನ ಮತ್ತು ಭೌಗೋಳಿಕ ಲಕ್ಷಣಗಳನ್ನು ನಕ್ಷೆಯಲ್ಲಿ ಅಥವಾ ಡಿಜಿಟಲ್ ರೂಪದಲ್ಲಿ ದಾಖಲಿಸುವ ಪ್ರಕ್ರಿಯೆ) ಮಾಡುತ್ತಿವೆ ಎಂದು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada