ಬಸ್ ಅಪಹರಿಸಿ ಹಲವು ವಾಹನಗಳಿಗೆ ಡಿಕ್ಕಿ
ಲಂಡನ್ (ಬ್ರಿಟನ್) - ಇಂಗ್ಲೆಂಡ್‌ನ ಟೆಲ್‌ಫೋರ್ಡ್ ನಗರದ ಕೋರ್ಟ್ ಸ್ಟ್ರೀಟ್ ಮಾರ್ಗದಲ್ಲಿ ಸೆಪ್ಟೆಂಬರ್ ೧೮ ರ ಸಂಜೆ ಸಿಖ್ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ, ಆತನ ಬಸ್ ಅನ್ನು ಅಪಹರಿಸಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯು ಬಸ್ ಅಪಹರಿಸಿದ ನಂತರ ಅದನ್ನು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಹೆಸರು ಅಲಿ ಬಲ್ಹಾದ್ ಎಂದು ತಿಳಿದುಬಂದಿದೆ. ಆತ ಯೆಮೆನ್ ದೇಶದ ಪ್ರಜೆಯಾಗಿದ್ದು ೩೩ ವರ್ಷ ವಯಸ್ಸಿನವನಾಗಿದ್ದಾನೆ. (ಬಸ್ ಅಪಹರಿಸಿ ಇತರರಿಗೆ ಡಿಕ್ಕಿ ಹೊಡೆಯುವ ಮೂಲಕ ಜನರನ್ನು ಕೊಲ್ಲುವುದು ಆತನ ಸಂಚಾಗಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸುವುದು ಅಗತ್ಯ! - ಸಂಪಾದಕರು) ಸಿಖ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯಲ್ಲಿ ಬೇರೆ ಯಾವುದೇ ವ್ಯಕ್ತಿಗೆ ಗಾಯಗಳಾಗಿಲ್ಲ.

