ವಾಷಿಂಗ್ಟನ್ (ಅಮೆರಿಕಾ) - ಇರಾನ್ ಯಾವುದೇ ಪರಿಸ್ಥಿತಿಯಲ್ಲೂ ಅಮೆರಿಕಾದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ಈ ಯುದ್ಧವು ಅತ್ಯಂತ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾವೆ ಮಾಡಿದ್ದಾರೆ. ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬರಲಿದೆ.
ಅವರು ಮೇ ೧೯ ರಂದು ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ವಿಶ್ವದಾದ್ಯಂತ ಮಾರುಕಟ್ಟೆಯಲ್ಲಿ ತೈಲದ ಪೂರೈಕೆ ಅತ್ಯಧಿಕವಾಗಿದೆ, ಆದ್ದರಿಂದ ಈಗ ಅದರ ಬೆಲೆಗಳು ವೇಗವಾಗಿ ಕೆಳಗೆ ಇಳಿಯಲಿವೆ ಎಂದು ಟ್ರಂಪ್ ಹೇಳಿದರು. ಅವರ ಈ ಮಾತುಗಳಿಂದ ತೆರೆಮರೆಯ ಚರ್ಚೆಗಳು ಅತ್ಯಂತ ವೇಗವಾಗಿ ಮುಂದುವರೆಯುತ್ತಿವೆ ಎಂಬುದು ಸ್ಪಷ್ಟವಾಗಿದೆ.

