ಪ್ರಿಯಂ ವಾ ಯದಿ ವಾ ದ್ವೇಷ್ಯಂ, ಶುಭಂ ವಾ ಯದಿ ವಾ ಅಶುಭಮ್ |ಅಪ್ರೃಷ್ಟೋಽಪಿ ಹಿತಂ ಬ್ರೂಯಾದ್ ಯಸ್ಯ ನ ಇಚ್ಛೇತ್ ಪರಾಭವಮ್ ||
ಅರ್ಥ : ಯಾರ ಸೋಲು ಅಥವಾ ಹಾನಿ ಆಗಬಾರದು ಎಂದು ನಾವು ಬಯಸುತ್ತೇವೆಯೋ, ಅಂಥವರಿಗೆ ಅವರು ನಮ್ಮಲ್ಲಿ ಕೇಳದಿದ್ದರೂ ಅವರಿಗೆ ಹಿತಕರ ಇರುವುದನ್ನು ಹೇಳಬೇಕು; ಆ ಮಾತು ಅವರಿಗೆ ಇಷ್ಟವಾಗಲಿ ಅಥವಾ ಅಪ್ರಿಯವಾಗಿರಲಿ, ಶುಭವಾಗಿರಲಿ ಅಥವಾ ಅಶುಭವಾಗಿರಲಿ (ಅವರ ಒಳಿತಿಗಾಗಿ ಅದನ್ನು ತಿಳಿಸಬೇಕು).

