ಅಧ್ಯಾತ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳಿದ ನಂತರ ಶಿಷ್ಯ ಡಾ. ಜಯಂತ ಆಠವಲೆಯವರ ಸಂದೇಹಗಳನ್ನು ನಿವಾರಿಸುತ್ತಿರುವ ಪ.ಪೂ.'ನಾನು ಕ್ರಿಸ್ತಶಕ ೧೯೮೨ ರವರೆಗೆ 'ಸಮ್ಮೋಹನ ಉಪಚಾರ ತಜ್ಞ' ಎಂದು ವ್ಯವಸಾಯ ಮತ್ತು ಸಂಶೋಧನೆಯನ್ನು ಮಾಡಿದೆ. ೧೯೮೩ ರಿಂದ ೧೯೮೬ ರ ಕಾಲಾವಧಿಯಲ್ಲಿ ವಿವಿಧ ಸಂತರ ಬಳಿಗೆ ಹೋದ ಕಾರಣ ಅಧ್ಯಾತ್ಮ, ಸಂತರು ಇವೆಲ್ಲವೂ ನಿಜವಾಗಿವೆ, ಎಂದು ನನಗೆ ಖಚಿತವಾಯಿತು.
೧. ವರ್ಷ ೧೯೮೭ ರಿಂದ ೧೯೯೧ (ಕರ್ಮಯೋಗ, ಸ್ಥೂಲ ದೇಹದಿಂದ ಸೇವೆ ಮಾಡಿದ್ದರಿಂದ ದೇಹಬುದ್ಧಿ ಕಡಿಮೆಯಾಗುವುದು)
ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾರವರು) ೧೯೮೭ ರಲ್ಲಿ ಗುರುಮಂತ್ರವನ್ನು ನೀಡಿದ ನಂತರ ನಿಜವಾದ ಅರ್ಥದಲ್ಲಿ ಸಾಧನೆಯ ಪ್ರಯತ್ನ ಪ್ರಾರಂಭಿಸಿದೆನು. ಆಗ ಎಲ್ಲ ಅನ್ನಸಂತರ್ಪಣೆಗಳಿಗೆ (ಧಾರ್ಮಿಕ ಉತ್ಸವಗಳು/ಅನ್ನದಾನ) ಹೋಗಿ ಅಲ್ಲಿ ದೈಹಿಕ ಸೇವೆ ಮಾಡುತ್ತಿದ್ದೆ, ಹಾಗೂ ಪ.ಪೂ. ಬಾಬಾರವರ ಜೊತೆಗೆ ಅನೇಕ ಬಾರಿ ಎಲ್ಲೆಡೆ ಪ್ರಯಾಣವನ್ನೂ ಮಾಡುತ್ತಿದ್ದೆ. ಆಗ ನಾನು ಮಾಡುತ್ತಿರುವ ಸೇವೆಯ ಫಲದ ಅಪೇಕ್ಷೆ ಇರಲಿಲ್ಲ; ಏಕೆಂದರೆ ಆಗ ಸೇವೆಯಿಂದಲೇ ಆನಂದ ಸಿಗುತ್ತಿತ್ತು.
೨. ವರ್ಷ ೧೯೯೨ ರಿಂದ ೨೦೦೮ (ಜ್ಞಾನಯೋಗ, ಅಧ್ಯಾತ್ಮದ ಅಭ್ಯಾಸ ಮಾಡಿದ್ದರಿಂದ ಬುದ್ಧಿ ಸಾತ್ತ್ವಿಕವಾಗುವುದು)
ವರ್ಷ ೧೯೯೨ ರಿಂದ ೨೦೦೮ (ಪ.ಪೂ. ಭಕ್ತರಾಜ ಮಹಾರಾಜರು ೧೯೯೫ ರಲ್ಲಿ ದೇಹತ್ಯಾಗ ಮಾಡಿದರು, ಆದರೂ ಅವರು ಸೂಕ್ಷ್ಮದಲ್ಲಿ ಕಲಿಸುತ್ತಿದ್ದರು.) ಈ ಅವಧಿಯಲ್ಲಿ ಪ.ಪೂ. ಬಾಬಾರವರಿಗೆ ಸಾವಿರಾರು ಪ್ರಶ್ನೆಗಳನ್ನು ಕೇಳಿ ಸಂದೇಹ ನಿವಾರಣೆ ಮಾಡಿಕೊಂಡೆ. 'ಪ.ಪೂ. ಭಕ್ತರಾಜ ಮಹಾರಾಜರ ಬೋಧನೆಗಳು ಎಂಬ ಗ್ರಂಥವು ಪ.ಪೂ. ಬಾಬಾರವರು ಕಲಿಸಿದ ಜ್ಞಾನದ ಮೇಲೆ ಆಧಾರಿತವಾಗಿದೆ. ಹಾಗೆ ಈ ಕಾಲಾವಧಿಯಲ್ಲಿ ಅನೇಕ ಗ್ರಂಥಗಳ ಅಭ್ಯಾಸ ಮಾಡಿದೆನು, ಅದರೊಂದಿಗೆ ಗ್ರಂಥಗಳಲ್ಲಿ ಇಲ್ಲದ ಅನೇಕ ವಿಷಯಗಳನ್ನು ಧ್ಯಾನದ ಮೂಲಕ ತಿಳಿದುಕೊಂಡೆನು.
೩. ವರ್ಷ ೨೦೦೯ ರಿಂದ ಇಂದಿನ ವರೆಗೆ (ಭಕ್ತಿಯೋಗ, ಮನಸ್ಸಿನಿಂದ ಭಕ್ತಿಗಾಗಿ ಪ್ರಯತ್ನ ಮಾಡಿದ್ದರಿಂದ ಮನಸ್ಸು ಸಾತ್ತ್ವಿಕವಾಗುವುದು ಮತ್ತು ಭಾವ ಜಾಗೃತವಾಗುವುದು)
ಪ.ಪೂ. ಭಕ್ತರಾಜ ಮಹಾರಾಜರ ಬಗ್ಗೆ ಅನಿಸುವ ಕೃತಜ್ಞತಾಭಾವವು ಪ.ಪೂ ದಾದಾಜಿ ವೈಶಂಪಾಯನ ಮತ್ತು ಗುರುದೇವ ಡಾ. ಕಾಟೇಸ್ವಾಮೀಜಿ ಈ ಇಬ್ಬರು ಸಂತರು ಮಾಡಿದ ಮತ್ತು ಇಂದಿಗೂ ಅವರು ಮಾಡುತ್ತಿರುವ ಸಹಾಯದಿಂದ ವ್ಯಾಪಕವಾಗಲು ಸಹಾಯವಾಯಿತು. ನನ್ನ ಹಿರಿಯ ಸಹೋದರ ಡಾ. ವಸಂತ ಆಠವಲೆ (ಈಗಿನ ಸದ್ಗುರು ಡಾ. ವಸಂತ ಆಠವಲೆ) ಅವರ 'ಭಕ್ತಿಯೋಗ' ಈ ವಿಷಯದ ಅಪ್ರಕಟಿತ ಗ್ರಂಥಗಳನ್ನು ಓದುವುದರಿಂದ ಆ ಪ್ರಕ್ರಿಯೆಗೆ ಮತ್ತಷ್ಟು ಪ್ರೊತ್ಸಾಹ ದೊರೆಯಿತು. ಇದರಿಂದಾಗಿ ಕರ್ಮಯೋಗ ಮತ್ತು ಜ್ಞಾನಯೋಗದ ಶುಷ್ಕತೆಯ ಅರಿವಾಗಿ ಭಕ್ತಿಯೋಗದ ಮೇಲೆ ಆಸಕ್ತಿ ಮೂಡಿತು. ಕರ್ಮಯೋಗ ಮತ್ತು ಜ್ಞಾನಯೋಗದ ಪ್ರಕಾರ ಸಾಧನೆ ಮಾಡುವುದಕ್ಕಿಂತ ಭಕ್ತಿಯೋಗದ ಪ್ರಕಾರ ಸಾಧನೆ ಮಾಡಿದಾಗ ಅತೀ ಹೆಚ್ಚಿನ ಪ್ರಮಾಣದಲ್ಲಿ ಮತ್ತು ವಿಭಿನ್ನ ರೀತಿಯ ಆನಂದವನ್ನು ಅನುಭವಿಸಬಹುದು, ಎನ್ನುವುದು ಗಮನಕ್ಕೆ ಬಂದಿತು. 'ನಾನು ಮೊದಲಿನಿಂದಲೂ ಭಕ್ತಿಯೋಗಕ್ಕನುಸಾರ ಮಾರ್ಗಕ್ರಮಣ ಮಾಡಬೇಕಾಗಿತ್ತು', ಹೀಗೂ ಅನಿಸತೊಡಗಿತು.
೪. ಈಗಿನ ವರೆಗೆ ಆದ ಪ್ರಯಾಣದ ಚಿಂತನೆ ಆಗ 'ಆಗಿದ್ದು ಒಳ್ಳೆಯದೇ ಆಯಿತು', ಎಂದು ಅನಿಸಿ ಮುಂದಿನ ವಿಷಯಗಳು ಗಮನಕ್ಕೆ ಬಂದವು.
ಅ. ಕರ್ಮಯೋಗ ಮತ್ತು ಜ್ಞಾನಯೋಗದ ಪ್ರಕಾರ ಸಾಧನೆ ಮಾಡದಿದ್ದರೆ, ಭಕ್ತಿಯೋಗದ ಮಹತ್ವವು ತಿಳಿಯುತ್ತಿರಲಿಲ್ಲ.
ಆ. ಸಮಷ್ಟಿ ಸಾಧನೆಗಾಗಿ, ಅಂದರೆ ಸಮಾಜದಲ್ಲಿ ಧರ್ಮಪ್ರಸಾರ ಮಾಡಲು ಮೂರೂ ಯೋಗಮಾರ್ಗಗಳ ಮಾಹಿತಿ ಇರುವುದು ಆವಶ್ಯಕವಾಗಿರುತ್ತದೆ. ನಾನು ಮಾಡಿದ ಮಾರ್ಗಕ್ರಮಣದಿಂದ ಅದು ಸಹಜವಾಗಿಯೇ ಆಯಿತು.
ಇ. ನಾನು ಮಾಡಿದ ಈ ಮಾರ್ಗಕ್ರಮಣವು ಗುರುಗಳ ಇಚ್ಛೆಯಿಂದಲೇ ಆಗಿದೆ; ಏಕೆಂದರೆ ಅವರು 'ಅಧ್ಯಾತ್ಮದ ಪ್ರಚಾರ ಮಾಡಿರಿ', ಎಂದು ಹೇಳಿದ್ದರು.
೫. ಮುಂದಿನ ಮಾರ್ಗಕ್ರಮಣ ಇದೂ ಕೂಡ ಗುರುಗಳ ಇಚ್ಛೆಯಂತೆಯೇ ಆಗುವುದು.
೬. ಗುರುಕೃಪಾಯೋಗದಂತೆ ಸಾಧನೆಯನ್ನು ಮಾಡುತ್ತಿರುವುದರಿಂದ ಕರ್ಮಯೋಗ, ಜ್ಞಾನಯೋಗ, ಮತ್ತು ಭಕ್ತಿಯೋಗ ಈ ಕ್ರಮದಲ್ಲಿ ಆದ ಸಾಧಕರ ಪ್ರಯಾಣ
ನನ್ನ ಪ್ರಯಾಣಕ್ಕನುಸಾರ ಸಾಧಕ ಪ್ರಯಾಣವೂ ಆಯಿತು ಮತ್ತು ಇನ್ನು ನಡೆದಿದೆ.
೬ ಅ. ಕರ್ಮಯೋಗ : ಅಧ್ಯಾತ್ಮದ ಪ್ರಚಾರ ಮಾಡುವುದು, ಸತ್ಸಂಗಗಳ ಆಯೋಜನೆ, ಗ್ರಂಥ ಪ್ರದರ್ಶನ, ದೇವಸ್ಥಾನಗಳ ಸ್ವಚ್ಛತೆ, ಇಂತಹ ವಿವಿಧ ಸೇವೆಗಳನ್ನು ಸಾಧಕರು ಅನೇಕ ವರ್ಷಗಳಿಂದ ಮಾಡುತ್ತಿದ್ದಾರೆ.
೬ ಆ. ಜ್ಞಾನಯೋಗ : ಅಧ್ಯಾತ್ಮ ವಿಷಯದ ಗ್ರಂಥಗಳ, ವಿಶೇಷವಾಗಿ ಸನಾತನ ಗ್ರಂಥಗಳ ಅಭ್ಯಾಸ ಮತ್ತು ಅದರಲ್ಲಿನ ಜ್ಞಾನವನ್ನು ಕೃತಿಯಲ್ಲಿ ತರುವುದು, ಇದು ಬಹುತಾಂಶ ಸಾಧಕರ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿದೆ.
೬ ಇ. ಭಕ್ತಿಯೋಗ : ವರ್ಷ ೨೦೦೯ ರಿಂದ ಅನೇಕ ಸಾಧಕರು ಭಾವಜಾಗೃತಿಯ ಪ್ರಯತ್ನ ಆರಂಭಿಸಿದ್ದಾರೆ. ವರ್ಷ ೨೦೧೦ ರಿಂದ ಅನೇಕ ಸಾಧಕರಿಗೆ ಭಾವಜಾಗೃತಿಯ ಹಾಗೂ ಶ್ರೀಕೃಷ್ಣನ ವಿವಿಧ ಅನುಭೂತಿಗಳು ಬರುತ್ತಿವೆ.
- ಡಾ. ಆಠವಲೆ (ಜೇಷ್ಠ ಶು. ೧೨, ಕಲಿಯುಗ ವರ್ಷ ೫೧೧೨ (೨೩.೬.೨೦೧೦))

