ಪುರುಷರ ಉಪಸ್ಥಿತಿಯಲ್ಲಿ ಮಹಿಳೆಯರ ಪ್ರದರ್ಶನ ಇಸ್ಲಾಂವಿರೋಧಿ ಎಂಬ ಅಭಿಪ್ರಾಯ
ತಿರುವನಂತಪುರಂ (ಕೇರಳಮ್) - ಕೇರಳಮ್‌ದ ಪ್ರಮುಖ ಸುನ್ನಿ ಮುಸ್ಲಿಂ ಸಂಘಟನೆ 'ಸಮಸ್ತ ಕೇರಳಮ್ ಜಮ-ಇಯ್ಯಾತುಲ ಉಲಾಮಾ' ಮುಸ್ಲಿಂ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಿಗೆ ಬರುವುದಕ್ಕೆ ನಿಷೇಧ ಹೇರಿದೆ.
ಈ ಸಂಘಟನೆಯ 'ಕಾಂತಾಪುರಂ' ಬಣವು ಹೊರಡಿಸಿದ ಹೇಳಿಕೆಯಲ್ಲಿ ಈ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ. ಮುಸ್ಲಿಂ ಹೆಣ್ಣುಮಕ್ಕಳು ಮತ್ತು ಮಹಿಳೆಯರು 'ಓಣಂ' ಹಬ್ಬವನ್ನು ಆಚರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಈ ನಿರ್ದೇಶನವನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆ ನಂತರ ಆಗಸ್ಟ ೨೬ ರಂದು ಆಯೋಜಿಸಲಾದ ಈದ-ಎ-ಮಿಲಾದ ಆಚರಣೆಯಲ್ಲೂ ಮುಸ್ಲಿಂ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಪಾಲ್ಗೊಂಡಿರುವುದು ಕಂಡುಬಂದಿತ್ತು. ಈ ಸಂಘಟನೆಯ ಪ್ರಕಾರ, ಮುಸ್ಲಿಂ ಮಹಿಳೆಯರು ಯಾವುದೇ ಕಾರ್ಯಕ್ರಮ ಅಥವಾ ಹಬ್ಬಗಳಲ್ಲಿ ಭಾಗವಹಿಸಬಾರದು; ಏಕೆಂದರೆ ಅಪರಿಚಿತ ಪುರುಷರ ಮುಂದೆ ಮಹಿಳೆಯರ ಇಂತಹ ಪ್ರದರ್ಶನವು 'ಇಸ್ಲಾಂವಿರೋಧಿ' ಕೃತ್ಯವಾಗಿದೆ.
೧. 'ಸಮಸ್ತಾ'ದ ಅಧ್ಯಕ್ಷ ಇ. ಸುಲೇಮಾನ ಮುಸಲಿಯಾರ ಮತ್ತು ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕರ ಮುಸಲಿಯಾರ ಹೊರಡಿಸಿದ ಹೇಳಿಕೆಯಲ್ಲಿ, ಸುನ್ನಿ ಧರ್ಮಗುರುಗಳು ಮಸೀದಿ, ಮದರಸಾ ಮತ್ತು ಇತರ ಇಸ್ಲಾಮಿಕ ಸಂಸ್ಥೆಗಳ ಮುಖ್ಯಸ್ಥರಿಗೆ ಮುಸ್ಲಿಂ ಹೆಣ್ಣುಮಕ್ಕಳು ಹಾಗೂ ಮಹಿಳೆಯರು ವೇದಿಕೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪುರುಷರ ಉಪಸ್ಥಿತಿಯಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಲ್ಲಿ ಅಥವಾ ಹಬ್ಬಗಳಲ್ಲಿ ಭಾಗವಹಿಸಲು ಬಿಡಬಾರದು ಎಂದು ನಿರ್ದೇಶನ ನೀಡಿದ್ದಾರೆ.
೨. ಈ ಹೇಳಿಕೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವೇದಿಕೆಗಳಲ್ಲಿ ಅಪರಿಚಿತ ಪುರುಷರ ಉಪಸ್ಥಿತಿಯಲ್ಲಿ ಯುವತಿಯರ ಪ್ರದರ್ಶನ, ಹಾಗೆಯೇ ಇಸ್ಲಾಂಗೆ ಅನುಗುಣವಾಗಿರದ ಆಚರಣೆಗಳು ಮತ್ತು ಹಬ್ಬದ ಪದ್ಧತಿಗಳನ್ನು ಸ್ವೀಕರಿಸುವುದು ಶ್ರದ್ಧಾವಂತ ಮುಸ್ಲಿಮರಿಗೆ ಸೂಕ್ತವಲ್ಲ ಮತ್ತು ಇದಕ್ಕೆ ಅನುಮತಿ ನೀಡಬಾರದು ಎಂದು ಒತ್ತು ನೀಡಿ ಹೇಳಲಾಗಿದೆ. ಎಲ್ಲಾ ಕಾರ್ಯಕ್ರಮಗಳು ಧರ್ಮದ ಮೌಲ್ಯಗಳು, ಶಿಸ್ತು ಮತ್ತು ನೈತಿಕ ಮಾನದಂಡಗಳಿಗೆ ಅನುಗುಣವಾಗಿಯೇ ಆಯೋಜನೆಯಾಗುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಮಸೀದಿ ಹಾಗೂ ಮದರಸಾ ಕಮಿಟಿಗಳದ್ದಾಗಿದೆ. ಈ ಕಮಿಟಿಗಳು ಮುಸ್ಲಿಂ ಯುವ ಪೀಳಿಗೆಗೆ ನೈತಿಕ ಮಾರ್ಗದರ್ಶನ ನೀಡಬೇಕು ಎಂದೂ ಕರೆ ನೀಡಲಾಗಿದೆ.

