Dailyhunt Logo
  • Light mode
    Follow system
    Dark mode
    • Play Story
    • App Story
ಕೌಟುಂಬಿಕ ಸಮಾರಂಭಗಳ ಮಹತ್ವ !

ಕೌಟುಂಬಿಕ ಸಮಾರಂಭಗಳ ಮಹತ್ವ !

ವಿವಾಹ ಅಥವಾ ಇತರ ಕೌಟುಂಬಿಕ ಸಮಾರಂಭಗಳು ಸಮಾಜದೊಂದಿಗೆ ಆಚರಿಸಲಾಗುವ ಕೌಟುಂಬಿಕ ಹಾಗೆಯೇ ವೈಯಕ್ತಿಕ ಪ್ರಗತಿಯನ್ನು ಸಾಧಿಸಲು ಇರುವ ಉತ್ತಮ ವೇದಿಕೆಗಳಾಗಿವೆ. ಅವುಗಳಿಂದ ಎಲ್ಲರೂ ಸೇರಬೇಕು, ತಮ್ಮ ಪರಿಚಯವಾಗಬೇಕು, ಇತರರ ಪರಿಚಯ ಮಾಡಿಕೊಂಡು ಅದರಿಂದ ಕಲಿಯಬೇಕು, ಇತರರಿಗೆ ನಾವು ಏನು ಸಹಾಯ ಮಾಡಬಹುದು ?

ಅಥವಾ ಯಾರಿಂದ ಯಾವ ಸಹಾಯ ಪಡೆಯಬಹುದು ? ಎಂಬುದರ ಅಧ್ಯಯನ ಮಾಡಬೇಕು. ಇಂತಹ ಸಮಾರಂಭಗಳಿಂದ ಜನರನ್ನು ಪ್ರೀತಿಯಿಂದ ಸ್ನೇಹವನ್ನು ಬೆಳೆಸಲು ಸಾಧ್ಯವಾಗುತ್ತದೆ. ಅವರೊಂದಿಗೆ ವೈಚಾರಿಕ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಯಾವುದಾದರೊಂದು ದೊಡ್ಡ ಮಟ್ಟದ ಕಾರ್ಯಗಳು ಅಥವಾ ಸಂಘಟನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ; ಆದರೆ ಪ್ರಸ್ತುತ ಅನೇಕ ಬಾರಿ ಯುವ ಪೀಳಿಗೆಗೆ ನಾನು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಏಕೆ ಹೋಗಬೇಕು ? ಎಂಬ ಪ್ರಶ್ನೆ ಬರುತ್ತದೆ. 'ಸಂಬಂಧಿಕರು ಒಂದು ವೇಳೆ ನನಗೆ ಏನಾದರು ಪ್ರಶ್ನೆ ಕೇಳಿದರೆ, ಅದಕ್ಕೆ ಏನು ಉತ್ತರ ನೀಡಬೇಕು ?', ಎಂಬ ಕಿಳರಿಮೆಯು ಅವರಲ್ಲಿರುತ್ತದೆ. ಆದ್ದರಿಂದ ಅನೇಕ ಯುವಕರು ಅದರಲ್ಲಿ ಭಾಗವಹಿಸಲು ತಪ್ಪಿಸುತ್ತಾರೆ.

ಪ್ರಸ್ತುತ ವಿವಾಹ ಸಮಾರಂಭಗಳಲ್ಲಿ ಸಂಬಂಧಿಕರು ಒಟ್ಟಿಗೆ ಸೇರುವ ಮತ್ತು ಪರಸ್ಪರರಲ್ಲಿ ಸಹಾಯ ಮಾಡುವ ಉದ್ದೇಶವು ಎಲ್ಲೋ ಕಳೆದು ಹೋಗಿರುವಂತೆ ಭಾಸವಾಗುತ್ತಿದೆ. ಇಂದು ವಿವಾಹ ಎಂಬುದು ಒಂದು ರೀತಿಯ ಶಕ್ತಿ ಪ್ರದರ್ಶನದ ಕೇಂದ್ರವಾಗುತ್ತಿದೆ. ಅದರಲ್ಲಿ ನಾವು ಎಷ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದೇವೆ ಎಂದು ತೋರಿಸಿಕೊಳ್ಳುವ ಹಂಬಲ ಹೆಚ್ಚಾಗಿದೆ. ದೊಡ್ಡ ಸದ್ದಿನ 'ಡಿಜೆ', 'ಮೆಹಂದಿ', 'ಸಂಗೀತ', 'ಅರಿಶಿಣ ಶಾಸ್ತ್ರ' ಮತ್ತು 'ವಿವಾಹ' - ಈ ಪ್ರಕ್ರಿಯೆಗಳು ಅತೀ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾ ಹೋಗಿವೆ. ಅದರಲ್ಲಿ ಸರಳತೆ ಮಾಯವಾಗಿದೆ. ಪಾಶ್ಚಾತ್ಯ ಪದ್ಧತಿಗಳ ಆಕ್ರಮಣಗಳು ಹೆಚ್ಚಾಗಿವೆ. ಧಾರ್ಮಿಕ ವಿಧಿಗಳ ಮಹತ್ವವು ಮರೆಯಾಗಿರುವುದರಿಂದ ಮತ್ತು ಮನೋರಂಜನೆ ಹೆಚ್ಚಾಗಿರುವುದರಿಂದ ವಿವಾಹ ಸಮಾರಂಭಗಳಲ್ಲಿ ನಾವು ಹೋದಾಗ ನಮ್ಮ ವೃತ್ತಿ ಅಂತರ್ಮುಖವಾಗದೇ ಬಹಿರ್ಮುಖವಾಗುತ್ತದೆ. ಅಲ್ಲಿ ಪ್ರೀತಿ, ಆತ್ಮೀಯತೆಯಿಂದ ವಿಚಾರಿಸಿಕೊಳ್ಳುವ ಬದಲು ಸಂಬಂಧಿಕರಲ್ಲಿ ದ್ವೇಷ, ಸ್ಪರ್ಧೆ, ಇವು ಕಂಡುಬರುತ್ತವೆ. ಇದರಿಂದಾಗಿ ಕೆಲವರು ಸಮಾರಂಭಗಳಲ್ಲಿ ಭಾಗವಹಿಸಲು ತಪ್ಪಿಸುತ್ತಾರೆ.

ವಿವಾಹ ಸಮಾರಂಭಗಳೊಂದಿಗೆ ಇತರ ಕೌಟುಂಬಿಕ ಸಮಾರಂಭಗಳು ಆದರ್ಶಪ್ರಾಯವಾಗಲು ಅವುಗಳಲ್ಲಿ ಸಾಮಾಜಿಕ ದೃಷ್ಟಿಕೋನವನ್ನು ಹೇಗೆ ಇಟ್ಟುಕೊಳ್ಳಬಹುದು ? ಎಂಬುದನ್ನು ಗಮನಿಸಬೇಕು. ವಿವಾಹ ಸಮಾರಂಭ ಎಂದರೆ ಒಂದೇ ರೀತಿಯ ಹಾಗೂ ವಿಭಿನ್ನ ವಿಚಾರಗಳ ಜನರು ಒಂದೆಡೆ ಸೇರುತ್ತಾರೆ. ಅದನ್ನು ಉತ್ತಮ ವಿಚಾರಗಳ ವಿನಿಮಯಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಯುವ ಪೀಳಿಗೆಯನ್ನು ಆತ್ಮೀಯತೆಯಿಂದ ವಿಚಾರಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಯಾವ ಸಮಸ್ಯೆಗಳಿವೆ ? ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರೊಂದಿಗೆ ಸಂವಾದ ನಡೆಸುವುದು ಆವಶ್ಯಕವಾಗಿದೆ.

ಹಲವಾರು ಯುವಕರು ವೈಚಾರಿಕ ಸಂಘರ್ಷದ ಹಂತದಲ್ಲಿ ಇರುತ್ತಾರೆ, ಅವರಿಗೆ ಸರಿಯಾದ ವೈಚಾರಿಕ ದಿಕ್ಕನ್ನು ತೋರಿಸುವುದು; ಕೆಲವರಿಗೆ ತಮ್ಮ ಉದ್ಯೋಗದಲ್ಲಿ ತೊಂದರೆಗಳಿರುತ್ತವೆ; ಇನ್ನು ಕೆಲವರಿಗೆ ಇತ್ತೀಚೆಗಷ್ಟೇ ಮದುವೆಯಾಗಿರುತ್ತದೆ, ಅವರಿಗೆ ಕುಟುಂಬದೊಂದಿಗೆ ಹೇಗೆ ಹೊಂದಿಕೊಳ್ಳಬೇಕು ? ಎಂಬ ಸಮಸ್ಯೆ ಇರುತ್ತದೆ. ಈ ವಿಷಯಗಳನ್ನು ಅರ್ಥ ಮಾಡಿಕೊಂಡು ಹಿರಿಯರು ಮತ್ತು ಅನುಭವಸ್ಥರು ಅವರಿಗೆ ಸಹಾಯ ಮಾಡುವುದು ಮುಂತಾದ ಅನೇಕ ವಿಷಯಗಳ ಬಗ್ಗೆ ಸಂವಾದಗಳು ನಡೆಯಬಹುದು. ಅಲ್ಲಿ ರಾಷ್ಟ್ರದ ಮುಂದಿರುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಬಹುದು. ವಿವಾಹ ಸಮಾರಂಭಗಳನ್ನು ಮಾಡುವುದರ ಹಿಂದೆ ಕೇವಲ ಮೋಜು-ಮಸ್ತಿ ಮಾಡುವುದು ಮಾತ್ರ ಉದ್ದೇಶವಾಗಿರದೆ, ಸಮಾಜವು ಒಂದಾಗಿ ಸಂಘಟಿತ ಭಾವನೆಯಿಂದ ಹೇಗೆ ಪ್ರಯತ್ನಿಸಬಹುದು ? ಎಂಬ ವಿಚಾರ ಮಾಡುವ ಕೇಂದ್ರವಾಗಬೇಕು, ಆಗ ಅದು ದುಗ್ಧಶರ್ಕರಾ ಯೋಗ (ಹಾಲಿನಲ್ಲಿ ಸಕ್ಕರೆ ಬೆರೆತಂತೆ) ಆಗುತ್ತದೆ !

- ಶ್ರೀ. ಜಯೇಶ ಬೊರಸೆ, ಪುಣೆ

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada