ಸೌದಿ ಅರೇಬಿಯಾದಿಂದ ಕಟ್ಟರವಾದಿಯಾಗಿ ಮರಳಿದ ಉಗ್ರನಿಂದ ಜಿಹಾದಿ ಗ್ಯಾಂಗ್ ರಚನೆ
ಬೆಂಗಳೂರು - ಇಲ್ಲಿನ ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯವು 'ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್' ಭಯೋತ್ಪಾದಕ ಸಂಘಟನೆಯ ಉಗ್ರ ಹಮ್ರಾಜ್ ಶೇಖ್‌ಗೆ ೭ ವರ್ಷಗಳ ಜೈಲು ಶಿಕ್ಷೆ ಮತ್ತು ೬೩,೦೦೦ ರೂಪಾಯಿ ದಂಡ ವಿಧಿಸಿದೆ.
ಹಮ್ರಾಜ್ ಶೇಖ್ ಮೂಲತಃ ಮಹಾರಾಷ್ಟ್ರದ ನಿವಾಸಿಯಾಗಿದ್ದಾನೆ. ತನಿಖಾ ಸಂಸ್ಥೆಯು ಅಕ್ಟೋಬರ್ ೨೦೨೩ ರಲ್ಲಿ ಆತನ ಸಹಚರ ಮೊಹಮ್ಮದ್ ಆರಿಫ್ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಸದ್ಯ ಆತನ ಮೇಲಿನ ಪ್ರಕರಣದ ವಿಚಾರಣೆ ನಡೆಯುತ್ತಿದೆ.
೧. ಹಮ್ರಾಜ್ ಶೇಖ್ ೨೦೧೯ ರಿಂದ ೨೦೨೨ ರ ಅವಧಿಯಲ್ಲಿ ಸೌದಿ ಅರೇಬಿಯಾದಲ್ಲಿ ವಾಸವಾಗಿದ್ದಾಗ ತಾಲಿಬಾನ್ ಮತ್ತು 'ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್' ಸಂಘಟನೆಗಳ ಸಂಪರ್ಕಕ್ಕೆ ಬಂದಿದ್ದನು ಮತ್ತು ಆತ ಕಟ್ಟರವಾದಿಯಾದನು. ಆತ ಮತ್ತೊಬ್ಬ ಉಗ್ರ ಮೊಹಮ್ಮದ್ ಆರಿಫ್ ಜೊತೆಗೂಡಿ 'ಜಿಹಾದಿ ಗ್ಯಾಂಗ್' ಒಂದನ್ನು ರಚಿಸಿದ್ದನು. ಈ ಗ್ಯಾಂಗ್ ಮೂಲಕ ಭಾರತದ ಮುಸ್ಲಿಂ ಯುವಕರ ಬ್ರೇನ್‌ವಾಶ್ ಮಾಡಿ ಅವರನ್ನು ಕಟ್ಟರವಾದಿಗಳನ್ನಾಗಿ ಮಾಡಲಾಗುತ್ತಿತ್ತು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಇವರು ಆನ್‌ಲೈನ್ ಜಿಹಾದಿ ನೇಮಕಾತಿ ಜಾಲವನ್ನು ಸೃಷ್ಟಿಸಿದ್ದರು.
೨. ಈ ಉಗ್ರರು ಮುಸ್ಲಿಂ ಯುವಕರನ್ನು ನೇಮಕ ಮಾಡಿಕೊಳ್ಳುವುದು, ಅವರನ್ನು ಭಯೋತ್ಪಾದನಾ ತರಬೇತಿಗಾಗಿ ಅಫ್ಘಾನಿಸ್ತಾನಕ್ಕೆ ಕಳುಹಿಸುವುದು, ಕಟ್ಟರವಾದಿ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸುವುದು ಮತ್ತು ಭಾರತದ ವಿರುದ್ಧ ಜಿಹಾದ್ ಸಾರುವ ಯೋಜನೆಯನ್ನು ರೂಪಿಸಿದ್ದರು. ಇವರಿಬ್ಬರೂ ಅಫ್ಘಾನಿಸ್ತಾನದಲ್ಲಿ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ ಸಂಘಟನೆಯನ್ನು ಸೇರುವ ಯೋಜನೆಯೊಂದಿಗೆ ಭಯೋತ್ಪಾದಕ ಗ್ಯಾಂಗ್ ಕೂಡ ಸ್ಥಾಪಿಸಿದ್ದರು.

