Dailyhunt Logo
  • Light mode
    Follow system
    Dark mode
    • Play Story
    • App Story
ಮಹಿಳೆಯರು ಚಿನ್ನದಂತಿರುವುದರಿಂದ ಅವರನ್ನು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಬಿಡಬಾರದು! - ಭಾರತದ ಗ್ರ್ಯಾಂಡ್ ಮುಫ್ತಿ ಅಬೂಬಕರ್ ಮುಸಲಿಯಾರ್

ಮಹಿಳೆಯರು ಚಿನ್ನದಂತಿರುವುದರಿಂದ ಅವರನ್ನು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಬಿಡಬಾರದು! - ಭಾರತದ ಗ್ರ್ಯಾಂಡ್ ಮುಫ್ತಿ ಅಬೂಬಕರ್ ಮುಸಲಿಯಾರ್

(ಗ್ರ್ಯಾಂಡ್ ಮುಫ್ತಿ ಎಂದರೆ ಶರಿಯತ್ ಕಾಯ್ದೆಯನ್ವಯ ನ್ಯಾಯ ನಿರ್ಣಯ ನೀಡುವ ಅತ್ಯುನ್ನತ ವ್ಯಕ್ತಿ)

ಕೊಚ್ಚಿ (ಕೇರಳ) - ಮಹಿಳೆಯರು ಚಿನ್ನದಂತಿದ್ದಾರೆ, ಅವರನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಅವರನ್ನು ಹೊರಗೆ ಹೋಗಲು ಬಿಡಬಾರದು. ಮಹಿಳೆಯರನ್ನು ಸಾರ್ವಜನಿಕ ಜೀವನಕ್ಕೆ ತರುವುದರಿಂದ ಅವರಿಗೆ ಅಪಮಾನವಾಗಬಹುದು.

ಡಬ್ಬಿಯಲ್ಲಿ ಸುರಕ್ಷಿತವಾಗಿಟ್ಟ ಹಾರವು ತನ್ನ ಸೌಂದರ್ಯವನ್ನು ಕಾಯ್ದುಕೊಳ್ಳುತ್ತದೆ; ಆದರೆ ರಸ್ತೆಬದಿಯಲ್ಲಿ ಬಿದ್ದಿರುವ ಹಾರವನ್ನು ಪ್ರತಿಯೊಬ್ಬರೂ ಸ್ಪರ್ಶಿಸುತ್ತಾರೆ. ಇದರಿಂದಾಗಿ ಅದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಪವಿತ್ರ ಕುರಾನ್ ನಲ್ಲಿ 'ಮಹಿಳೆಯರು ತಮ್ಮ ಮನೆಯೊಳಗೇ ಇರಬೇಕು ಮತ್ತು ಸಾರ್ವಜನಿಕವಾಗಿ ಹೊರಗೆ ಬರಬಾರದೆಂದು' ಹೇಳಲಾಗಿದೆ. ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಿಗೆ ಹೋಗಲು ಅನುಮತಿ ನೀಡುವುದರಿಂದ ಗಂಭೀರ ಪರಿಣಾಮಗಳಾಗಬಹುದೆಂದು ಭಾರತದ ಗ್ರ್ಯಾಂಡ್ ಮುಫ್ತಿ ಮತ್ತು 'ಸಮಸ್ತ ಕೇರಳಂ ಜಮೀಯತುಲ್ ಉಲಮಾ (ಕಾಂತಾಪುರಮ್)' ಅಧ್ಯಕ್ಷರಾದ ಕಾಂತಪುರಮ್ ಎ.ಪಿ. ಅಬೂಬಕರ್ ಮುಸಲಿಯಾರ್ ಹೇಳಿದ್ದಾರೆ. ಈ ಹೇಳಿಕೆಯ ಕುರಿತು ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಕೆಲವರು ಇದನ್ನು ಬೆಂಬಲಿಸಿದ್ದಾರೆ. ಕೇರಳ ಸರಕಾರದಲ್ಲಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಹಾಗೂ ಸಚಿವರಾದ ಎನ್. ಶಂಸುದ್ದೀನ್ ಮತ್ತು ಕೆ.ಎಮ್. ಶಾಜಿ ಸೇರಿದಂತೆ ಇತರರು ಈ ಹೇಳಿಕೆಯ ಬಗ್ಗೆ ಮೌನ ವಹಿಸಿದ್ದಾರೆ.

ಅಬೂಬಕರ್ ಸರಕಾರದ ಕೈಗೊಂಬೆ ಮತ್ತು ಸಂಬಳ ಪಡೆಯುವ ನೌಕರ! - ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಟೀಕೆ

ಮುಫ್ತಿ ಅವರ ಹೇಳಿಕೆಯ ಬಗ್ಗೆ ಉತ್ತರ ಪ್ರದೇಶದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ಪ್ರತಿಕ್ರಿಯಿಸಿದ್ದು, ಇಸ್ಲಾಂ ಧರ್ಮದ ವಿದ್ವಾಂಸರಲ್ಲದ ಮತ್ತು ಇಸ್ಲಾಂ ಬಗ್ಗೆ ಅರಿವಿಲ್ಲದ ವ್ಯಕ್ತಿ ಕೇವಲ ಗಡ್ಡ ಬಿಡುವುದರಿಂದ ಅಥವಾ ಟೋಪಿ ಧರಿಸುವುದರಿಂದ 'ಇಸ್ಲಾಮಿಕ್ ವಿದ್ವಾಂಸ'ನಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಬೂಬಕರ್ ನಕಲಿ ವ್ಯಕ್ತಿ, ಸರಕಾರದಿಂದ ಪ್ರಾಯೋಜಿತರಾದವರು, ಅವರನ್ನು ಇತ್ತೀಚೆಗೆ ಸುದ್ದಿವಾಹಿನಿಗಳ ಚರ್ಚೆಗೆ ಸಂಬಳ ನೀಡಿ ಕಳುಹಿಸಲಾಗುತ್ತದೆ. ಅವರ ಮುಖಭಾವದಿಂದಲೇ ಅವರು ಇಸ್ಲಾಮಿಕ್ ವಿದ್ವಾಂಸರಲ್ಲ ಎಂಬುದು ತಿಳಿಯುತ್ತದೆ. ಅವರು ಸರಕಾರದ ಕೈಗೊಂಬೆ ಮತ್ತು ಸಂಬಳ ಪಡೆಯುವ ಸಿಬ್ಬಂದಿಯಾಗಿದ್ದಾರೆ.

ಕೇರಳಮ್ ಮುಸ್ಲಿಂ ಜಮಾತ್ ನಿಂದ ಅಬೂಬಕರ್ ಗೆ ಬೆಂಬಲ

'ಕೇರಳ ಮುಸ್ಲಿಂ ಜಮಾತ್' ಹೇಳುವ ಪ್ರಕಾರ, ಮುಫ್ತಿಯವರ ಸಲಹೆಯು ಇಸ್ಲಾಮಿಕ್ ತತ್ವಗಳನ್ನು ಆಧರಿಸಿದೆ ಮತ್ತು ಇದು ಇಸ್ಲಾಮಿಕ್ ಮೌಲ್ಯಗಳನ್ನು ಅನುಸರಿಸಲು ಬಯಸುವವರಿಗಾಗಿ ಮಾತ್ರ ನೀಡಲಾಗಿದೆ. ಅವರ ನಿಲುವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಮತ್ತು ವಿವಾದಾಸ್ಪದಗೊಳಿಸಲಾಗುತ್ತಿದೆ.

ಮೌಲಾನಾ ಶಹಾಬುದ್ದೀನ್ ರಜವಿ ಬರೇಲವಿ ಅವರ ಸಮರ್ಥನೆ

ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ (ಇಸ್ಲಾಂ ಅಧ್ಯಯನಕಾರ) ಶಹಾಬುದ್ದೀನ್ ರಜವಿ ಬರೇಲವಿ ಅವರು ಅಬೂಬಕರ್ ಅವರ ಹೇಳಿಕೆಯನ್ನು ಸಮರ್ಥಿಸುತ್ತಾ, ಮಹಿಳೆಯರ ಗೌರವ ಮತ್ತು ಘನತೆಯು ಮನೆಯೊಳಗಿದ್ದಾಗ ಮಾತ್ರ ಅತ್ಯುತ್ತಮವಾಗಿ ಸುರಕ್ಷಿತವಾಗಿರುತ್ತದೆ. ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸಿ ಕಚೇರಿಗಳಲ್ಲಿ ಕೆಲಸ ಮಾಡುವುದನ್ನು ಶರಿಯತ್ ತಡೆಯುವುದಿಲ್ಲ ಎಂದು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada