ಅನೇಕ ಪೋಷಕರು ನಮ್ಮ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರುತ್ತಿರುತ್ತಾರೆ. 'ಕೋವಿಡ್' ಸಾಂಕ್ರಾಮಿಕದ ನಂತರ ಈ ದೂರುಗಳು ಬಹಳಷ್ಟು ಹೆಚ್ಚಾಗಿವೆ. ಇದಕ್ಕೆ ಅನೇಕ ಕಾರಣಗಳೂ ಇವೆ. ಚಿಕಿತ್ಸೆ ಎಂದು ಇವುಗಳಲ್ಲಿ ಆಯುರ್ವೇದವು ಉತ್ತಮ ಕೆಲಸ ಮಾಡುತ್ತಲೇ ಇದೆ; ಆದರೆ ಮುನ್ನೆಚ್ಚರಿಕೆಗಾಗಿ ಕೆಲವು ಮಹತ್ವದ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.
೧. ನಿಮ್ಮ ಮಗು ಅನಾರೋಗ್ಯದಲ್ಲಿದ್ದರೆ ಅವನು ಗುಣಮುಖ ವಾಗುವವರೆಗೂ ಅವನನ್ನು ಶಾಲೆಗೆ ಕಳುಹಿಸಬೇಡಿ. ಇದರಿಂದ ಇತರರಿಗೆ ಸೊಂಕು ಹರಡುವುದನ್ನು ತಡೆಯಬಹುದು.
೨. ಇತರ ಗಂಡು-ಹೆಣ್ಣು ಮಕ್ಕಳಿಂದ ಯೋಗ್ಯ ಅಂತರವನ್ನು ಕಾಯ್ದುಕೊಳ್ಳುವ ಅಭ್ಯಾಸವನ್ನು ನಿಮ್ಮ ಮಗುವಿಗೆ ರೂಢಿಸಿ : ಇತರ ಯಾರನ್ನಾದರೂ ಸ್ಪರ್ಶಿಸಿದ ನಂತರ ವಿಶೇಷವಾಗಿ ಹಸ್ತಲಾಘವ ಮಾಡಿದ ನಂತರ - ತಮ್ಮ ಕಣ್ಣು ಅಥವಾ ಮೂಗನ್ನು ಮುಟ್ಟಿಕೊಳ್ಳುವುದು ಹೆಚ್ಚಿನವರಲ್ಲಿ ಕಂಡುಬರುವ ಒಂದು ಸಹಜ ಕ್ರಿಯೆಯಾಗಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಇತರರಿಂದ ಮೊದಲೇ ಯೋಗ್ಯ ಅಂತರವನ್ನು ಕಾಯ್ದುಕೊಂಡರೆ, ಅವರಿಗೆ ಯಾವುದಾದರೂ ಶೀತ, ಕೆಮ್ಮಿನ ಸೋಂಕಿದ್ದರೆ ಅದರಿಂದ ರಕ್ಷಣೆ ಪಡೆಯಬಹುದು; ಅಷ್ಟೇ ಅಲ್ಲದೆ, ಪ್ರಸ್ತುತ ಮಕ್ಕಳಿಗೆ 'ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ'ಗಳ ಬಗ್ಗೆ ಶಿಕ್ಷಣ ನೀಡುತ್ತಿರುವ ಈ ಸಮಯದಲ್ಲಿ, ಶಾಲೆಯಲ್ಲಿಯೂ ಯೋಗ್ಯ ಅಂತರ ಕಾಪಾಡಿಕೊಳ್ಳುವ ತರಬೇತಿ ನೀಡಲಾಗುತ್ತಿರುವುದರಿಂದ ಅಲ್ಲಿಯೂ ಪ್ರಯೋಜನವಾಗುತ್ತದೆ.

೩. ತಮ್ಮ 'ಗಟ್ ಮೈಕ್ರೋಬಾಯೋಮ್' (ಕರುಳಿನ ಸೂಕ್ಷ್ಮಜೀವ ಸಮೂಹ) ಉತ್ತಮವಾಗಿದ್ದರೆ ನಾವು ಸೋಂಕುಗಳಿಗೆ ಸಹಜ ವಾಗಿ ತುತ್ತಾಗುವುದಿಲ್ಲ. ಆಯುರ್ವೇದಕ್ಕನುಸಾರ ಅಗ್ನಿಯನ್ನು ಉತ್ತಮವಾಗಿ ಕಾಪಾಡುವುದರಿಂದ ಅನೇಕ ವ್ಯಾಧಿಗಳು ದೂರ ವಾಗುತ್ತವೆ. ಅದಕ್ಕಾಗಿ ಮನೆಯ ತಾಜಾ ಆಹಾರಕ್ಕೆ ಒತ್ತು ನೀಡುವುದು, ವಿಶೇಷವಾಗಿ ಕೃತಕ ಬಣ್ಣಗಳು, 'ಪಿಸರ್ವೇಟಿವ್' (ಪದಾರ್ಥಗಳನ್ನು ಸುರಕ್ಷಿತವಾಗಿಡುವ ದ್ರವ್ಯ/ಪದಾರ್ಥಗಳು) ಹಾಕಿದ 'ಪ್ಯಾಕೆಟ್'ಬಂದ್ (ಚೀಲಬಂದ್) ಪದಾರ್ಥಗಳು, ಚಾಕಲೇಟ್ ಸೇವಿಸದಿರುವುದು ಅತ್ಯಂತ ಮಹತ್ವದ್ದಾಗಿದೆ.
೪. ನಿಮ್ಮ ಮಗುವಿಗೆ ಸಾಕಷ್ಟು ನಿದ್ರೆ ಸಿಗುತ್ತದೆಯೇ, ಎಂಬುದರ ಕಡೆಗೆ ಸರಿಯಾಗಿ ಗಮನಿಸಿ. ನಿದ್ರೆ ಸರಿಯಾಗಿ ಆಗದಿದ್ದರೆ ರೋಗನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಪದೇ ಪದೇ ಜಂತು ಹುಳುಗಳಾಗುವ ಲಕ್ಷಣವಿದ್ದರೂ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ವೈದ್ಯರ ಸಲಹೆಯಿಂದ ಯೋಗ್ಯ ಪರಿಹಾರೋಪಾಯಗಳನ್ನು ಮಾಡಿ.
೫. ನಿಯಮಿತ ವ್ಯಾಯಾಮ, ದೈಹಿಕ ಚಟುವಟಿಕೆಗಳಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳ 'ಸ್ಕ್ರೀನಟೈಮ್ಸ್'ಕಡೆಗೆ (ಮೊಬೈಲ್ ನೋಡುವುದರ ಕಡೆಗೆ) ಗಮನ ಕೊಡಬೇಕು. ಅದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಅವರಿಗೆ ಮೈದಾನದ ಆಟಗಳನ್ನು ಆಡಲು ಹೇಳಬೇಕು.
೬. ನಿಮ್ಮ ಮಗು ಮೂಗಿನಿಂದಲೇ ಉಸಿರಾಡುತ್ತದೆಯಲ್ಲ, ಎಂಬುದನ್ನು ಗಮನಿಸಿ. ಬಾಯಿಯಿಂದ ಉಸಿರಾಡುತ್ತಿದ್ದರೆ ಸೊಂಕಿನ ಸಾಧ್ಯತೆಯು ಅನೇಕ ಪಟ್ಟು ಹೆಚ್ಚಾಗುತ್ತದೆ. 'ಟಾನ್ಸಿಲ್ಸ್' ಬಾವು ಅಥವಾ 'ಅಡೆನೈಡ್ಸ್'ಗಳಂತಹ ತೊಂದರೆಗಳಿಂದ ಮಕ್ಕಳು ತಿಳಿಯದೇ ಬಾಯಿಯಿಂದ ಉಸಿರಾಡುತ್ತಾರೆ. ಈ ಎರಡೂ ತೊಂದರೆಗಳನ್ನು ಆಯುರ್ವೇದದ ಚಿಕಿತ್ಸೆಯಿಂದ ಉತ್ತಮ ರೀತಿಯಲ್ಲಿ ನಿಯಂತ್ರಿಸಬಹುದು. ಮೂಗಿನಿಂದ ಉಸಿರಾಡುತ್ತಿದ್ದರೆ ಮೂಲತಃ ಸೋಂಕನ್ನು ತಡೆಯುತ್ತದೆ.
೭. 'ಆಂಟಿಬಯೋಟಿಕ್ಸ್' (ಪ್ರತಿಜೀವಕಗಳು)ಗಳ ಅತಿಯಾದ ಬಳಕೆಯಿಂದ 'ಗಟ್ ಮೈಕ್ರೋಬಾಯೋಮ್'ಗೆ ಹಾನಿ ತಲುಪುತ್ತದೆ. 'ಶುದ್ಧ ಆಯುರ್ವೇದದಿಂದ ಚಿಕಿತ್ಸೆ ಪಡೆದು ಚಿಕ್ಕ ಮಕ್ಕಳಲ್ಲಿ 'ಆಂಟಿಬಯೋಟಿಕ್ಸ್'ನ ಬಳಕೆ ಯನ್ನು ಬಹುತೇಕವಾಗಿ ಸಂಪೂರ್ಣವಾಗಿ ನಿಲ್ಲಿಸಬಹುದು. ಇದೇ ವಿಷಯವು ಉಸಿರಾಟದ ಪಂಪ್ ಮತ್ತು ಕೆಲವು ಇಂಜೆಕ್ಶನ್‌ಗಳಿಗೂ ಅನ್ವಯಿಸುತ್ತದೆ. ಎಂಬುದು ಗಮನದಲ್ಲಿಡಿ.
೮. ನಿಯಮಿತ ರಸಾಯನ ಸೇವನೆ. ಇದರಲ್ಲಿ ಸುವರ್ಣ ಪ್ರಾಶನದಿಂದ ಹಿಡಿದು ಆಯಾ ಮಗುವಿಗಾಗಿ, ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಸಿದ್ಧಪಡಿಸಲಾದ ರಸಾಯನಗಳು ಒಳಗೊಂಡಿರುತ್ತವೆ. ನೆನಪಿರಲಿ, ಸುವರ್ಣಪ್ರಾಶನವು ತಿಂಗಳಿಗೊಮ್ಮೆ ಮಾಡುವ ಉಪಕ್ರಮವಲ್ಲ, ಬದಲಿಗೆ ಪ್ರತಿದಿನ ಮಾಡುವಂತಹ ಚಟುವಟಿಕೆಯಾಗಿದೆ. ಈ ಬಗ್ಗೆ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ. ನಮ್ಮ ಬಳಿ ಈ ಎರಡೂ ಅಥವಾ ಇಂತಹ ಅನೇಕ ರಸಾಯನಗಳಿಂದ ಪ್ರಯೋಜನ ಪಡೆದ ಅಸಂಖ್ಯಾತ ಪ್ರಕರಣಗಳಿವೆ. ಒಳ್ಳೆಯ ಅಭ್ಯಾಸಗಳನ್ನು ಪ್ರತಿದಿನ ಅಳವಡಿಸಿಕೊಳ್ಳಬೇಕು, ಈ ಬದಲಾವಣೆ ಈಗಲಾದರೂ ಸಂಭವಿಸಬೇಕು.
ಹುಟ್ಟಿದಾಗಿನಿಂದ ರೋಗನಿರೋಧಕ ಶಕ್ತಿ ಅಥವಾ ಮೂಲಭೂತ ವ್ಯಾಧಿಕ್ಷಮತ್ವವನ್ನು ಉತ್ತಮವಾಗಿ ಕಾಪಾಡಿ ಕೊಳ್ಳಲು ಮೇಲೆ ನೀಡಿದ ಅಭ್ಯಾಸಗಳು ಉಪಯುಕ್ತವಾಗಿವೆ. ಇವುಗಳನ್ನು ಪಾಲಿಸಿದರೆ, ಮಕ್ಕಳ ಬಹುತೇಕ ಅನಾರೋಗ್ಯಗಳು ಕಡಿಮೆಯಾಗುತ್ತವೆ. ಅಕಸ್ಮಾತ್ ಮಕ್ಕಳು ಅನಾರೋಗ್ಯಕ್ಕೆ ಒಳಗಾದರೂ, ಆಯುರ್ವೇದ ಇದ್ದೇ ಇದೆ ! ಆಯುರ್ವೇದದ ನೆಕ್ಕುವ ಔಷಧಿಗಳನ್ನು ಮಕ್ಕಳು ಅತ್ಯಂತ ಇಷ್ಟಪಟ್ಟು ತೆಗೆದು ಕೊಳ್ಳುತ್ತಾರೆ ಎಂಬುದು ನಮ್ಮ ಇಂದಿನವರೆಗಿನ ಅನುಭವವಾಗಿದೆ !
- ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ, ಮಹಾರಾಷ್ಟ್ರ.

