Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರು ಕೆಎಸ್‌ಆರ್‌ಟಿಸಿಗೆ 100 ಎಲೆಕ್ಟ್ರಿಕ್ ಬಸ್ ಮಂಜೂರು

ಮಂಗಳೂರು ಕೆಎಸ್‌ಆರ್‌ಟಿಸಿಗೆ 100 ಎಲೆಕ್ಟ್ರಿಕ್ ಬಸ್ ಮಂಜೂರು

ಉಡುಪಿ, ಮೂಡುಬಿದಿರೆ ಹಾಗೂ ಏರ್‌ಪೋರ್ಟ್‌ಗೆ ವಿಸ್ತರಣೆ

ಮಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಪಿಎಂ ಇ-ಬಸ್ ಸೇವಾ' ಯೋಜನೆಯಡಿ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ 100 ಹೊಸ ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿವೆ. ಈ ಬಸ್‌ಗಳ ಸೇವೆಯನ್ನು ಮಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲದೆ ನೆರೆಯ ಉಡುಪಿ, ಮೂಡುಬಿದಿರೆ ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವಿಸ್ತರಿಸಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ.

ಪ್ರಮುಖ ಮಾರ್ಗಗಳ ನಿಯೋಜನೆ:

ಉಡುಪಿ ಮಾರ್ಗ: ಮಂಗಳೂರಿನ ಸ್ಟೇಟ್‌ ಬ್ಯಾಂಕ್‌ನಿಂದ ಸುರತ್ಕಲ್, ಮೂಲ್ಕಿ ಮತ್ತು ಪಡುಬಿದ್ರಿ ಮಾರ್ಗವಾಗಿ ಉಡುಪಿಗೆ ಒಟ್ಟು 10 ಬಸ್‌ಗಳು ಕಾರ್ಯಾಚರಿಸಲಿವೆ.

ಮೂಡುಬಿದಿರೆ ಮಾರ್ಗ: ಸ್ಟೇಟ್‌ ಬ್ಯಾಂಕ್‌ನಿಂದ ವಾಮಂಜೂರು, ಗುರುಪುರ, ಕೈಕಂಬ ಮಾರ್ಗವಾಗಿ ಮೂಡುಬಿದಿರೆಗೆ 10 ಬಸ್‌ಗಳನ್ನು ನಿಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ: ಪಡೀಲ್‌ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ 4 ಬಸ್‌ಗಳು ಸಂಚರಿಸಲಿವೆ.
ವಿಮಾನ ನಿಲ್ದಾಣ: ಈ ಹಿಂದೆ ಸ್ಥಗಿತಗೊಂಡಿದ್ದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗಕ್ಕೆ ಪುನಃ 2 ಬಸ್‌ಗಳ ಸೇವೆಯನ್ನು ಮರುಸ್ಥಾಪಿಸಲಾಗುತ್ತಿದೆ.

ಡಿಪೋ ಹಾಗೂ ಚಾರ್ಜಿಂಗ್ ವ್ಯವಸ್ಥೆ:

ನೂತನ ಎಲೆಕ್ಟ್ರಿಕ್ ಬಸ್‌ಗಳ ಸುಗಮ ನಿರ್ವಹಣೆಗಾಗಿ ಕುಂಟಿಕಾನ ಮತ್ತು ಬಾಳೆಪುಣಿಯಲ್ಲಿ ಡಿಪೋಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಡಿಪೋದಲ್ಲಿ ತಲಾ 50 ಬಸ್‌ಗಳ ನಿಲುಗಡೆ ಮತ್ತು ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada