Dailyhunt Logo
  • Light mode
    Follow system
    Dark mode
    • Play Story
    • App Story
ಮಣಿಪುರದಲ್ಲಿ ವಿಷಕಾರಿ ಮದ್ಯ ಸೇವನೆಯಿಂದ 14 ಜನರ ಸಾವು

ಮಣಿಪುರದಲ್ಲಿ ವಿಷಕಾರಿ ಮದ್ಯ ಸೇವನೆಯಿಂದ 14 ಜನರ ಸಾವು

200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಮುಖ್ಯಮಂತ್ರಿ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರು ರೋಗಿಗಳನ್ನು ಭೇಟಿ ಮಾಡುತ್ತಿದ್ದಾರೆ

ಇಂಫಾಲ್ (ಮಣಿಪುರ) - ರಾಜ್ಯದ ಚಂದೇಲ್ ಜಿಲ್ಲೆಯ ಚಾಕ್ಪಿಕಾರೋಂಗ್ ಪ್ರದೇಶದಲ್ಲಿ ಅಕ್ರಮ ವಿಷಕಾರಿ ಮದ್ಯ ಸೇವಿಸಿದ್ದರಿಂದ ಮೃತರ ಸಂಖ್ಯೆ 14ಕ್ಕೆ ತಲುಪಿದೆ.

ಈ ಘಟನೆಯಲ್ಲಿ 200ಕ್ಕೂ ಹೆಚ್ಚು ನಾಗರಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕನಿಷ್ಠ 12 ರೋಗಿಗಳ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಮದ್ಯ ಸೇವಿಸಿದ ಕೇವಲ 48 ಗಂಟೆಗಳಲ್ಲಿ ಸಂತ್ರಸ್ತರ ಆರೋಗ್ಯ ಹದಗೆಟ್ಟು ಈ ಅನರ್ಥ ಸಂಭವಿಸಿದೆ.

ಮುಖ್ಯಮಂತ್ರಿ ಯುಮ್ನಾಮ್ ಖೇಮ್‌ಚಂದ್ ಸಿಂಗ್ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದು, ಈ ಪ್ರಕರಣದ ಕೂಲಂಕಷ ತನಿಖೆಗೆ ಆದೇಶಿಸಿದ್ದಾರೆ. 'ಈ ದುರಂತಕ್ಕೆ ಹೊಣೆಗಾರರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. 'ಮುಂದಿನ ಸೂಚನೆ ಬರುವವರೆಗೆ ನಾಗರಿಕರು ಸ್ಥಳೀಯ ಅಥವಾ ಶಂಕಾಸ್ಪದ ಮದ್ಯವನ್ನು ಸೇವಿಸಬಾರದು' ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. (ಮೂಲತಃ ಮದ್ಯಪಾನವು ತಪ್ಪಾಗಿದ್ದು, ಅದರ ಮೇಲೆ ನಿಷೇಧ ಹೇರುವ ಪ್ರಯತ್ನಗಳನ್ನು ಆಡಳಿತವು ಏಕೆ ಮಾಡುತ್ತಿಲ್ಲ? - ಸಂಪಾದಕರು) ಆಡಳಿತವು ಜಿಲ್ಲೆಯಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಿದ್ದು, ನಕಲಿ ಮದ್ಯದ ಮಾರಾಟ ಅಥವಾ ದಾಸ್ತಾನು ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada