Dailyhunt
ಮತದಾರರಿಗೆ ಬೆದರಿಕೆ ಹಾಕಿದ ತೃಣಮೂಲ ಕಾಂಗ್ರೆಸ್ ನಾಯಕ ರಾಜು ಮಂಡಲ್ ಬಂಧನ!

ಮತದಾರರಿಗೆ ಬೆದರಿಕೆ ಹಾಕಿದ ತೃಣಮೂಲ ಕಾಂಗ್ರೆಸ್ ನಾಯಕ ರಾಜು ಮಂಡಲ್ ಬಂಧನ!

ಮುರ್ಷಿದಾಬಾದ್ (ಬಂಗಾಳ) - ಚುನಾವಣಾ ಆಯೋಗದ ಕಟ್ಟುನಿಟ್ಟಿನ ಸೂಚನೆಯ ನಂತರ, ಬಂಗಾಳ ಪೊಲೀಸರು ಮುರ್ಷಿದಾಬಾದ್‌ನಿಂದ ತೃಣಮೂಲ ಕಾಂಗ್ರೆಸ್ ನಾಯಕ ರಾಜು ಮಂಡಲ್ ಎಂಬಾತನನ್ನು ಬಂಧಿಸಿದ್ದಾರೆ. ಮತದಾರರನ್ನು ಹೆದರಿಸುವುದು ಮತ್ತು ಬೆದರಿಕೆ ಹಾಕಿದ ಗಂಭೀರ ಆರೋಪ ಅವನ ಮೇಲಿದೆ.

ಬೆದರಿಕೆ ಹಾಕುತ್ತಿರುವ ಅವನ ವಿಡಿಯೋ ಸಹ ಪ್ರಸಾರವಾಗಿದೆ.

ರಾಜು ಮಂಡಲ್ ತನ್ನ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಅವನು ನಾಗರಿಕರಿಗೆ, 'ನೀವು ಭಾಜಪಗೆ ಮತ ಹಾಕುವಂತಿಲ್ಲ. ಏನಾದರೂ ತೊಂದರೆಯಿದ್ದರೆ ಮತದಾನ ಮಾಡಲು ಹೋಗುವ ಅವಶ್ಯಕತೆಯಿಲ್ಲ. ನಾನು ನಿಮ್ಮ ಮನೆಗೆ ಚನಬಾರ (ಸಿಹಿ ಪದಾರ್ಥ) ಮತ್ತು ರಸಗುಲ್ಲಾ ಕಳುಹಿಸುತ್ತೇನೆ, ಇಲ್ಲದಿದ್ದರೆ ನೀವು ತೃಣಮೂಲಕ್ಕೇ ಮತ ಹಾಕಬೇಕಾಗುತ್ತದೆ.', ಎಂದು ಬೆದರಿಕೆ ಹಾಕಿದ್ದನು.

ಸಂಪಾದಕೀಯ ನಿಲುವು

ಕಳೆದ ೧೫ ವರ್ಷಗಳಿಂದ ತೃಣಮೂಲ ಕಾಂಗ್ರೆಸ್ ಇಂತಹ ಬೆದರಿಕೆಗಳು ಮತ್ತು ಹಿಂಸಾಚಾರದ ಮೂಲಕ ಅಧಿಕಾರಕ್ಕೆ ಬರುತ್ತಿತ್ತು. ಈಗ ಬಂಗಾಳಿ ನಾಗರಿಕರು ತೃಣಮೂಲಕ್ಕೆ ಪಾಠ ಕಲಿಸುವುದು ಅನಿವಾರ್ಯವಾಗಿದೆ!

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada