ಘಾಜಿಯಾಬಾದ್(ಉತ್ತರ ಪ್ರದೇಶ) - ಘಾಜಿಯಾಬಾದ್ ಜಿಲ್ಲೆಯ ಇಂದಿರಾಪುರಂನಲ್ಲಿ ಶಿವಂ ಎಂಬ ಹಿಂದೂ ಯುವಕನೊಬ್ಬ ಮುಸ್ಲಿಂ ಯುವತಿಯೊಂದಿಗೆ ಓಡಾಡುತ್ತಿದ್ದನು. ಯುವತಿಯು ಹಿಜಾಬ್ ಧರಿಸಿದ್ದಳು. ಇದೇ ಕಾರಣಕ್ಕಾಗಿ ನಾಲ್ವರು ಮುಸ್ಲಿಂ ಯುವಕರು ಶಿವಂನನ್ನು ಸುತ್ತುವರಿದು ಹಲ್ಲೆ ನಡೆಸಿ, ಅತ್ಯಂತ ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಾರೆ.
'ಮುಸ್ಲಿಂ ಯುವಕರು ಮುಗಿದಿದ್ದಾರೆಯೇ?' ಎಂದು ಪ್ರಶ್ನಿಸಿ ಯುವತಿಗೆ ಬೆದರಿಕೆ ಹಾಕಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ವೀಡಿಯೋ ಆಧಾರದ ಮೇಲೆ ಘಾಜಿಯಾಬಾದ್ ಪೊಲೀಸರು ಪ್ರಕರಣದ ತನಿಖೆ ಪ್ರಾರಂಭಿಸಿದ್ದಾರೆ.
1. ಈ ವೀಡಿಯೋದಲ್ಲಿ ನಾಲ್ವರು ಮುಸ್ಲಿಂ ಯುವಕರು ಓರ್ವ ಹಿಂದೂ ಯುವಕನನ್ನು (ಶಿವಂ) ಸುತ್ತುವರಿದು ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತದೆ. ಹತ್ತಿರದಲ್ಲೇ ಹಿಜಾಬ್ ಧರಿಸಿದ ಯುವತಿ ಕೂಡ ನಿಂತಿದ್ದಾಳೆ.
2. ಶಿವಂ ಮೇಲೆ ಹಲ್ಲೆ ನಡೆಸುತ್ತಿರುವ ಮುಸ್ಲಿಂ ಯುವಕರು, 'ನೀನು ಈಕೆಯನ್ನು ಏಕೆ ಸುತ್ತಿಸುತ್ತಿದ್ದೀಯಾ? ನಿನಗೆ ಸಹೋದರಿ ಇಲ್ಲವೇ? ಹಿಂದೂ ಯುವತಿಯರು ಮುಗಿದು ಹೋಗಿದ್ದಾರೆಯೇ?' ಎಂದು ಪ್ರಶ್ನಿಸುತ್ತಿದ್ದಾರೆ.
3. ನಂತರ ಮುಸ್ಲಿಂ ಯುವಕರು ಹಿಜಾಬ್ ಧರಿಸಿದ ಯುವತಿಯ ಬಳಿ ಬಂದು, ಆಕೆಗೆ ಬೆದರಿಸಿ, 'ನೀನು ಹಿಂದೂ ಯುವಕನೊಂದಿಗೆ ಯಾಕೆ ಬಂದೆ ಎಂದು ಮೊದಲು ಹೇಳು? ಮುಸ್ಲಿಂ ಯುವಕರು ಮುಗಿದುಹೋಗಿದ್ದಾರೆಯೇ? ನಿನ್ನ ಮನೆಯವರಿಗೆ ಹೇಳಿ ಮದುವೆಯಾಗು' ಎಂದು ಹೇಳಿದ್ದಾರೆ.
4. ಪೊಲೀಸರು ವೀಡಿಯೋದ ಆಧಾರದ ಮೇಲೆ ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.

