Dailyhunt Logo
  • Light mode
    Follow system
    Dark mode
    • Play Story
    • App Story
ನಾವು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದ್ದೇವೆ !

ನಾವು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದ್ದೇವೆ !

ಅಮೆರಿಕದಿಂದ ಮೊದಲ ಬಾರಿಗೆ ಸ್ವೀಕಾರ

ಯುಎಸ್ ವಾಯುಪಡೆಯ ಕಾರ್ಯದರ್ಶಿ ಟ್ರಾಯ್ ಮೀಂಕ್ (ವೃತ್ತದಲ್ಲಿ ಗುರುತಿಸಲಾಗಿದೆ)

ವಾಷಿಂಗ್ಟನ ಡಿಸಿ (ಅಮೆರಿಕ) - ಅಮೆರಿಕದ ಬಳಿ ಬಾಹ್ಯಾಕಾಶ ಕಕ್ಷೆಯಲ್ಲಿ ಅಂತಹ ಶಸ್ತ್ರಾಸ್ತ್ರಗಳಿವೆ, ಅವುಗಳ ಬಳಕೆಯನ್ನು ಅಗತ್ಯ ಬಿದ್ದಾಗ ಅಮೆರಿಕನ ಸೈನಿಕರನ್ನು ಶತ್ರುಗಳ ಆಕ್ರಮಣಗಳಿಂದ ರಕ್ಷಿಸಲು ಮಾಡಿಕೊಳ್ಳಬಹುದು, ಎಂಬ ಮಾಹಿತಿಯನ್ನು ಅಮೆರಿಕದ ವಾಯುಪಡೆಯ ಕಾರ್ಯದರ್ಶಿ ಟ್ರಾಯ್ ಮಿಂಕ್ ಅವರು ಮೊದಲ ಬಾರಿಗೆ ಜಗತ್ತಿಗೆ ನೀಡಿದ್ದಾರೆ.

ಅವರು ಈ ಶಸ್ತ್ರಾಸ್ತ್ರಗಳು ನಿಖರವಾಗಿ ಯಾವ ರೀತಿಯವಾಗಿವೆ, ಎಷ್ಟಿವೆ ಮತ್ತು ಅವುಗಳನ್ನು ಯಾವಾಗ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು ? ಎಂಬುದರ ಮಾಹಿತಿಯನ್ನು ಮಾತ್ರ ನೀಡಲಿಲ್ಲ.

೧. ತಜ್ಞರಿಗೆ ಅಮೆರಿಕದ ಈ ಮಾಹಿತಿಯ ನಂತರ ರಷ್ಯಾ ಮತ್ತು ಚೀನಾ ಕೂಡ ಬಾಹ್ಯಾಕಾಶದಲ್ಲಿ ತಮ್ಮ ಸೈನಿಕ ಶಕ್ತಿಯನ್ನು ಹೆಚ್ಚಿಸಬಹುದು ಎಂಬ ಭೀತಿಯಿದೆ. ಅವು ಅಮೆರಿಕದ ಈ ನಿಲುವನ್ನು ತಮ್ಮ ಭದ್ರತೆಗೆ ಅಪಾಯಕಾರಿ ಎಂದು ಹೇಳಿ ಹೊಸ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಹೆಜ್ಜೆ ಇಡಬಹುದು. ಈ ರೀತಿಯಾಗಿ ಒಂದು ದೇಶದ ಸೈನಿಕ ಸಿದ್ಧತೆಯು ಇನ್ನೊಂದು ದೇಶಕ್ಕೂ ತನ್ನ ಶಕ್ತಿಯನ್ನು ಹೆಚ್ಚಿಸಲು ಪ್ರೇರೇಪಿಸಬಹುದು. ಇದರಿಂದ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳ ಸ್ಪರ್ಧೆಯು ಇನ್ನಷ್ಟು ತೀವ್ರವಾಗುವ ಅಪಾಯ ಹೆಚ್ಚಾಗಬಹುದು.

೨. ಅಮೆರಿಕನ್ ಸ್ಪೇಸ್ ಫೋರ್ಸ್ನ ಹೇಳಿಕೆಯೇನೆಂದರೆ, ರಷ್ಯಾ ಬಾಹ್ಯಾಕಾಶವನ್ನೂ ಯುದ್ಧದ ಭಾಗವೆಂದು ಪರಿಗಣಿಸುತ್ತದೆ. ಅಂದರೆ, ಭವಿಷ್ಯದಲ್ಲಿ ರಷ್ಯಾಗೆ ಯಾವುದಾದರೂ ದೇಶದೊಂದಿಗೆ ದೊಡ್ಡ ಯುದ್ಧವಾದರೆ, ಅದು ಬಾಹ್ಯಾಕಾಶದಲ್ಲಿನ ಉಪಗ್ರಹಗಳು ಮತ್ತು ಇತರ ತಂತ್ರಜ್ಞಾನಗಳನ್ನೂ ಬಳಸಿಕೊಳ್ಳಬಹುದು.

೩. ಅಮೆರಿಕಕ್ಕೆ ರಷ್ಯಾದ ಬಾಹ್ಯಾಕಾಶದಲ್ಲಿ ಅಣುಬಾಂಬ್ ಇರಿಸುವ ಸಂಭಾವ್ಯ ಸಿದ್ಧತೆಯ ಆತಂಕವೂ ಇದೆ. ರಷ್ಯಾ ಒಂದೇ ಬಾರಿಗೆ ಹೆಚ್ಚಿನ ಸಂಖ್ಯೆಯ ಉಪಗ್ರಹಗಳಿಗೆ ಹಾನಿ ಉಂಟುಮಾಡಬಲ್ಲ ಶಸ್ತ್ರಾಸ್ತ್ರವನ್ನು ತಯಾರಿಸಬಹುದು ಎಂಬ ಭೀತಿ ಅಮೆರಿಕದ ಅಧಿಕಾರಿಗಳಿಗೆ ಇದೆ. ಹೀಗಾದರೆ, ಕೇವಲ ಸೈನ್ಯದ ಮೇಲಷ್ಟೇ ಅಲ್ಲದೆ, ಸಾಮಾನ್ಯ ಜನರ ಮೇಲೆಯೂ ಪರಿಣಾಮ ಬೀರಬಹುದು. ಉಪಗ್ರಹಗಳಿಂದ ಸಿಗುವ ಸೇವೆಗಳ ಮೇಲೆ ಪರಿಣಾಮ ಬೀರುವುದರಿಂದ ಸಂಪರ್ಕ ವ್ಯವಸ್ಥೆ, ಹವಾಮಾನದ ಮಾಹಿತಿ ಮತ್ತು ಇತರ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರಬಹುದು; ಆದರೆ ರಷ್ಯಾ ಬಾಹ್ಯಾಕಾಶದಲ್ಲಿ ಅಣುಬಾಂಬ್ ಅಭಿವೃದ್ಧಿಪಡಿಸುವ ಅಮೆರಿಕದ ಆರೋಪಗಳನ್ನು ತಳ್ಳಿಹಾಕಿದೆ.

೪. ಚೀನಾ ಕೂಡ ಬಾಹ್ಯಾಕಾಶದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಅಮೆರಿಕ ಹೇಳುತ್ತಿದೆ. ಚೀನಾ ತನ್ನ ಸೈನ್ಯವನ್ನು ಆಧುನಿಕಗೊಳಿಸಲು ಬಾಹ್ಯಾಕಾಶದಲ್ಲಿನ ಉಪಗ್ರಹಗಳು ಮತ್ತು ಇತರ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರಬಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ.

ಬಾಹ್ಯಾಕಾಶದಲ್ಲಿ ಯುದ್ಧವಾದರೆ, ಪೃಥ್ವಿಯ ಮೇಲೆ ಬೀರುವ ಪರಿಣಾಮ

ಹವಾಮಾನದ ಮುನ್ಸೂಚನೆ ಪಡೆಯುವುದು, ನೈಸರ್ಗಿಕ ವಿಕೋಪಗಳ ಮೇಲೆ ನಿಗಾ ಇಡುವುದು, ಮಾರ್ಗವನ್ನು ಕಂಡುಕೊಳ್ಳುವುದು ಮತ್ತು ದೂರದ ಸಂಪರ್ಕ ಸಾಧಿವುದು ಮುಂತಾದ ಅನೇಕ ಕೆಲಸಗಳು ಉಪಗ್ರಹಗಳ ನೆರವಿನಿಂದ ನಡೆಯುತ್ತವೆ. ಜಿ.ಪಿ.ಎಸ್. ನಂತಹ ಸೇವೆಗಳಿಂದಾಗಿ ವಿಮಾನಗಳು, ಹಡಗುಗಳು ಮತ್ತು ವಾಹನಗಳು ತಮ್ಮ ಮಾರ್ಗವನ್ನು ನಿರ್ಧರಿಸುತ್ತವೆ. ಬ್ಯಾಂಕಿಂಗ ಮತ್ತು ಇತರ ಆರ್ಥಿಕ ವ್ಯವಹಾರಗಳಲ್ಲೂ ನಿಖರ ಸಮಯ ಮತ್ತು ಸಂಪರ್ಕಕ್ಕಾಗಿ ಉಪಗ್ರಹದ ಮೂಲಕ ಸಿಗುವ ಸೇವೆಗಳ ಅಗತ್ಯವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಾಹ್ಯಾಕಾಶದ ಯುದ್ಧದಿಂದಾಗಿ ಹೆಚ್ಚಿನ ಸಂಖ್ಯೆಯ ಉಪಗ್ರಹಗಳಿಗೆ ಹಾನಿಯಾದರೆ, ಮೊಬೈಲ್ ಮತ್ತು ಇತರ ಸಂಪರ್ಕ ವ್ಯವಸ್ಥೆ, ಹವಾಮಾನದ ಮಾಹಿತಿ ಹಾಗೂ ಅನೇಕ ಪ್ರಮುಖ ಸೇವೆಗಳ ಮೇಲೆ ಪರಿಣಾಮ ಬೀರಬಹುದು.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada