ರಾಜನಾಥ್ ಸಿಂಗ್ ಅವರ ಹೇಳಿಕೆ ನಂತರ ತಬ್ಬಿಬ್ಬಾದ ಪಾಕಿಸ್ತಾನದ ರಕ್ಷಣಾ ಸಚಿವ !
ಇಸ್ಲಾಮಾಬಾದ್ (ಪಾಕಿಸ್ತಾನ) - 'ಆಪರೇಷನ್ ಸಿಂದೂರ್' ಇನ್ನೂ ಮುಂದುವರಿಯುತ್ತಿದೆ. ನಮ್ಮ ನೆರೆಹೊರೆಯವರು ಪ್ರಸ್ತುತ ಯಾವುದೇ ಕ್ಷಣದಲ್ಲಿ ಅಹಿತಕರ ಘಟನೆಗೆ ಮುಂದಾಗುವ ಸ್ಥಿತಿಯಲ್ಲಿದ್ದಾರೆ.
ಅವರು ಹಾಗೆ ಮಾಡಿದರೆ ಭಾರತದ ಕಡೆಯಿಂದ ಬಲವಾದ ಮತ್ತು ತೀವ್ರ ಸ್ವರೂಪದ ಉತ್ತರ ನೀಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದರು. ಕೊಲ್ಲಿ ರಾಷ್ಟ್ರಗಳ ಸಂಘರ್ಷದ ಹಿನ್ನೆಲೆಯಲ್ಲಿ ಅವರು ನೀಡಿದ ಈ ಹೇಳಿಕೆಗೆ ಪಾಕಿಸ್ತಾನ ಪ್ರತ್ಯುತ್ತರ ನೀಡಲು ಪ್ರಯತ್ನಿಸಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, 'ಪಾಕಿಸ್ತಾನವು ನಿರ್ಣಾಯಕ ಪ್ರತ್ಯುತ್ತರ ನೀಡಲು ಸಿದ್ಧವಿದೆ' ಎಂದು ಹೇಳಿದ್ದಾರೆ.
ಖ್ವಾಜಾ ಆಸಿಫ್ ಮಾತನಾಡಿ, ಪಹಲ್ಗಾಮ್ ಮೇಲಿನ ದಾಳಿಗೆ ೧ ವರ್ಷ ತುಂಬುತ್ತಾ ಬಂದಿರುವಾಗ ಇಂತಹ ಹೇಳಿಕೆಗಳನ್ನು ನೀಡುವುದು ಶಕ್ತಿಯನ್ನಲ್ಲ, ಬದಲಾಗಿ ಆತಂಕವನ್ನು ತೋರಿಸುತ್ತದೆ. ಇಂತಹ ಬೆದರಿಕೆಗಳು ಹೊಸದೇನಲ್ಲ. ಆಧಾರರಹಿತ ಆರೋಪಗಳ ಮೂಲಕ ರಾಜಕೀಯ ಸ್ವಾರ್ಥಕ್ಕಾಗಿ ಉದ್ವಿಗ್ನತೆಯನ್ನು ಹೆಚ್ಚಿಸುವ ಪ್ರಯತ್ನ ಮಾಡುವುದು ಒಂದು ಯೋಜಿತ ಪದ್ಧತಿಯ ಭಾಗವಾಗಿದೆ; ಆದರೆ ಪಾಕಿಸ್ತಾನವು ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಗೆ ಸಂಪೂರ್ಣವಾಗಿ ವಚನಬದ್ಧವಾಗಿದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು 'ಆಪರೇಷನ್ ಸಿಂದೂರ್' ನ ಮೊದಲು ಪಾಕಿಸ್ತಾನದ ಎಲ್ಲಾ ಸಚಿವರು ಇಂತಹದ್ದೇ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದರು; ಆದರೆ ಭಾರತದ ಕ್ರಮದ ನಂತರ ಅವರೆಲ್ಲರೂ ಬಿಲದಲ್ಲಿ ಅಡಗಿದ್ದರು ಎಂಬ ಇತಿಹಾಸ ಇನ್ನೂ ಹಸಿರಾಗಿದೆ. ಆದರೆ ಹೊಡೆತ ತಿಂದರೂ ಬದಲಾಗದವರು ಪಾಕಿಸ್ತಾನದ ನಾಯಕರು ಹೇಗೆ? |

