ಯುವಕನ ಸಹೋದರಿ ವಿವಾಹದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರಿಂದ ಹತ್ಯೆ
ನಲಬಾಡಿ (ಅಸ್ಸಾಂ) - ಇಲ್ಲಿನ ಗಾಂಗ್‌ಪುರ ಗ್ರಾಮದಲ್ಲಿ 'ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್' ನಾಯಕ ಮಧುರ್ಜ್ಯ ಬರ್ಮನ್ (ವಯಸ್ಸು ೨೦ ವರ್ಷ) ಎಂಬಾತನನ್ನು ರೋಜ ಅಲಿ ಮತ್ತು ಆಸಿಫ್ ಅಲಿ ಚೂಪಾದ ಆಯುಧದಿಂದ ಇರಿದು ಹತ್ಯೆ ಮಾಡಿದ್ದಾರೆ.
೩೧ ಮೇ ರಂದು ಮಧುರ್ಜ್ಯ ಮತ್ತು ಆತನ ೧೭ ವರ್ಷದ ಸೋದರಸಂಬಂಧಿ ಸಹೋದರಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಗಿದೆ. ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಸಹೋದರಿಯು ರೋಜ್ ಅಲಿಯ ವಿವಾಹದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಳು. ಆ ನಂತರ ಆತ ಆಕೆಗೆ ಕಿರುಕುಳ ನೀಡಿ ಬೆದರಿಸುತ್ತಿದ್ದನು ಎಂದು ಆರೋಪಿಸಲಾಗುತ್ತಿದೆ.

