೧ ಸಾವಿರದ ೫೦೦ ಜನ ಇನ್ನೂ ನಾಪತ್ತೆ : ೩೦೦ ಕ್ಕೂ ಹೆಚ್ಚು ಭಾರತೀಯರ ಸೇರಿದ್ದಾರೆ.
ಕಾಠಮಾಂಡು - ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಇದುವರೆಗೆ ೨೮೯ ಜನರು ಮರಣಹೊಂದಿರುವುದರ ಅಂಕಿಅಂಶ ಹೊರಬಂದಿದೆ. ಹಾಗೆಯೇ ೧ ಸಾವಿರದ ೫೦೦ ಜನರು ಇನ್ನೂ ಕಾಣೆಯಾಗಿದ್ದಾರೆ.
ಇದರಲ್ಲಿ ೩೦೦ ಕ್ಕೂ ಹೆಚ್ಚು ಭಾರತೀಯರಿದ್ದಾರೆ. ಹೆಲಿಕಾಪ್ಟರ ಮೂಲಕ ಜನರನ್ನು ಹುಡುಕಿ ಅವರನ್ನು ರಕ್ಷಿಸಲಾಗುತ್ತಿದೆ. ನೇಪಾಳಿ ಸೈನ್ಯವು ರಸುವಾದ ಟಿಮುರೆಯಿಂದ ಬೆಳಿಗ್ಗೆ ೧೧೬ ಜನರನ್ನು ಸುರಕ್ಷಿತವಾಗಿ ಹೊರತೆಗೆದಿದೆ. ಇದರಲ್ಲಿ ೯೫ ನೇಪಾಳಿಗಳು ಮತ್ತು ೨೧ ಭಾರತೀಯರಿದ್ದಾರೆ.
ಟಿಬೆಟನಲ್ಲಿ ಕಾಣೆಯಾದ ಜನರ ಸಂಖ್ಯೆ ೫೫೮
ಟಿಬೆಟಿನ ಗ್ಯಿರೋಂಗ ಕೌಂಟಿಯಲ್ಲಿ ಸಂಭವಿಸಿದ ಮಣ್ಣು ಕುಸಿತದ ನಂತರ ಕಾಣೆಯಾದವರ ಸಂಖ್ಯೆ ೫೫೮ ಕ್ಕೆ ಏರಿದೆ. ಇವರಲ್ಲಿ ೨೬೦ ವಿದೇಶಿ ನಾಗರಿಕರಿದ್ದಾರೆ. ನೇಪಾಳದಲ್ಲಿ ೫೭೯ ಪ್ರವಾಸಿಗರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದ್ದು, ಇದರಲ್ಲಿ ೪೬೬ ವಿದೇಶಿ ನಾಗರಿಕರಿದ್ದರು.
ಸದ್ಗುರು ಜಗ್ಗಿ ವಾಸುದೇವರವರು ತಾವು ಮತ್ತು ಕೆಲವು ಸ್ವಯಂಸೇವಕರು ಟಿಬೆಟನ ಗ್ಯಿರೋಂಗ ಪ್ರದೇಶಕ್ಕೆ ಪ್ರಯಾಣ ಮಾಡಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸದ್ಗುರುಗಳ ಅನುಸಾರ ಅವರ ತಂಡದ ೮೦ ಸದಸ್ಯರೊಂದಿಗೆ ಇನ್ನೂ ಸಂಪರ್ಕ ಸಾಧ್ಯವಾಗಿಲ್ಲ. ಕಾಣೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಅವರು ಗ್ಯಿರೋಂಗಗೆ ಹೋಗಲು ಬಯಸುತ್ತಿದ್ದಾರೆ.
ಭಾರತದಿಂದ ನೇಪಾಳಕ್ಕೆ ಕಳುಹಿಸಲ್ಪಟ್ಟ ಸಾಮಗ್ರಿಗಳು
ಭಾರತವು ನೇಪಾಳಕ್ಕೆ ನೆರವಿನ ಸಾಮಗ್ರಿಗಳನ್ನು ಒಳಗೊಂಡ ಎರಡನೇ ದಾಸ್ತಾನನ್ನು ಕಳುಹಿಸಿದೆ. ಭಾರತೀಯ ವಾಯುಪಡೆಯ ವಿಮಾನದಲ್ಲಿ ಕಳುಹಿಸಲ್ಪಟ್ಟ ಈ ಸಾಮಗ್ರಿಯಲ್ಲಿ ೩೭.೫ ಟನ್ ಅತ್ಯಾವಶ್ಯಕ ಔಷಧಗಳು ಮತ್ತು ಆಹಾರ ಧಾನ್ಯದ ಪೊಟ್ಟಣಗಳಿವೆ. ಇದಕ್ಕೂ ಮೊದಲು ವಿಮಾನದ ಮೂಲಕ ೧೦ ಟನ್ ಸಾಮಗ್ರಿ ಮತ್ತು ಅತ್ಯಾವಶ್ಯಕ ಔಷಧಗಳನ್ನು ಕಳುಹಿಸಲಾಗಿತ್ತು. ಭಾರತವು ತಾನು ನೇಪಾಳ ಸರಕಾರದ ಸಂಪರ್ಕದಲ್ಲಿದ್ದು ಪ್ರಳಯ ಪೀಡಿತರಿಗೆ ಸಹಕಾರ ನೀಡಲು ಎಲ್ಲಾ ರೀತಿಯ ನೆರವು ಮುಂದುವರಿಸುವುದಾಗಿ ಹೇಳಿದೆ.
'ನಾವು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ವಂತೆ !' - ಚೀನಾ ಪ್ರಳಯ ಮತ್ತು ಮಣ್ಣು ಕುಸಿತದ ನಂತರ ಚೀನಾ ನೇಪಾಳಕ್ಕೆ ಸಕಾಲದಲ್ಲಿ ಮುನ್ಸೂಚನೆ ನೀಡದ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಜೀವ ಮತ್ತು ಆಸ್ತಿಯ ಹಾನಿ ಸಂಭವಿಸಿದೆ ಎಂದು ಆರೋಪಿಸಲಾಗಿತ್ತು. ಚೀನಾ ಈಗ ಈ ವಿಷಯದ ಬಗ್ಗೆ ಸ್ಪಷ್ಟೀಕರಣ ಹೊರಡಿಸಿದೆ. ಚೀನಾ ಯಾವುದೇ ಮಾಹಿತಿಯನ್ನು ಮರೆಮಾಡಿಲ್ಲ ಎಂದು ನೇಪಾಳದಲ್ಲಿರುವ ಚೀನಾ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಚೀನಾದಿಂದ ಪೂರ್ವಸೂಚನೆ ಸಿಗದ ಕಾರಣ ಅಥವಾ ಆಣೆಕಟ್ಟು ಒಡೆದ ಕಾರಣದಿಂದ ಪ್ರಳಯ ಬಂತು ಎಂದು ಹೇಳುವುದು ತಪ್ಪು. (ಚೀನಾದ ಈ ಮಾತನ್ನು ಯಾರು ನಂಬುತ್ತಾರೆ ? - ಸಂಪಾದಕರು) |

