ಸಾಮಾಜಿಕ ಘಟನೆಗಳ ವಿಶ್ಲೇಷಣೆ
'ಯುನೈಟೆಡ್ ಲಿಬರೇಷನ್ ಕೌನ್ಸಿಲ್ (ಯು.ಎಲ್.ಸಿ.) ಎಂಬ ಲಷ್ಕರ್-ಎ-ತೊಯ್ಬಾಕ್ಕೆ ಸೇರಿದ ಭಯೋತ್ಪಾದಕ ಸಂಸ್ಥೆಯು ಪತ್ರವೊಂದನ್ನು ಬಿಡುಗಡೆ ಮಾಡಿ, ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರಿ ಹಿಂದೂ ನೌಕರರಿಗೆ (ಸಿಬ್ಬಂದಿಗಳಿಗೆ) ಬೆದರಿಕೆ ಹಾಕಿದೆ.
ಕಳೆದ ಒಂದು ತಿಂಗಳಲ್ಲಿ ಬಿಡುಗಡೆಯಾದ ಆರನೇ ಪತ್ರ ಇದಾಗಿದೆ. ಭಯೋತ್ಪಾದಕರು ಈ ನೌಕರರ ಮೊಬೈಲ್ ಸಂಖ್ಯೆಗಳು, ವಿಳಾಸಗಳು ಮತ್ತು ವಾಹನಗಳ ವಿವರಗಳನ್ನು ಪಡೆದುಕೊಂಡಿದ್ದಾರೆ. ನೌಕರರ ಮೃತ ದೇಹಗಳನ್ನು ಅವರ ಮನೆಗೆ ಕಳುಹಿಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆಗಳ ನಂತರ ಅನೇಕ ನೌಕರರು ಕಚೇರಿಗೆ ಹೋಗುವುದನ್ನು ನಿಲ್ಲಿಸಿದ್ದಾರೆ, ಇನ್ನು ಕೆಲವರು ಜಮ್ಮುವಿಗೆ ಮರಳಿದ್ದಾರೆ. 'ಪ್ರಧಾನಮಂತ್ರಿ ಯೋಜನೆಯಡಿ ಕಣಿವೆಯಲ್ಲಿ ಮತ್ತೆ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಅಮಾಯಕ ನೌಕರರ ಮನಸ್ಸಿನಲ್ಲಿ ಭೀತಿಯನ್ನು ಮೂಡಿಸಿ, ಅವರನ್ನು ಮತ್ತೆ ಓಡಿಸುವ ಸುಸಜ್ಜಿತ ಸಂಚು ಇದಾಗಿದೆ. ಇಂದಿನ ಭಯೋತ್ಪಾದಕರು ಬಂದೂಕು ಹಿಡಿದು ತಿರುಗುತ್ತಿಲ್ಲ; ಬದಲಿಗೆ 'ಸ್ಮಾರ್ಟ್‌ಫೋನ್ ಮತ್ತು 'ಡಾರ್ಕ್ ವೆಬ್ ಬಳಸಿ ಮಾನಸಿಕ ಭಯಗ್ರಸ್ತ ಸ್ಥಿತಿ ಹರಡುತ್ತಿದ್ದಾರೆ. ಈ ಹೊಸ ಗುಂಪುಗಳನ್ನು ಧ್ವಂಸಗೊಳಿಸಲು ಭಾರತವು ತನ್ನ ಸೈಬರ್ ಗೂಢಚಾರ ವ್ಯವಸ್ಥೆಯನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಮಾಡುವುದು ಅಗತ್ಯವಾಗಿದೆ.
ಗಂಭೀರ ವಿಷಯವೆಂದರೆ ನೌಕರರ ಮಾಹಿತಿ ಈ ಜಿಹಾದಿಗಳ ಕೈಗೆ ಹೇಗೆ ಸಿಕ್ಕಿತು ? ಸ್ಥಳೀಯ ಆಡಳಿತ ವ್ಯವಸ್ಥೆಯಿಂದಲೇ ಅದು ಸೋರಿಕೆಯಾಯಿತೇ ಅಥವಾ ಭಯೋತ್ಪಾದಕರ ಸ್ಥಳೀಯ ದೇಶದ್ರೋಹಿಗಳು ಇಂದಿಗೂ ವ್ಯವಸ್ಥೆಯ ಒಳಗೇ ಕುಳಿತು ಕೆಲಸ ಮಾಡುತ್ತಿದ್ದಾರೆಯೇ ? ಎಂಬುದನ್ನು ಪತ್ತೆಹಚ್ಚುವುದು ಅವಶ್ಯಕವಾಗಿದೆ. ಕಾಶ್ಮೀರಿ ಹಿಂದೂಗಳಿಗೆ ಮತ್ತೊಮ್ಮೆ ಸ್ವಂತ ಭೂಮಿಯಿಂದಲೇ ನಿರಾಶ್ರಿತರಾಗುವ ಪರಿಸ್ಥಿತಿ ಬರಬಾರದು ಎಂದರೆ, ಭಯೋತ್ಪಾದಕರ ಈ ಹೊಸ ಕುತಂತ್ರವನ್ನು ಹೊಸಕಿ ಹಾಕುವುದು ಸರಕಾರದ ಮೊದಲ ಕರ್ತವ್ಯವಾಗಬೇಕು. ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಪ್ರತಿಯೊಂದು ದೇಶವೂ ಕಠಿಣ ಕಾರ್ಯತಂತ್ರ ರೂಪಿಸಿದೆ. ಇಸ್ರೇಲ್ ದಾಳಿಯಾಗುವ ವರೆಗೆ ಕಾಯದೆ, ನಿಖರ ಗೂಢಚಾರಿಕೆಯ ಬಲದ ಮೇಲೆ ಶತ್ರುವನ್ನು ಅವನ ಮನೆಯಲ್ಲೇ ಮುಗಿಸುವ 'ಪ್ರಿ-ಎಂಪ್ಟಿವ್ (ಮುಂಚಿತವಾಗಿಯೇ ದಾಳಿ ಮಾಡುವ) ನೀತಿಯನ್ನು ಜಾರಿಗೆ ತಂದಿತು; ಅಮೆರಿಕವು ೧೧ ಸೆಪ್ಟೆಂಬರ್ ೨೦೦೧ ರ ದಾಳಿಯ ನಂತರ ಅಂತಾರಾಷ್ಟ್ರೀಯ 'ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಹದ್ದಿನ ಕಣ್ಣಿಟ್ಟು, ಭಯೋತ್ಪಾದಕರ ಆರ್ಥಿಕ ನೆರವನ್ನು ಸಂಪೂರ್ಣವಾಗಿ ಕಡಿತಗೊಳಿಸಿತು. ಶ್ರೀಲಂಕಾ ರಾಜಕೀಯ ಒತ್ತಡಕ್ಕೆ ಮಣಿಯದೆ ಸೈನ್ಯದ ಮೂಲಕ 'ಎಲ್.ಟಿ.ಟಿ.ಇ.ಯನ್ನು ಬುಡಸಮೇತ ನಿರ್ಮೂಲನೆ ಮಾಡಿತು.

ಜಗತ್ತಿನಲ್ಲಿನ ಯಾವುದೇ ಕಾರ್ಯತಂತ್ರವನ್ನು ಮಾದರಿಯಾಗಿ ತೆಗೆದುಕೊಂಡರೂ, ಕಾಶ್ಮೀರದ ಸ್ಥಿತಿಯು ಕೇವಲ ಆಂತರಿಕ ಭದ್ರತೆಯನ್ನು ಹೆಚ್ಚಿಸುವುದರಿಂದ ನಿಯಂತ್ರಣಕ್ಕೆ ಬರುವುದಿಲ್ಲ; ಏಕೆಂದರೆ ಭಯೋತ್ಪಾದನೆಯ ನಿಜವಾದ ಬೇರು ಪಾಕಿಸ್ತಾನದಲ್ಲಿದೆ. ಗಡಿಯಾಚೆಯಿಂದ ಶಸ್ತ್ರಾಸ್ತ್ರ, ಹಣ ಮತ್ತು ಮತಾಂಧತೆಯ ಪೂರೈಕೆ ನಡೆಯುತ್ತಿರುವ ವರೆಗೆ ಕೇವಲ ರೆಂಬೆ-ಕೊಂಬೆಗಳನ್ನು ಕತ್ತರಿಸಿದರೆ ಸಾಲದು; ಬದಲಿಗೆ ಈ ವಿಷಬಳ್ಳಿಯ ಬೇರಿನ ಮೇಲೆಯೇ ನೇರ ಪೆಟ್ಟು ನೀಡಬೇಕಾಗುತ್ತದೆ. ಪಾಕಿಸ್ತಾನದ ತೆರೆಮರೆಯ ಯುದ್ಧಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಾ ಭಯೋತ್ಪಾದಕರ ನೆಲೆಗಳನ್ನು ಮತ್ತು ಅವರಿಗೆ ನೀರೆರೆಯುವ ಪೂರ್ಣ ವ್ಯವಸ್ಥೆಯನ್ನು ಧ್ವಂಸಗೊಳಿಸುವುದೇ ಭಾರತಕ್ಕೆ ಶಾಶ್ವತ ಶಾಂತಿಯ ಏಕೈಕ ಹಾಗೂ ನಿರ್ಣಾಯಕ ಮಾರ್ಗವಾಗಿದೆ.
- ಸೌ. ಅಪರ್ಣಾ ಜಗತಾಪ, ಪುಣೆ

