Dailyhunt Logo
  • Light mode
    Follow system
    Dark mode
    • Play Story
    • App Story
ನ್ಯೂಯಾರ್ಕ್ ನಿವಾಸಿಗಳ ಸುರಕ್ಷತೆಯ ಭರವಸೆಯನ್ನು ಈಡೇರಿಸಿ! - ಹಿಂದೂ ಅಮೆರಿಕನ್ ಫೌಂಡೇಶನ್

ನ್ಯೂಯಾರ್ಕ್ ನಿವಾಸಿಗಳ ಸುರಕ್ಷತೆಯ ಭರವಸೆಯನ್ನು ಈಡೇರಿಸಿ! - ಹಿಂದೂ ಅಮೆರಿಕನ್ ಫೌಂಡೇಶನ್

ಮೆರಿಕ: ಸರಸಂಘಚಾಲಕರ ಕಾರ್ಯಕ್ರಮ; 'ಹಿಂದೂ ಅಮೆರಿಕನ್ ಫೌಂಡೇಶನ್'ನಿಂದ ಮುಸ್ಲಿಂ ಮೇಯರ್ ಮಮದಾನಿ ಅವರಿಗೆ ಮನವಿ

​ನ್ಯೂಯಾರ್ಕ್ (ಅಮೆರಿಕ) - ಪರಮ ಪೂಜ್ಯ ಸರಸಂಘಚಾಲಕ ಡಾ. ಮೋಹನ್‌ಜಿ ಭಾಗವತ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ನ್ಯೂಯಾರ್ಕ್‌ನ ಮೇಯರ್ ಜೊಹ್ರಾನ್ ಮಮದಾನಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಂತರ 'ಹಿಂದೂ ಅಮೆರಿಕನ್ ಫೌಂಡೇಶನ್', ಹೇಳಿಕೆ ನೀಡಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳು ಸೇರಿದಂತೆ ಎಲ್ಲಾ ನ್ಯೂಯಾರ್ಕ್ ನಿವಾಸಿಗಳ ಸುರಕ್ಷತೆಯ ಬಗ್ಗೆ ಮೇಯರ್ ಜೊಹ್ರಾನ್ ಮಮದಾನಿ ಅವರು ನೀಡಿದ ಭರವಸೆಯನ್ನು ಈಡೇರಿಸಬೇಕೆಂದು ಮನವಿ ಮಾಡಿದೆ.

​ಹಿಂದೂ ಅಮೆರಿಕನ್ ಫೌಂಡೇಶನ್ ತನ್ನ 'ಎಕ್ಸ್' ನಲ್ಲಿ, "ಎಚ್ಚರದಿಂದಿರಿ, ಪರಿಸ್ಥಿತಿಯ ಅರಿವಿರಲಿ ಮತ್ತು ಸಂವಾದವನ್ನು ಸೌಹಾರ್ದಯುತವಾಗಿಡಿ ಎಂದು ತಿಳಿಸಿದೆ. ಈ ಕಾರ್ಯಕ್ರಮಕ್ಕೂ ಮುನ್ನ ಹಿಂದೂ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ಕೆಲವು ಕಾರ್ಯಕರ್ತರು ಈ ಸಂಭ್ರಮಾಚರಣೆಯ ಆಯೋಜನೆಯನ್ನು ರದ್ದುಗೊಳಿಸಲು ಯತ್ನಿಸಿದ್ದಾರೆ. ನಾವು ಜೊಹ್ರಾನ್ ಮಮದಾನಿ ಅವರಲ್ಲಿ ವಿನಂತಿಸುವುದೇನೆಂದರೆ, ಮಮದಾನಿ ಅವರು ಈ ಕಾರ್ಯಕ್ರಮದ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ನ್ಯೂಯಾರ್ಕ್ ನಿವಾಸಿಗಳನ್ನು ರಕ್ಷಿಸುವ ತಮ್ಮ ಕರ್ತವ್ಯವನ್ನು ಪಾಲಿಸಬೇಕು", ಎಂದು ಮನವಿ ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada