Dailyhunt Logo
  • Light mode
    Follow system
    Dark mode
    • Play Story
    • App Story
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಆಂದೋಲನಕ್ಕೆ ಕಾಶ್ಮೀರದ ನಾಗರಿಕರು ಬೆಂಬಲ ನೀಡಬೇಕು!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಆಂದೋಲನಕ್ಕೆ ಕಾಶ್ಮೀರದ ನಾಗರಿಕರು ಬೆಂಬಲ ನೀಡಬೇಕು!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ: 'ಜಮ್ಮು-ಕಾಶ್ಮೀರ ಜಾಯಿಂಟ್ ಅವಾಮಿ ಆಕ್ಷನ್ ಸಮಿತಿ'ಯ ಆಗ್ರಹ

​ಇಸ್ಲಾಮಾಬಾದ್ - ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸರಕಾರಿ ವಿರೋಧಿ ಆಂದೋಲನಗಳನ್ನು ಹತ್ತಿಕ್ಕಲು ಸರಕಾರ ಅಮಾನವೀಯ ಮಾರ್ಗಗಳನ್ನು ಅನುಸರಿಸುತ್ತಿದೆ.

ಇದೇ ವೇಳೆ 'ಜಮ್ಮು-ಕಾಶ್ಮೀರ ಜಾಯಿಂಟ್ ಅವಾಮಿ ಆಕ್ಷನ್ ಸಮಿತಿ'ಯ ಪ್ರಮುಖ ಸದಸ್ಯರಾದ ಸರ್ದಾರ್ ಅಮನ್ ಖಾನ್ ಅವರು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿ, ಜನರಿಗೆ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಈ ಆಂದೋಲನಕ್ಕೆ ಭಾರತೀಯ ನಾಗರಿಕರು, ವಿಶೇಷವಾಗಿ ಕಾಶ್ಮೀರಿ ನಾಗರಿಕರು ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಸರ್ದಾರ್ ಅಮನ್ ಖಾನ್ ಮಾತನಾಡಿ,

​೧. ನಮ್ಮ ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿದ್ದಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಗೆ ದಬ್ಬಾಳಿಕೆ, ಅನ್ಯಾಯ, ನರಮೇಧ ಮತ್ತು ಸೇನೆಯ ದಾಳಿಯನ್ನು ಎದುರಿಸಬೇಕಾಗುತ್ತಿದೆ.

೨. ಈ ಕಠಿಣ ಸಮಯದಲ್ಲಿ ನಮ್ಮ ಆಹಾರ ಮತ್ತು ಔಷಧಿಗಳ ಪೂರೈಕೆಯನ್ನು ತಡೆಹಿಡಿಯಲಾಗಿದೆ.

೩. ಗಡಿಯಾಚೆಗಿರುವ ಎಲ್ಲಾ ಜನರು ಮತ್ತು ವಿಶೇಷವಾಗಿ ಶ್ರೀನಗರ, ಪೂಂಚ್, ಮೆಂಧರ್, ರಾಜೌರಿ, ಜಮ್ಮು, ಕಾಶ್ಮೀರ ಕಣಿವೆ, ಲಡಾಖ್ ಮತ್ತು ಕಾರ್ಗಿಲ್‌ ನ ಜನರಿಗೆ ನಾವು ಕರೆ ನೀಡುತ್ತಿದ್ದೇವೆ. ನಮ್ಮ ಆಂದೋಲನಕ್ಕೆ ನಿಮ್ಮ ಬೆಂಬಲದ ಅಗತ್ಯವಿದೆ. ನೀವು ಮುಂದೆ ಬರಲೇಬೇಕು ಮತ್ತು ನಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು.

ಈ ಹಿಂದೆಯೂ ಧ್ವನಿ ಎತ್ತಲಾಗಿತ್ತು

​ಇದಕ್ಕೂ ಮುನ್ನ ಜೂನ್ ೩೦ ರಂದು ಪಾಕಿಸ್ತಾನಿ ಅಧಿಕಾರಿಗಳ ದಬ್ಬಾಳಿಕೆಯ ಕ್ರಮವನ್ನು ಖಂಡಿಸಿ ಈ ಸಮಿತಿ ಬೃಹತ್ ಆಂದೋಲನ ನಡೆಸಿತ್ತು. ಕೇವಲ ರಾಜಕೀಯ ಚಟುವಟಿಕೆಗಳ ಮೇಲಷ್ಟೇ ಸರ್ಕಾರ ನಿರ್ಬಂಧ ಹೇರಿಲ್ಲ, ಇಡೀ ಪ್ರದೇಶದಲ್ಲಿ ಆಹಾರ ಧಾನ್ಯಗಳ ಪೂರೈಕೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿ ಜನರಿಗೆ ತಲುಪದಂತೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇದರಿಂದ ಸರಕಾರದ ಅಸಲಿ ಮುಖವಾಡ ಹೊರಬಿದ್ದಿದೆ ಎಂದು ಈ ಸಮಿತಿ ಆರೋಪಿಸಿತ್ತು.

ವಿಶ್ವಸಂಸ್ಥೆಯ ಕಚೇರಿಯ ಹೊರಗೆ ಪ್ರತಿಭಟನೆ

​ಜುಲೈ ೨ ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ 'ನ್ಯಾಷನಲ್ ಆಂಟಿ-ಟೆರರಿಸಂ ಫ್ರಂಟ್ ಆಫ್ ಇಂಡಿಯಾ' ಸಂಸ್ಥೆಯು ವಿಶ್ವಸಂಸ್ಥೆಯ ಕಚೇರಿಯ ಹೊರಗೆ ತೀವ್ರ ಪ್ರತಿಭಟನೆ ನಡೆಸಿತು. ಈ ಪ್ರದೇಶದಲ್ಲಿ ನಡೆಯುತ್ತಿರುವ ಕೊಲೆ ಮತ್ತು ಮಾನವ ಹಕ್ಕುಗಳ ವ್ಯವಸ್ಥಿತ ಉಲ್ಲಂಘನೆಯನ್ನು ತಡೆಯಲು ತಕ್ಷಣ ಜಾಗತಿಕ ಹಸ್ತಕ್ಷೇಪ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada