Dailyhunt Logo
  • Light mode
    Follow system
    Dark mode
    • Play Story
    • App Story
ಪಾಕಿಸ್ತಾನ ಮತ್ತು ಟರ್ಕಿಯೆ ಮಧ್ಯಪ್ರವೇಶಿಸಿದರೆ ನೇರ ದಾಳಿ ಎದುರಿಸಬೇಕಾಗುತ್ತದೆ!

ಪಾಕಿಸ್ತಾನ ಮತ್ತು ಟರ್ಕಿಯೆ ಮಧ್ಯಪ್ರವೇಶಿಸಿದರೆ ನೇರ ದಾಳಿ ಎದುರಿಸಬೇಕಾಗುತ್ತದೆ!

ಹೌತಿ ಬಂಡುಕೋರರಿಂದ ಕಟ್ಟರ್'ಮೆಕ್ಕಾ ಒಪ್ಪಂದ'ದ ಕುರಿತು ನೇರ ಬೆದರಿಕೆ

ರಾಚಿ - ಸೌದಿ ಅರೇಬಿಯಾದಲ್ಲಿ ಟರ್ಕಿಯೆ ಮತ್ತು ಪಾಕಿಸ್ತಾನಿ ಸೇನಾಪಡೆಗಳನ್ನು ನಿಯೋಜಿಸುವುದರ ವಿರುದ್ಧ ಹೌತಿ ಬಂಡುಕೋರರು ಎರಡೂ ದೇಶಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಹೌತಿ ನಾಯಕ ಅಲ್-ಬುಖೈತಿ ಮಾತನಾಡಿ, ಪಾಕಿಸ್ತಾನ ಮತ್ತು ಟರ್ಕಿಯೆ ಮಧ್ಯಪ್ರವೇಶಿಸಿದರೆ, ನೇರ ದಾಳಿ ಎದುರಿಸಬೇಕಾಗುತ್ತದೆ. ಯೆಮೆನ್ ಇನ್ನೂ ರಕ್ಷಣಾತ್ಮಕ ನಿಲುವನ್ನೇ ತಳೆದಿದೆ. ಪಾಕಿಸ್ತಾನ ಮತ್ತು ಟರ್ಕಿಯೆ ಮಧ್ಯಪ್ರವೇಶಿಸಿದರೆ ಅದನ್ನು ನಾವು ಸಹಿಸುವುದಿಲ್ಲ. ಯೆಮೆನ್ ಯಾವುದೇ ವಿದೇಶಿ ಶಕ್ತಿಯ ಮಧ್ಯಪ್ರವೇಶವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

​ಆಗಸ್ಟ್ ೭ ರಂದು ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿಯೆ 'ಮೆಕ್ಕಾ ಒಪ್ಪಂದ'ಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಪ್ರಕಾರ, ಈ ಮೂರು ದೇಶಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ದಾಳಿಯಾದರೆ ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುವುದು ಮತ್ತು ಮೂರೂ ದೇಶಗಳು ತಿರುಗೇಟು ನೀಡುವುದು. ಈ ಒಪ್ಪಂದವನ್ನು 'ನ್ಯಾಟೋ' ದ(ವಿಶ್ವದ ೨೯ ದೇಶಗಳನ್ನು ಒಳಗೊಂಡಿರುವ 'ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್' ಎಂಬ ಸೈನ್ಯ ಸಂಘಟನೆ) ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ. ಆದ್ದರಿಂದಲೇ ಇದನ್ನು 'ಇಸ್ಲಾಮಿಕ್ ನ್ಯಾಟೋ' ಎಂದು ಕರೆಯಬಹುದು ಎಂದು ಟರ್ಕಿಯೆ ಹೇಳಿತ್ತು. ಆದರೆ ಸೌದಿ ಅರೇಬಿಯಾ ಮೇಲೆ ದಾಳಿಗಳು ನಡೆಯುತ್ತಿರುವಾಗ ಟರ್ಕಿಯೆ ಮತ್ತು ಪಾಕಿಸ್ತಾನ ಎರಡೂ ದೇಶಗಳು ಮೌನವಾಗಿವೆ. ಆದರೂ ಕೂಡ, ಈ ಯುದ್ಧದಲ್ಲಿ ಮಧ್ಯಪ್ರವೇಶಿಸಿದರೆ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಹೌತಿ ಎಚ್ಚರಿಕೆ ನೀಡಿದೆ.

​ಮೆಕ್ಕಾ ಒಪ್ಪಂದದ ಹಿಂದಿರುವ ಪಾಕಿಸ್ತಾನದ ಉದ್ದೇಶ ಅಸ್ಪಷ್ಟವಾಗಿದೆ, ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆಫ್ಟಿನೆಂಟ್ ಜನರಲ್ ಎಚ್.ಆರ್. ಮೆಕ್‌ಮಾಸ್ಟರ್ ಆರೋಪಿಸಿದ್ದಾರೆ.

ಸೌದಿಯ ರಾಜಧಾನಿಯನ್ನೇ ಗುರಿಯಾಗಿಸಿದ ಹೌತಿಗಳು

ಹೌತಿ ಬಂಡುಕೋರರು ಬ್ಯಾಲಿಸ್ಟಿಕ್ ಕ್ಷಿಪಣಿಯ ಮೂಲಕ ರಾಜಧಾನಿ ರಿಯಾದ್ ಅನ್ನು ಗುರಿಯಾಗಿಸಲು ಪ್ರಯತ್ನಿಸಿದ್ದಾರೆಂದು ಸೌದಿ ಅರೇಬಿಯಾ ಮಾಹಿತಿ ನೀಡಿದೆ. ಇರಾನ್ ಬೆಂಬಲಿತ ಬಂಡುಕೋರರೊಂದಿಗಿನ ಸಂಘರ್ಷ ತೀವ್ರಗೊಂಡ ನಂತರ ರಿಯಾದ್ ಅನ್ನು ಗುರಿಯಾಗಿಸಿಕೊಂಡ ಮೊದಲ ಪ್ರಯತ್ನ ಇದಾಗಿದೆ ಎಂದು ತಿಳಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada