Dailyhunt Logo
  • Light mode
    Follow system
    Dark mode
    • Play Story
    • App Story
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ 'ಹಿಂದೂ ಕೇಸರಿ' ಪ್ರಶಸ್ತಿ ನೀಡಿ ಗೌರವ!

ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ 'ಹಿಂದೂ ಕೇಸರಿ' ಪ್ರಶಸ್ತಿ ನೀಡಿ ಗೌರವ!

ಸಾವಿರಾರು ಹಿಂದೂಗಳನ್ನು ಹಿಂದೂ ಧರ್ಮಕ್ಕೆ ಘರವಾಪಸಿಗಾಗಿ ಶ್ರಮಿಸಿದ್ದಕ್ಕಾಗಿ ಗೌರವ

'ಹಿಂದೂ ಕೇಸರಿ' ಪ್ರಶಸ್ತಿ ಸ್ವೀಕರಿಸುತ್ತಿರುವ ಶ್ರೀ.. ಪ್ರಬಲ ಪ್ರತಾಪ ಜುದೇವ

ನವ ದೆಹಲಿ - ಇಲ್ಲಿನ 'ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ'ದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಖರ ಹಿಂದುತ್ವನಿಷ್ಠ ಶ್ರೀ..

ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ 'ಹಿಂದೂ ಕೇಸರಿ ಸೇವೆ, ಸುರಕ್ಷತೆ ಮತ್ತು ಸಮರಸತೆ (ಸೌಹಾರ್ದತೆ) ಪ್ರಶಸ್ತಿ' ಪ್ರದಾನ ಮಾಡಲಾಯಿತು. 'ಮೈ ಹೋಮ್ ಇಂಡಿಯಾ' ಸಂಸ್ಥೆಯ ವತಿಯಿಂದ ಸಮಾಜ ಸೇವೆ, ಸನಾತನ ಸಂಸ್ಕೃತಿಯ ರಕ್ಷಣೆ ಮತ್ತು ಸಾಮಾಜಿಕ ಸೌಹಾರ್ದತೆ ಕ್ಷೇತ್ರಗಳಲ್ಲಿ ಶ್ರೀ. ಜುದೇವ ಅವರ ಗಮನಾರ್ಹ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಶ್ರೀ. ಜುದೇವ ಅವರು ತಮ್ಮ ದಿವಂಗತ ತಂದೆ ಕುಮಾರ ದಿಲೀಪ ಸಿಂಗ ಜುದೇವ ಅವರು ಪ್ರಾರಂಭಿಸಿದ ಐತಿಹಾಸಿಕ 'ಘರ್ ವಾಪಸಿ ಅಭಿಯಾನ'ವನ್ನು (ಮತಾಂತರಗೊಂಡವರನ್ನು ಹಿಂದೂ ಧರ್ಮಕ್ಕೆ ಮರುಸೇರ್ಪಡೆಗೊಳಿಸುವ ಅಭಿಯಾನ) ನಿರಂತರವಾಗಿ ಮುನ್ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಈ ಅಭಿಯಾನದ ಮೂಲಕ ವೈದಿಕ ಮಂತ್ರೋಚ್ಚಾರಣೆ ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳ ಮಾಧ್ಯಮದಿಂದ ಮತಾಂತರಗೊಂಡಿದ್ದ ಸಾವಿರಾರು ಹಿಂದೂ ಬಾಂಧವರ ಘರ್ ವಾಪಸಿಯನ್ನು ಯಶಸ್ವಿಯಾಗಿ ಮಾಡಲಾಗಿದೆ.

ನನ್ನ ತಂದೆಯ ಆದರ್ಶಗಳ ಹಾದಿಯಲ್ಲಿ ನಡೆಯುವ ಪ್ರಯತ್ನ! - ಜುದೇವ ಅವರ ಮನೋಗತ

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ. ಜುದೇವ ಅವರು, ಈ ಗೌರವವನ್ನು ಸ್ವೀಕರಿಸುವುದು ನನಗೆ ಅತ್ಯಂತ ಭಾಗ್ಯದ ಮತ್ತು ಪ್ರೇರಣಾದಾಯಕ ಸಂಗತಿಯಾಗಿದೆ. ನನ್ನ ಪೂಜನೀಯ ತಂದೆ ದಿವಂಗತ ಕುಮಾರ ದಿಲೀಪ ಸಿಂಗ ಜುದೇವ ಅವರು ತಮ್ಮ ಇಡೀ ಜೀವನವನ್ನು ಸನಾತನ ಸಂಸ್ಕೃತಿ, ರಾಷ್ಟ್ರಸೇವೆ ಮತ್ತು ಸಾಮಾಜಿಕ ಸೌಹಾರ್ದತೆಗಾಗಿ ಸಮರ್ಪಿಸಿದ್ದರು. ಅವರ ಆದರ್ಶಗಳು ಮತ್ತು ಆಶೀರ್ವಾದಗಳಿಂದಲೇ ನಾನು ಈ ಅಭಿಯಾನವನ್ನು ನಿರಂತರವಾಗಿ ಮುನ್ನಡೆಸಲು ಪ್ರಯತ್ನಿಸುತ್ತಿದ್ದೇನೆ. ಈ ಪ್ರಶಸ್ತಿಯು ತಮಗೆ ಹೊಸ ಶಕ್ತಿಯನ್ನು ನೀಡುತ್ತದೆ ಮತ್ತು ಸಮಾಜ ಹಾಗೂ ರಾಷ್ಟ್ರದ ಕಲ್ಯಾಣಕ್ಕಾಗಿ ನಿರಂತರವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಅವರು ಮುಂದೆ ಹೇಳಿದರು. ಸನಾತನ ಸಂಸ್ಕೃತಿಯ ರಕ್ಷಣೆ, ಸೇವೆ, ಸುರಕ್ಷತೆ ಮತ್ತು ಸೌಹಾರ್ದತೆಗೆ ಸಮರ್ಪಿತವಾಗಿರುವ ಈ ಅಭಿಯಾನವು ಭವಿಷ್ಯದಲ್ಲೂ ಸಂಪೂರ್ಣ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನಿರಂತರವಾಗಿ ಮುಂದುವರಿಯುತ್ತದೆ.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ರಾಜ್ಯ ಸಚಿವ ಡಾ. ರಾಜ ಭೂಷಣ ಚೌಧರಿ, ಪ್ರಖರ ರಾಷ್ಟ್ರವಾದಿ ಸಂತ ಪೂ. ಸ್ವಾಮಿ ಜಿತೇಂದ್ರಾನಂದ ಸರಸ್ವತಿ, ಮಹಾರಾಷ್ಟ್ರ ಸರಕಾರದ ಸಚಿವ ಶ್ರೀ. ಜಯಕುಮಾರ ರಾವಲ, ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ರಾಜಕಾರಣಿ ಶ್ರೀ. ಸತ್ಯನಾರಾಯಣ ಜಟಿಯಾ ಮತ್ತು 'ಮೈ ಹೋಮ್ ಇಂಡಿಯಾ' ಸಂಸ್ಥಾಪಕ ಶ್ರೀ. ಸುನಿಲ ದೇವಧರ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಈ ಪ್ರಶಸ್ತಿಯನ್ನು 'ಸುದರ್ಶನ್ ನ್ಯೂಸ್' ಮುಖ್ಯ ಸಂಪಾದಕ ಶ್ರೀ. ಸುರೇಶ್ ಚವ್ಹಾಣ್ಕೆ ಅವರಿಗೆ ಪ್ರದಾನ ಮಾಡಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada