Dailyhunt Logo
  • Light mode
    Follow system
    Dark mode
    • Play Story
    • App Story
ಪ್ರತ್ಯಕ್ಷ ಮತ್ತು ಪರೋಕ್ಷ ದಾಳಿಗಳು

ಪ್ರತ್ಯಕ್ಷ ಮತ್ತು ಪರೋಕ್ಷ ದಾಳಿಗಳು

ಭಾರತವು ಅಭಿವೃದ್ಧಿಶೀಲ ದೇಶ ಮಾತ್ರವಲ್ಲ, ಭಾರತದ ಯುವಕರು ನಾಯಕತ್ವ ವಹಿಸಬಲ್ಲ ಶಕ್ತಿಯಾಗಿದ್ದಾರೆ, ಎಂದು 'ಬ್ಯಾಲೆಸ್ಟಿಕ್ ಲರ್ನಿಂಗ್ ಸಿಸ್ಟಮ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ (ಸಿಇಒ) ಸ್ಮೃತಿ ಬಜಾಜ ಹೇಳಿದ್ದಾರೆ. ಭಾರತದಲ್ಲಿ ನಿಖರವಾಗಿ ಇದೇ ಸಂಘಟನೆಯನ್ನು, ಈ ಯುವಶಕ್ತಿಯನ್ನು ವಿದೇಶಿ ಶಕ್ತಿಗಳು ಬೆಳೆಯಲು ಬಿಡಲು ಬಯಸುವುದಿಲ್ಲ; ಅದಕ್ಕಾಗಿಯೇ ಅದನ್ನು ಛಿದ್ರಗೊಳಿಸಲು ಪ್ರಯತ್ನಿಸುತ್ತಿವೆ.

ಆದ್ದರಿಂದ ಅವರಿಗೆ ಶಕ್ತಿಶಾಲಿ ವ್ಯಕ್ತಿಗಳ ರಾಜೀನಾಮೆ ಬೇಕಾಗಿದೆ. ಭಾರತದ ಕಾರ್ಯತಂತ್ರದ ಮತ್ತು ಆರ್ಥಿಕ ಶಕ್ತಿಯನ್ನು ಗಮನಿಸಿದರೆ ಯಾವುದೇ ದೇಶಕ್ಕೆ ಭಾರತದ ಮೇಲೆ ನೇರ ದಾಳಿ ಮಾಡಲು ಸಾಧ್ಯವಿಲ್ಲ. 'ಭಾರತದ ಯುವ ಶಕ್ತಿಯನ್ನು ಕಡಿಮೆ ಮಾಡಿ ಭಾರತದ ಸಂಘಟಿತಶಕ್ತಿಯನ್ನು ವಿಘಟಿಸುವುದು, ಈ (ಬ್ರಿಟಿಷರಂತೆ ಒಡೆದಾಳುವ) ನೀತಿಯನ್ನು ವಿದೇಶಿ ಶಕ್ತಿಗಳು ಬಾಂಗ್ಲಾದೇಶ ಸೇರಿದಂತೆ ಎಲ್ಲೆಡೆ ಬಳಸುತ್ತಿವೆ. 'ರೆಜೀಮ್ ಚೇಂಜ್ ಎಂದರೆ ಕೇವಲ ಅಧಿಕಾರ ಬದಲಾವಣೆ ಎಂದಲ್ಲ, ಬದಲಿಗೆ 'ವಿದೇಶಗಳ ಸಹಾಯದಿಂದ ಆಗುವ ಅಧಿಕಾರ ಬದಲಾವಣೆ. ಈ 'ವಿದೇಶಿ ಶಕ್ತಿಯು ಯುವ ಪೀಳಿಗೆಯ ಮನಸ್ಸನ್ನು ವಶಪಡಿಸಿಕೊಂಡಿದೆ. 'ಇಲ್ಲಿನ ಸಂಸ್ಕೃತಿ, ಸಮಾಜ, ಕುಟುಂಬ, ಜನ ಮತ್ತು ಅವರ ವಿಚಾರಗಳೆಲ್ಲವೂ ಪರಕೀಯ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿ, ವಿಚಾರಗಳು ಏನೇನಿವೆಯೋ ಅವೇ ನಮ್ಮವು, ಎಂಬುದನ್ನು ಅವರಲ್ಲಿ ಬಿತ್ತುವುದರಲ್ಲಿ ಈ ವಿದೇಶಿ ಶಕ್ತಿ ಹಾಗೂ ಅಲ್ಲಿನ ವಿಚಾರವಾದಿಗಳು ಮತ್ತು ಬಂಡವಾಳಶಾಹಿಗಳು ಚೆನ್ನಾಗಿ ಯಶಸ್ವಿಯಾಗಿದ್ದಾರೆ. ಇದು ಸಾಧ್ಯವಾಯಿತು ಎನ್ನುವುದಕ್ಕೆ ಕಾರಣ, ಯುವ ಪೀಳಿಗೆಯೊಂದಿಗೆ ಅವರ ಹಿಂದಿನ ಪೀಳಿಗೆಗೂ 'ಸ್ವಬೋಧನೆ ಇಲ್ಲದಿರುವುದು. ಕಾಂಗ್ರೆಸ್‌ನ ಹಿಂದೂದ್ವೇಷಿ ಮನೋಭಾವನೆಯ ಕೊಳಕು ರಾಜಕಾರಣದಿಂದ ಸ್ವಾತಂತ್ರ್ಯದ ನಂತರದ ಪೀಳಿಗೆಗಳಿಗೆ 'ಸ್ವಯಂಬೋಧನೆಯೇ ಆಗಿಲ್ಲ. ಇದರಿಂದಾಗಿ ಈಗಿನ 'ಜೆನ್ ಜೀಗೆ ('ವರ್ಷ ೧೯೯೭ ರಿಂದ ೨೦೧೨ ರ ನಡುವೆ ಜನಿಸಿದ ಪಿಳಿಗೆಗೆ) 'ಶತ್ರುಬೋಧವು ಬಹಳ ದೂರ ಉಳಿದಿದೆ.

ಸದ್ಯ ಭಾರತಕ್ಕೆ ಯುದ್ಧದ ರಣರಂಗಣವೆಂದರೆ ಕೇವಲ 'ನೆಲವಲ್ಲ. 'ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಯುವ ಪೀಳಿಗೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ದೇಶವನ್ನು ಒಡೆಯುವುದು, ಎಂಬುದು ಈ ರಣನೀತಿಯಾಗಿದೆ. ಎಲ್ಲಾ ಕೊಂಡಿಗಳು ವಿದೇಶಗಳ ಕೈಯಲ್ಲಿರುವ ಸಾಮಾಜಿಕ ಜಾಲತಾಣಗಳು ಮತ್ತು ಅವುಗಳ 'ಅಲ್ಗಾರಿದಮ್ (ಯಾವುದಾದರೂ ಕೆಲಸವನ್ನು ಸರಿಯಾದ ಕ್ರಮದಲ್ಲಿ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಏನು ತೋರಿಸಬೇಕು ಎಂಬುದಕ್ಕಾಗಿ) ನಿರ್ಮಿಸಲಾದ ನಿಯಮಬದ್ಧ ಪದ್ಧತಿಯು ಇವುಗಳ ಅಸ್ತ್ರವಾಗಿದೆ ಮತ್ತು ಯುವ ಪೀಳಿಗೆಯ ಮನಸ್ಸು ಅವರ ರಣಾಂಗಣವಾಗಿದೆ. ಅವರ ವೈಚಾರಿಕ ಮತ್ತು ಮಾನಸಿಕ ಯುದ್ಧದಿಂದ ಇಂದು ಭಾರತದ ಕೆಲ ಯುವ ಪೀಳಿಗೆಯು ಪ್ರಭಾವಿತಗೊಂಡಿದೆ. ಯುದ್ಧವು ಪರಮ ಸೀಮೆಯಲ್ಲಿದೆ. ವೈವಿಧ್ಯದಲ್ಲಿ ಏಕತೆ ಎಂಬ ಸುಳ್ಳು ಕಥಾನಕವನ್ನು ದೇಶದ ವೈಶಿಷ್ಟ್ಯವೆಂದು ಕಾಂಗ್ರೆಸ್ ಕಾಲದಲ್ಲಿ ಬಿತ್ತರಿಸಲಾಯಿತು. ಅದರಿಂದ 'ಇಲ್ಲಿ ವೈವಿಧ್ಯತೆ ಇದೆ, ಎಂಬುದೇ ಹೆಚ್ಚು ಬಿಂಬಿತವಾಯಿತು. ಇಲ್ಲಿನ ಏಕತೆಯನ್ನು ಒಡೆದರೆ, ಎಲ್ಲಾ 'ವೈವಿಧ್ಯತೆಯು ಹಾಗೆಯೇ ಉಳಿಯುತ್ತದೆ, ಎಂಬುದನ್ನು ಬಾಹ್ಯ ಶಕ್ತಿಗಳು ಅರಿತುಕೊಂಡಿವೆ. ಆದ್ದರಿಂದ ದೇಶ ಹಿತದ ಕಾನೂನುಗಳು ಮತ್ತು ಚುನಾವಣಾ ಪ್ರಕ್ರಿಯೆಯನ್ನು ವಿರೋಧಿಸಿದ ಸಂದರ್ಭಗಳ ಲಾಭವನ್ನು ಅವರು ಪಡೆದುಕೊಂಡಿದ್ದಾರೆ. ವರ್ಷ ೨೦೨೧ ರಲ್ಲಿ ಕೃಷಿ ಹೋರಾಟವು ಒಂದು ತಾಲೀಮು ಆಗಿತ್ತು, ಎಂದು ಅವರು ಬಹಿರಂಗವಾಗಿಯೂ ಹೇಳಿದ್ದರು. ಜಿಹಾದಿಗಳು, ಕ್ರೈಸ್ತರು, ಬಂಡವಾಳಶಾಹಿಗಳು, ಸಾಮ್ಯವಾದಿಗಳು, ಅಮೆರಿಕದ ಸನಾತನದ್ವೇಷಿ ವಿಶ್ವವಿದ್ಯಾಲಯಗಳು ಭಾರತದ ವಿರುದ್ಧ ಒಕ್ಕೂಟ ರಚಿಸಿಕೊಂಡಿವೆ. ಭಾರತದ ಜಾತ್ಯತೀತರು, ಪ್ರಗತಿಪರರು ಮತ್ತು ಹಿಂದೂಯೇತರರು ಅವರಿಗೆ 'ಗುಪ್ತವಾಗಿ ಮತ್ತು ಬಹಿರಂಗವಾಗಿ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಇದರಲ್ಲಿ ಒಂದು ಕುತೂಹಲದ ಸಂಗತಿಯೆಂದರೆ, ಮೂಲತಃ ರಷ್ಯಾದಿಂದ ಜಗತ್ತಿನಾದ್ಯಂತ ಹಬ್ಬಿದ ಸಾಮ್ಯವಾದಿ ವಿಚಾರವನ್ನು ಜಿಹಾದಿಗಳು, ಕ್ರೈಸ್ತರು ಮತ್ತು ಬಂಡವಾಳಶಾಹಿಗಳು ಯಾವಾಗ ಹತ್ತಿರ ಮಾಡಿಕೊಳ್ಳುತ್ತಾರೆಂದರೆ, (ವಿಶೇಷವಾಗಿ) ಅವರಿಗೆ ಭಾರತದ ವಿರುದ್ಧ ದಾಳಿ ಮಾಡಬೇಕಿರುವಾಗ ! ಉದಾಹರಣೆಗೆ ವಿಶ್ವವಿದ್ಯಾಲಯದ ನಗರ ಸಾಮ್ಯವಾದಿಗಳನ್ನು ಹತ್ತಿರ ಮಾಡಿಕೊಂಡು ಜಿಹಾದಿಗಳು 'ಭಾರತ ತೇರೆ ತುಕ್ಡೆ ಹೋಂಗೆ ಎಂಬ ಘೋಷಣೆಯನ್ನು ನೇರವಾಗಿ ಕೂಗುತ್ತಾರೆ, ಈಶಾನ್ಯ ಮತ್ತು ಚೀನಾ ದೇಶದಸಾಮ್ಯವಾದಿಗಳನ್ನು ಹತ್ತಿರ ಮಾಡಿಕೊಂಡು ಕ್ರಿಶ್ಚಿಯನ್ ಗಲಭೆಯಂತಹ ಪರಿಸ್ಥಿತಿಯನ್ನು ಕಾಯ್ದುಕೊಳ್ಳುತ್ತಾರೆ, ಕೇರಳದಲ್ಲಿ ಸ್ಥಳೀಯ ಸಾಮ್ಯವಾದಿಗಳೊಂದಿಗೆ ಕೈಜೋಡಿಸಿ ಜಿಹಾದಿ ಸಂಘಟನೆಗಳನ್ನು ಕಟ್ಟುತ್ತಾರೆ ಅಥವಾ ಅಮೆರಿಕದ ಬಂಡವಾಳಶಾಹಿಗಳು ಭಾರತದ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಹಿಂದೂವಿರೋಧಿ ವಾತಾವರಣವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಾರೆ.

ಎಲ್ಲೆಡೆ ಅವರದ್ದೇ ರಾಜ್ಯ : ಇಂದಿಗೂ ನಾವು ಗುಲಾಮಗಿರಿಯಲ್ಲೇ !

ಅವರೇ ವಿವಿಧ ಮೊಬೈಲ್ ಫೋನ್‌ಗಳನ್ನು ತಂದರು. ಸಾಮಾಜಿಕ ಜಾಲತಾಣಗಳ ಎಲ್ಲಾ ಸಂಸ್ಥೆಗಳೂ ಅವರದ್ದೇ ! ಇಂದು ಎಕ್ಸ್ (ಟ್ವಿಟರ್) ಸಂಸ್ಥೆಯು ಆಗಾಗ್ಗೆ ದೇಶದ ಪ್ರಧಾನಿ ಅಥವಾ ಗೃಹಸಚಿವರ ಕುರಿತಾದ ಬರಹಗಳನ್ನು ತೆಗೆದುಹಾಕುವ ಧೈರ್ಯ ಮಾಡುತ್ತದೆ. ಯಾವುದು ಭಾರತ ಮತ್ತು ಅದರ ಸಂಸ್ಕೃತಿಯ ಶಕ್ತಿಯನ್ನು ತೋರಿಸುತ್ತದೆಯೋ, ಅದನ್ನು ಅವರ ಅಲ್ಗಾರಿದಮ್ನಿಂದ ತೆಗೆದುಹಾಕಲಾಗುತ್ತದೆ. ಭಾರತದ ಗ್ರಾಮೀಣ ಭಾಗದ ಬಾಕ್ಸರ್ ಅರುಂಧತಿ ಗೆದ್ದ ಚಿನ್ನದ ಪದಕವನ್ನು ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಪ್ರಶಂಸಿಸಲಾಗುವುದಿಲ್ಲ. 'ಫೇಸ್‌ಬುಕ್, 'ಯೂಟ್ಯೂಬ್, 'ಎಕ್ಸ್, 'ಇನ್‌ಸ್ಟಾಗ್ರಾಮ್ಗಳಲ್ಲಿ ಏನು ತೋರಿಸಬೇಕು ? ಇಲ್ಲಿನ ಯುವ ಪೀಳಿಗೆಗೆ ಏನು ನೋಡುವಂತೆ ಒತ್ತಾಯಿಸಬೇಕು ? ಇದೆಲ್ಲವನ್ನೂ ಅವರು ನಿರ್ಧರಿಸಿ ಆ ಯುದ್ಧವನ್ನು ಆಡುತ್ತಿದ್ದಾರೆ. ಹಿಂದೆ ಅವರು ದೂರದರ್ಶನ ವಾಹಿನಿಗಳ 'ಧಾರಾವಾಹಿಗಳಲ್ಲಿ ಬಂಡವಾಳ ಹಾಕಿ, ವಿವಾಹೇತರ ಸಂಬಂಧಗಳಿಗೆ ವಿಪರೀತ ಪ್ರೋತ್ಸಾಹ ನೀಡಿ ಭಾರತದ ಆಧಾರಸ್ತಂಭವಾದ ಕುಟುಂಬ ವ್ಯವಸ್ಥೆಯನ್ನು ನಾಶ ಮಾಡಿದರು, ನಂತರ 'ವೆಬ್ ಸೀರಿಸ್ಗಳ ಮೂಲಕ ಮನೆಮನೆಗೆ ಅಗಾಧ ಅಸಭ್ಯತೆ ಮತ್ತು ಭೀಕರತೆಯನ್ನು ತಂದರು. ಮಾದಕ ವಸ್ತುಗಳು ಮತ್ತು 'ನೇರ ಲೈಂಗಿಕ ಸಂಬಂಧಗಳನ್ನು ತೋರಿಸುವ ಕಿರುಚಿತ್ರಗಳು ಇಲ್ಲಿನ ಯುವ ಪೀಳಿಗೆಯನ್ನು ನಾಶಪಡಿಸಿವೆ. ಇವೆಲ್ಲದರ ಹಿಂದೆ ಜಿಹಾದಿಗಳು, ಕ್ರೈಸ್ತರು, ಸಾಮ್ಯವಾದಿಗಳು ಮತ್ತು ಬಂಡವಾಳಶಾಹಿಗಳ ಒಕ್ಕೂಟವೇ ಇದೆ. ತಿನ್ನುವ-ಕುಡಿಯುವ ಆಹಾರ, ಉಡುಗೆ-ತೊಡುಗೆ, ಸೌಂದರ್ಯವರ್ಧಕಗಳು, ಆಭರಣಗಳು ಹೀಗೆ ಎಲ್ಲ ಸಂಸ್ಕೃತಿಗಳ ಮೇಲೆ ವಿದೇಶಿ ಸಂಸ್ಥೆಗಳು ಪ್ರಭಾವ ಬೀರಿದ್ದರಿಂದ ನಮ್ಮ ಮೂಲ ಮಣ್ಣಿನೊಂದಿಗಿನ ನಂಟು ಕಳಚಿಹೋಗುತ್ತಿದೆ. ಅವರದ್ದೇ ಪ್ರಭಾವದಿಂದ ರಾಸಾಯನಿಕಯುಕ್ತ ಕೃಷಿ ಮಾಡಿ ಅಪೌಷ್ಟಿಕ ಆಹಾರವನ್ನು ನಾವು ಸೇವಿಸುತ್ತಿದ್ದೇವೆ. ಅವರ ಪ್ರಭಾವದಿಂದಲೇ ನೈಸರ್ಗಿಕ ಜೀವನಶೈಲಿಯನ್ನು ಬದಲಾಯಿಸಿಕೊಂಡು ಈಗ ಅಸಂಖ್ಯಾತ ದೈಹಿಕ, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ನಾವು, ಅವರದೇ 'ಅಲ್ಗಾರಿದಮ್ ಮೂಲಕ ಬರುವ ಆರೋಗ್ಯ ಮತ್ತು ಯೋಗದ 'ರೀಲ್ಸ್ಗಳನ್ನು ನೋಡುತ್ತಾ ಅವರದೇ ಔಷಧಗಳು ಮತ್ತು ಉತ್ಪನ್ನಗಳನ್ನು ಸೇವಿಸುತ್ತಿದ್ದೇವೆ. ಈ ಚಕ್ರವನ್ನು ಭೇದಿಸುವ ಕಾರ್ಯ ಆರಂಭವಾಗಿದೆ; ಆದರೆ ಅದು ಈಗ ಅಪಾರ ವೇಗವನ್ನು ಪಡೆದುಕೊಳ್ಳಬೇಕು.

ಪರಿಹಾರೋಪಾಯಗಳು

ಅಮೆರಿಕದ ಪ್ರಾಬಲ್ಯವನ್ನು ಮುರಿದು 'ನಾವು ನಮ್ಮ ದೇಶದ ಹಿತಾಸಕ್ತಿಗೆ ತಕ್ಕಂತೆ ಸ್ವತಂತ್ರ ನೀತಿಗಳನ್ನು ರೂಪಿಸುತ್ತೇವೆ ಎಂಬ ವರ್ಚಸ್ಸನ್ನು ನಾವು ನಿರ್ಮಿಸಿದ್ದೇವೆ. ಅದಕ್ಕಾಗಿಯೇ 'ಅಭಿವೃದ್ಧಿ ಹೊಂದಿದ ದೇಶಗಳಿಂದಲೇ ಪರಿಸರವು ಹೆಚ್ಚು ಹದಗೆಟ್ಟಿದೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಳಲು ನಾವು ಹಿಂಜರಿಯಲಿಲ್ಲ; ಆದರೆ ಈ ಗುಲಾಮಗಿರಿಯನ್ನು ಕಿತ್ತೊಗೆಯಲು ಈಗ ಕಟಿ ಬದ್ಧರಾಗಬೇಕು. ಇದು ಕೇವಲ ಕೆಲವು ವಿದೇಶಿ ಹೆಸರುಗಳನ್ನು ಬದಲಾಯಿಸುವುದಕ್ಕೆ ಸೀಮಿತವಾಗಿಲ್ಲ, ಎಂಬುದು ಅವರ ಪ್ರಭಾವಕ್ಕೆ ಒಳಗಾಗಿರುವ ಯುವ ಪೀಳಿಗೆಗೆ ಅರಿವಾಗಬೇಕು. ಇಂತಹ ವೈಚಾರಿಕ ಪರಿವರ್ತನೆಯನ್ನು ಮತ್ತೊಮ್ಮೆ ಮಾಡುವುದು ಭಾರತದ ಹಿಂದುತ್ವನಿಷ್ಠ ವಿಚಾರವಾದಿಗಳು ಮತ್ತು ನಾಯಕರಿಗೆ ಸವಾಲಾಗಿದೆ. ಪಠ್ಯಕ್ರಮದಲ್ಲಿ ಬದಲಾವಣೆ, ಸತ್ಯ ಇತಿಹಾಸದ ಪುನರುಜ್ಜೀವನ, ಸಂಸ್ಕೃತದ ಪ್ರಸಾರ, ಪ್ರಾಚೀನ ಸಂಸ್ಕೃತಿಯ ಅಭಿಮಾನವನ್ನು ಮೂಡಿಸುವ ಎಲ್ಲ ವಿಷಯಗಳ ಪ್ರಸಾರ, ಹಳ್ಳಿಗಾಡಿನ ವಿದ್ಯಾರ್ಥಿಗಳು ಮಾಡುತ್ತಿರುವ ಶೋಧನೆಗಳು, ಇಲ್ಲಿನ ಯುವಕರ ಹೊಸ ಉದ್ಯಮಗಳು (ಸ್ಟಾರ್ಟ್ ಅಪ್), ಕ್ರೀಡಾ ಸಂಸ್ಕೃತಿಗೆ ಸಿಕ್ಕಿರುವ ಭಾರಿ ಪ್ರೋತ್ಸಾಹ, ಸಾವಯವ ಕೃಷಿ, ಶಸ್ತ್ರಾಸ್ತ್ರಗಳಲ್ಲಿ ಸ್ವಾವಲಂಬನೆ, ಉಪಗ್ರಹ, 'ಚಿಪ್ ಉದ್ಯಮ ಇತ್ಯಾದಿಗಳ ಮೂಲಕ ನಾವು ಮತ್ತೊಮ್ಮೆ ನಮ್ಮ 'ಸ್ವತ್ವವನ್ನು ನಿರ್ಮಿಸುತ್ತಿದ್ದೇವೆ. ಯುವ ಪೀಳಿಗೆಯಲ್ಲಿ ಸ್ವತ್ವದ ಕುರಿತು ಅಭಿಮಾನ ಜಾಗೃತಗೊಂಡರೆ ಮಾತ್ರ ಅವರು ವಿದೇಶಿಗಳ ಯುದ್ಧಕ್ಕೆ ತುತ್ತಾಗುವುದಿಲ್ಲ ? ಭಾಷೆ, ಸಂಸ್ಕೃತಿ, ಪರಂಪರೆಗಳ ಅಭಿಮಾನವು ಸಾಧನೆಯಿಂದ ಮಾತ್ರ ದೃಢವಾಗಿರಲು ಸಾಧ್ಯ. ಹಿಂದೂಗಳ ಮುಂದಿನ ಈ ಸ್ಥಿತಿ ಕಷ್ಟಕರವಾಗಿದೆ; ಆದರೆ ಅಸಾಧ್ಯವಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada