ನಾಸಿಕನಲ್ಲಿ ಮೂರು ದಿನಗಳ 'ಮಹಾಕುಂಭ ಭಕ್ತಿ ಸಂಗಮ ಸಮಾರಂಭ'ಕ್ಕೆ ಚಾಲನೆ
ಎಡದಿಂದ ನಾಲ್ಕನೇ ಸ್ಥಾನದಲ್ಲಿ ದೇವೇಂದ್ರ ಫಡ್ನವೀಸ್ ಇದ್ದಾರೆ.
ನಾಸಿಕ - ಸಿಂಹಸ್ಥ ಕುಂಭಮೇಳದ ಕಾಲಾವಧಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ.
ಭಾರತೀಯ ಸಂಸ್ಕೃತಿಯ ಅತ್ಯಂತ ದೊಡ್ಡ ಆವಿಷ್ಕಾರವಾಗಿರುವ ಈ ಮಹಾಸಮಾರಂಭದ ಎಲ್ಲಾ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು. ಕುಂಭಮೇಳದ ನಿಮಿತ್ತ ಅಕ್ಟೋಬರ ೩೧ ರಂದು ಧ್ವಜಾರೋಹಣ ನಡೆಯಲಿದೆ. ಸಾಧು-ಸಂತರ ಆಶೀರ್ವಾದ ಮತ್ತು ಎಲ್ಲರ ಸಹಕಾರದೊಂದಿಗೆ ಸಿಂಹಸ್ಥ ಕುಂಭಮೇಳವು ನಿರ್ವಿಘ್ನವಾಗಿ ಮತ್ತು ಯಶಸ್ವಿಯಾಗಿ ನೆರವೇರಲಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಭರವಸೆ ನೀಡಿದರು. 'ನಾಸಿಕ-ತ್ರಯಂಬಕೇಶ್ವರ ಕುಂಭಮೇಳ ಪ್ರಾಧಿಕಾರ'ದ ವತಿಯಿಂದ ಇಲ್ಲಿ ಪ್ರಾರಂಭವಾದ ೩ ದಿನಗಳ 'ಸಿಂಹಸ್ಥ ಮಹಾಕುಂಭ ಭಕ್ತಿ ಸಂಗಮ ಕಾರ್ಯಕ್ರಮ'ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ವೇಳೆ ರಾಜ್ಯದ ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಗಿರೀಶ ಮಹಾಜನ, ಮಾರುಕಟ್ಟೆ ಸಚಿವ ಜಯಕುಮಾರ ರಾವಲ, ಕೈಗಾರಿಕಾ ಸಚಿವ ಡಾ. ಉದಯ ಸಾಮಂತ, ಶಾಲಾ ಶಿಕ್ಷಣ ಸಚಿವ ದಾದಾಜಿ ಭುಸೆ, ಮೇಯರ ಹಿಮಗೌರಿ ಆಡ್ಕೆ-ಆಹೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಾತನಾಡಿ,
೧. ಸಾಧುಗ್ರಾಮದ ಜಾಗವನ್ನು ಎರಡೂವರೆ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಮುಖ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ. ಈ ಜಾಗದ ಬಳಕೆಯು ಭವಿಷ್ಯದಲ್ಲೂ ಕುಂಭಮೇಳಕ್ಕಾಗಿಯೇ ಆಗಬೇಕು ಎಂಬ ಉದ್ದೇಶದಿಂದ ಅದನ್ನು ಸೂಕ್ತ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗುವುದು. ಕುಂಭಮೇಳಕ್ಕಾಗಿ ರಸ್ತೆಗಳು, ಮೂಲಸೌಕರ್ಯಗಳು, ಹಾಗೂ ಭಕ್ತರಿಗೆ ಅಗತ್ಯವಿರುವ ವಿವಿಧ ನಾಗರಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
೨. ಸಾಧುಗ್ರಾಮದ ಜಾಗಕ್ಕೆ ಸಂಬಂಧಿಸಿದಂತೆ ಕೆಲವು ನಾಗರಿಕರು ಮತ್ತು ರೈತರ ದೂರುಗಳನ್ನು ಪರಿಹರಿಸಿ ಅವರಿಗೆ ಸೂಕ್ತ ಪರಿಹಾರವನ್ನು ನೀಡುವ ಪ್ರಯತ್ನ ನಡೆಯುತ್ತಿದೆ.
೩. ಕುಂಭಮೇಳದ ನಿಧಿಯಿಂದ ನಾಸಿಕ-ತ್ರಯಂಬಕೇಶ್ವರ ಸೇರಿದಂತೆ ಜಿಲ್ಲೆಯಲ್ಲಿ ದೀರ್ಘಾವಧಿಯ ಮೂಲಸೌಕರ್ಯಗಳು ನಿರ್ಮಾಣವಾಗಲಿವೆ.
೪. ಕುಂಭಮೇಳದ ಸಿದ್ಧತೆಗಳಿಂದಾಗಿ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ; ಆದರೆ ಕಾಮಗಾರಿಗಳು ಪೂರ್ಣಗೊಂಡ ನಂತರ ನಾಗರಿಕರು ಖಂಡಿತವಾಗಿಯೂ ಈ ಕೆಲಸಗಳನ್ನು ಸ್ವಾಗತಿಸುತ್ತಾರೆ.
೫. ಕುಂಭಮೇಳವನ್ನು ಸುರಕ್ಷಿತ, ಸುವ್ಯವಸ್ಥಿತ ಮತ್ತು ಯಶಸ್ವಿಗೊಳಿಸಲು ಸರಕಾರ ಬದ್ಧವಾಗಿದೆ ಎಂದರು.

