Dailyhunt Logo
  • Light mode
    Follow system
    Dark mode
    • Play Story
    • App Story
ಸಾರ್ವಜನಿಕ ಗಣೇಶೋತ್ಸವದಲ್ಲಿ ಆಧ್ಯಾತ್ಮಿಕ ವಿಕಾಸ ಸಾಧಿಸಿ !

ಸಾರ್ವಜನಿಕ ಗಣೇಶೋತ್ಸವದಲ್ಲಿ ಆಧ್ಯಾತ್ಮಿಕ ವಿಕಾಸ ಸಾಧಿಸಿ !

೧. ಉತ್ಸವದಲ್ಲಿ ಬೀಭತ್ಸ ನೃತ್ಯ-ಗಾಯನ

ಣೇಶೋತ್ಸವದ ಸಮಯದಲ್ಲಿ ಅಲ್ಲಲ್ಲಿ ನಿರ್ಮಿಸಲಾದ ಮಂಟಪಗಳಲ್ಲಿ ಮತ್ತು ವಿಸರ್ಜನೆಯ ಮೆರವಣಿಗೆಗಳಲ್ಲಿ ಎಂತಹ ರೀತಿಯ ಹಾಡುಗಳನ್ನು ಹಾಕಲಾಗುತ್ತಿದೆ ಎಂಬುದನ್ನು ಸ್ವಲ್ಪ ನೋಡಿ ! ಅವುಗಳ ಶಬ್ದದ ಮಟ್ಟವು ಆಕ್ಷೇಪಾರ್ಹವಾಗಿರುವುದು ಅದೊಂದು ಪ್ರತ್ಯೇಕ ವಿಷಯ; ಅಲ್ಲಿ ನಿಜಕ್ಕೂ ಯಾವ ಹಾಡುಗಳಿವೆ ?

ಗಣನಾಯಕನ ಉತ್ಸವದಲ್ಲಿ ಹಾಕುವ ಹಾಡು ಎಂದರೆ, 'ನಾಯಕ್ ನಹಿ ಖಲ್ನಾಯಕ್ ಹೂಂ ಮೈ'. ಇಡೀ ಜಗತ್ತಿನಲ್ಲಿ ಬಹುಶಃ ನಮ್ಮದೊಂದೇ ಧರ್ಮವಿರಬಹುದು, ಇಲ್ಲಿ ದೇವರೆದುರು 'ಚೋಲಿ ಕೆ ಪೀಚೆ ಕ್ಯಾ ಹೈ' ಎಂಬ ಹಾಡನ್ನು ನಿರ್ಲಜ್ಜವಾಗಿ ಹಾಕಲಾಗುತ್ತದೆ. ಇವೆಲ್ಲಾ ಗಜಾನನನ ಮುಂದೆ ಹಾಕುವಂತಹ ಹಾಡುಗಳೇ ? ಆ ಹಾಡುಗಳಿಗಿಂತಲೂ ಹೆಚ್ಚು ಬೀಭತ್ಸವಾದ ನೃತ್ಯವನ್ನು ಈ ತಥಾಕಥಿತ ಗಣೇಶಭಕ್ತರು ರಸ್ತೆಯ ಮಧ್ಯದಲ್ಲಿ ಮಾಡುತ್ತಿರುತ್ತಾರೆ.

೨. ದೇವರ ಮುಂದೆ ಭಕ್ತಿರಸದಿಂದ ಕೂಡಿದ ಸಂಗೀತವೇ ಬೇಕು !

ದೇವರೆದುರು ಭಕ್ತಿರಸದಿಂದ ತುಂಬಿದ ಮತ್ತು ವಾತಾವರಣವನ್ನು ಪ್ರಸನ್ನಗೊಳಿಸುವ ಸಂಗೀತವೇ ಇರಬೇಕು. ಅದರಲ್ಲಿನ ಸಾಲುಗಳು ಆ ದೇವತೆಗೆ ಸಂಬಂಧಿಸಿದ ಹಾಗೂ ಆಧ್ಯಾತ್ಮಿಕತೆ ಬೆಳೆಸುವಂತೆಯೇ ಇರಬೇಕು. ಆ ಸಂಗೀತದ ಕಿವಿಗಳಿಗೆ ಇಂಪೆನಿಸುವಷ್ಟೇ ಇರಬೇಕು.

೩. ಪಾವಿತ್ರ್ಯ ಕಾಪಾಡಲು ಸಾಧ್ಯವಿದ್ದರೆ ಮಾತ್ರ ಸಾರ್ವಜನಿಕ ಗಣೇಶೋತ್ಸವ ಆಚರಿಸಿ

ಗಣಪತಿಯ ಹೆಸರು ಹೇಳಿಕೊಂಡು ನಡೆಯುತ್ತಿರುವ ಈ ಎಲ್ಲಾ ವಿಷಯಗಳ ಅರಿವು ನಮಗಿದೆಯೇ ? ಇದರಿಂದ ಹಿಂದೂ ಸಮಾಜಕ್ಕೆ ಎಷ್ಟೊಂದು ಅಪಾರ ನಷ್ಟವಾಗುತ್ತಿದೆ ಎಂಬ ಅರಿವು ನಮಗಿದೆಯೇ ? ವೈಯಕ್ತಿಕ ಮಟ್ಟದಲ್ಲಾದರೂ ಈ ಸಾರ್ವಜನಿಕ ಗಣೇಶೋತ್ಸವದಿಂದ ನಮ್ಮದೇನಾದರೂ ಆಧ್ಯಾತ್ಮಿಕ ವಿಕಾಸವಾಗುತ್ತಿದೆಯೇ ? ಸಾರ್ವಜನಿಕ ಗಣೇಶೋತ್ಸವದ ಪಾವಿತ್ರ್ಯ ಕಾಪಾಡಲು ಸಾಧ್ಯವಿದ್ದರೆ ಮತ್ತು ಅದರ ಹಿಂದಿನ ಉದ್ದೇಶ ಅರ್ಥವಾಗಿದ್ದರೆ ಮಾತ್ರ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಿ. ಅದನ್ನು ಸೂಕ್ತ ರೀತಿಯಲ್ಲಿ ಆಚರಿಸಲು ಸಾಧ್ಯವಿಲ್ಲದಿದ್ದರೆ, ಅದನ್ನು ನಿಲ್ಲಿಸಿ !

- ಶ್ರೀ. ಕೇದಾರ ಕೇಸರಕರ (೯.೯.೨೦೨೨)

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada