ಮುಂಬಯಿ: ಮುಂಬಾದೇವಿಯ ಮಾಜಗಾಂವ್ ನಲ್ಲಿ ಶ್ರೀ ಗಣೇಶ ಮೂರ್ತಿಯ ಆಗಮನ ಮೆರವಣಿಗೆಯ ಮೇಲೆ ಮೊಟ್ಟೆ ಎಸೆದ ಪ್ರತಿಭಟನೆ
ಕೊಲ್ಹಾಪುರ - ಮುಂಬಯಿನ ಮಾಜಗಾಂವ್ ಪ್ರದೇಶದಲ್ಲಿ "ಮಾಜಗಾಂವ್ ಚಾ ಮೋರಯಾ' ಶ್ರೀ ಗಣೇಶ ಮೂರ್ತಿಯ ಆಗಮನ ಮೆರವಣಿಗೆಯ ವೇಳೆ ದಾನಿಶ್ ಖಾನ್ ಎಂಬ ಮತಾಂಧ ಯುವಕ ಶ್ರೀ ಗಣೇಶ ಮೂರ್ತಿಯ ಮೇಲೆ ಮೊಟ್ಟೆ ಎಸೆದಿದ್ದನು.
ಇದನ್ನು ಪ್ರತಿಭಟಿಸಿ ಸಕಲ ಹಿಂದೂ ಸಮಾಜ ಮತ್ತು ಹಿಂದುತ್ವನಿಷ್ಠರಿಂದ ಬಾಬುಜಮಾಲ್ ದರ್ಗಾದ ಮುಖ್ಯ ಪ್ರವೇಶದ್ವಾರದಲ್ಲಿ ಆಗಸ್ಟ್ 26 ರಂದು ಮಹಾ ಆರತಿ ನಡೆಸಲಾಯಿತು. ಬಾಬುಜಮಾಲ್ ದರ್ಗಾದ ಮುಖ್ಯ ಪ್ರವೇಶದ್ವಾರದ ಚೌಕಟ್ಟಿನಲ್ಲಿ ಶ್ರೀ ಗಣೇಶನ ಮೂರ್ತಿಯನ್ನು ಕೆತ್ತಲಾಗಿದೆ. ಆ ಚೌಕಟ್ಟಿನ ಬಳಿ ಬಂದು ಈ ಮಹಾ ಆರತಿ ನೆರವೇರಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಈ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಆರತಿಯ ವೇಳೆ 'ಹರ ಹರ ಮಹಾದೇವ', 'ಗಣಪತಿ ಬಪ್ಪ ಮೋರಯಾ', 'ಛತ್ರಪತಿ ಶಿವಾಜಿ ಮಹಾರಾಜ ಕಿ ಜೈ', 'ಛತ್ರಪತಿ ಸಂಭಾಜಿ ಮಹಾರಾಜ ಕಿ ಜೈ', 'ಜೈ ಶ್ರೀರಾಮ', 'ವಂದೇ ಮಾತರಂ', 'ಭಾರತ ಮಾತಾ ಕಿ ಜೈ', 'ಜೈ ಭವಾನಿ ಜೈ ಶಿವಾಜಿ' ಎಂಬ ಘೋಷಣೆಗಳನ್ನು ಕೂಗುವ ಮೂಲಕ ಹಿಂದುತ್ವನಿಷ್ಠರು ಆ ಪ್ರದೇಶ ಪ್ರತಿಧ್ವನಿಸುವಂತೆ ಮಾಡಿದರು. ಕೇಸರಿ ಟೋಪಿ ಮತ್ತು ಕೇಸರಿ ಶಾಲನ್ನು ಧರಿಸಿ ಆರತಿಗೆ ಬಂದಿದ್ದ ಮಹಿಳೆಯರ ಉಪಸ್ಥಿತಿ ಗಮನಾರ್ಹವಾಗಿತ್ತು.
ನಮ್ಮ ಧಾರ್ಮಿಕ ಪರಂಪರೆ, ಸಂಸ್ಕಾರಗಳ ಮೇಲೆ ದಾಳಿ ಮಾಡಿದರೆ ತಕ್ಕ ಉತ್ತರ ನೀಡಲಾಗುವುದು! - ಮಹೇಶ್ ಜಾದವ್, ರಾಜ್ಯ ಕಾರ್ಯದರ್ಶಿ, ಭಾಜಪ
ಮಹಾ ಆರತಿಯ ವೇಳೆ ಉಪಸ್ಥಿತರಿದ್ದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರುಈ ಸಂದರ್ಭದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಭಾಜಪ ರಾಜ್ಯ ಕಾರ್ಯದರ್ಶಿ ಶ್ರೀ ಮಹೇಶ ಜಾದವ್, ''ಹಿಂದೂಗಳು ಎಲ್ಲಾ ಧರ್ಮೀಯರ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತಾರೆ; ಮುಂಬಯಿನ ಮಾಜಗಾಂವ್ ನಲ್ಲಿ ನಡೆದ ರೀತಿಯಲ್ಲಿ ನಾವು ಯಾವುದೇ ಹಬ್ಬ-ಹರಿದಿನಗಳಲ್ಲಿ ಕಿಡಿಗೇಡಿತನ ಮಾಡುವುದಿಲ್ಲ. ನಮಗೆ ಈ ವಿಷಯ ದೊಡ್ಡದು ಮಾಡುವ ಉದ್ದೇಶವಿಲ್ಲ. ನಾವು ಛತ್ರಪತಿ ಶಿವಾಜಿ ಮಹಾರಾಜರ ಮಾವಳರು (ಸೈನಿಕರು), ಇನ್ಮುಂದೆ ಇಂತಹ ಅವಮಾನ ಸಹಿಸುವುದಿಲ್ಲ. ಯಾರಾದರೂ ನಮ್ಮ ಸಂಸ್ಕಾರ, ಧರ್ಮ ಮತ್ತು ಪರಂಪರೆಯ ಮೇಲೆ ದಾಳಿ ಮಾಡಿದರೆ ಅಂತಹವರಿಗೆ ತಕ್ಕ ಉತ್ತರ ನೀಡಲಾಗುವುದು'' ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಶಿವಾನಂದ ಸ್ವಾಮಿ ಅವರು 'ಮಾಜಗಾಂವ್ ಚಾ ಮೋರಯಾ' ಗಣಪತಿಯ ಆಗಮನದ ವೇಳೆ ನಡೆದ ಘಟನೆಯ ವಿವರವಾದ ಮಾಹಿತಿ ನೀಡಿ, ಹಿಂದೂಗಳು ಸಂಘಟಿತರಾಗುವುದು ಕಾಲದ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಿವಸೇನೆ ಜಿಲ್ಲಾಧ್ಯಕ್ಷ ಶ್ರೀ. ಸುಜಿತ್ ಚವಾಣ, ಉಪಜಿಲ್ಲಾಧ್ಯಕ್ಷ ಶ್ರೀ. ಉದಯ ಭೋಸಲೆ, 'ಮಹಾರಾಜ ಪ್ರತಿಷ್ಠಾನ'ದ ಸಂಸ್ಥಾಪಕ ಶ್ರೀ. ನಿರಂಜನ್ ಶಿಂದೆ, 'ಮರಾಠಾ ತಿತ್ತುಕಾ ಮೇಳವಾವಾ'ದ ಕಾರ್ಯಾಧ್ಯಕ್ಷ ಶ್ರೀ. ಯೋಗೇಶ ಕೇರಕರ್, 'ಹಿಂದೂ ಏಕತಾ ಆಂದೋಲನ'ದ ನಗರ ಪ್ರಮುಖ ಶ್ರೀ. ಗಜಾನನ ತೋಡಕರ್, ಉದ್ಧವ ಬಾಳಾಸಾಹೇಬ ಠಾಕ್ರೆ ಪಕ್ಷದ ಉಪಜಿಲ್ಲಾಧ್ಯಕ್ಷ ಶ್ರೀ. ಸಂಭಾಜಿರಾವ್ ಭೋಕರೆ, ಕರವೀರ ತಾಲೂಕು ಪ್ರಮುಖ ಶ್ರೀ. ರಾಜು ಯಾದವ್, ಮಂದಿರ ಮಹಾಸಂಘದ ಶ್ರೀ. ಅಶೋಕ ಗುರವ್, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ. ರಾಂಭೌ ಮೇಥೆ, ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷ ಶ್ರೀ. ವಿಕಾಸ ಜಾದವ್, ಶ್ರೀ. ಸುನಿಲ್ ಸಾಮಂತ್, ಶ್ರೀ. ಪ್ರಶಾಂತ ಪಾಟೀಲ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಕಿರಣ್ ದುಸೆ, 'ನಮೋ ನಮೋ' ಜಿಲ್ಲಾಧ್ಯಕ್ಷ ಶ್ರೀ. ವಿಕ್ರಮ್ ಜರಗ್, ಶ್ರೀ. ಸೌರಭ್ ನಿಕಮ್, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶ್ರೀ. ವಿನಯ್ ಬಾರಡ್, ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನನ ನಗರ ಕಾರ್ಯವಾಹ ಶ್ರೀ. ಆಶಿಶ್ ಲೋಖಂಡೆ, ಶ್ರೀ. ಶಶಿಭಾವು ಬೀಡಕರ್, 'ಹಿಂದೂ ಜಾಗರಣ'ದ ಡಾ. ಅಶ್ವಿನಿ ಮಾಳಕರ್, ಪೂಜಾ ಶಿಂದೆ, ರಶ್ಮಿ ಸಾಳೋಖೆ, ಅಂಜನಾ ಜಾದವ್ ಸೇರಿದಂತೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

