Dailyhunt Logo
  • Light mode
    Follow system
    Dark mode
    • Play Story
    • App Story
ಸಂಪಾದಕೀಯ : ಜ್ಞಾನಭಂಡಾರದ ಪುನರುಜ್ಜೀವನ!

ಸಂಪಾದಕೀಯ : ಜ್ಞಾನಭಂಡಾರದ ಪುನರುಜ್ಜೀವನ!

ಮುಂಬಯಿಯಲ್ಲಿನ ಮಾತ್ರವಲ್ಲ, ದೇಶದ ಜ್ಞಾನಭಂಡಾರ ಎಂದೇ ಗುರುತಿಸಲ್ಪಡುವ 'ಏಶಿಯಾಟಿಕ್ ಸೊಸೈಟಿ' ಎಂಬ ಗ್ರಂಥಾಲಯ ಕೇಂದ್ರವನ್ನು ಜೇಮ್ಸ್ ಮ್ಯಾಕಿಂಟಾಶ್ ಅವರು ೧೮೦೪ ರಲ್ಲಿ ಭಾರತದ ಪ್ರಾಚೀನ ಜ್ಞಾನ, ವಿಜ್ಞಾನ, ಇತಿಹಾಸ, ಭಾಷೆ, ಪರಂಪರೆ, ಕಲೆ, ಸಂಸ್ಕೃತಿಗಳ ಅಧ್ಯಯನ, ಸಂರಕ್ಷಣೆ ಮತ್ತು ಸಂಶೋಧನೆಗಾಗಿ ಸ್ಥಾಪಿಸಿದರು.

ಇಂತಹದೇ ಒಂದು ಸಂಸ್ಥೆಯನ್ನು ವಿಲಿಯಂ ಜೋನ್ಸ್ ಅವರು ೧೭೮೪ ರಲ್ಲಿ ಬಂಗಾಳದಲ್ಲೂ ಸ್ಥಾಪಿಸಿದ್ದರು. ಸೆಪ್ಟೆಂಬರ್ ೧೩ ರಂದು ಗೃಹಮಂತ್ರಿ ಅಮಿತ ಶಹಾ ಅವರು ಈ ಜ್ಞಾನಭಂಡಾರದ ಕೇಂದ್ರದಲ್ಲಿರುವ 'ಗಣೇಶ ಜ್ಞಾನಾರ್ಥಿ' ಎಂಬ ಪ್ರದರ್ಶನವನ್ನು ಉದ್ಘಾಟಿಸಲು ಹೋದ ನಂತರ ಮತ್ತೊಮ್ಮೆ ಈ ಗ್ರಂಥಾಲಯದ ಹೆಸರು ಚರ್ಚೆಗೆ ಬಂದಿದೆ. ಜುಲೈ ತಿಂಗಳಲ್ಲಿ ಇಲ್ಲಿ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದು, ಭಾಜಪ ಸಿದ್ಧಾಂತಕ್ಕೆ ಹತ್ತಿರವಿರುವ ಡಾ. ವಿನಯ್ ಸಹಸ್ರಬುದ್ಧೆ ಅವರು ಇದರ ಅಧ್ಯಕ್ಷರಾದರು ಮತ್ತು ಅವರು ಎಡಪಂಥೀಯ ವಿಚಾರಧಾರೆಯ ಸಂಪಾದಕರೆಂದು ಪ್ರಸಿದ್ಧರಾಗಿರುವ ಕುಮಾರ್ ಕೇತ್ಕರ್ ಅವರನ್ನು ಪರಾಜಯಗೊಳಿಸಿದರು. ಈ ಚುನಾವಣೆಯನ್ನು ಭಾಜಪ ಬಹಳ ಗಂಭೀರವಾಗಿ ತೆಗೆದುಕೊಂಡಿತ್ತು. ಹಾಗೆ ತೆಗೆದುಕೊಳ್ಳುವುದು ಅಗತ್ಯವೂ ಆಗಿತ್ತು. ಈಗ ಶಹಾ ಅವರು ಇಲ್ಲಿಗೆ ಬಂದಿರುವುದರಿಂದ ಇದರ ಮುಂದಿನ ಅನ್ವಯಾರ್ಥವೂ ಸ್ಪಷ್ಟವಾಗುತ್ತದೆ.

ಭಾರತೀಯ ಜ್ಞಾನಪರಂಪರೆಯ ಅತ್ಯಂತ ಅಮೂಲ್ಯ ಮತ್ತು ಅನರ್ಘ್ಯ ಸಂಪತ್ತನ್ನು ಅನಾವರಣಗೊಳಿಸಬಲ್ಲ ಹಸ್ತಪ್ರತಿಗಳು ಹಾಗೂ ಗ್ರಂಥಗಳನ್ನು ಸಂರಕ್ಷಿಸುವ ಈ ಅತ್ಯಂತ ಪ್ರಮುಖ ಸಂಸ್ಥೆಯನ್ನು, ಭಾರತೀಯ ಜ್ಞಾನವನ್ನು ತುಚ್ಛವಾಗಿ ಕಾಣುತ್ತಿದ್ದ ಕಾಂಗ್ರೆಸ್ ಸರಕಾರವು ಸ್ವಾತಂತ್ರ್ಯದ ನಂತರದ ಸುದೀರ್ಘ ಆಡಳಿತಾವಧಿಯಲ್ಲಿ ನಿರ್ಲಕ್ಷಿಸಿತು. ವಿದೇಶಗಳಲ್ಲಿರುವ ಇಂತಹ ಸಂಸ್ಥೆಗಳು ಅತ್ಯಂತ ಅತ್ಯಾಧುನಿಕವಾಗಿರುತ್ತವೆ. ಅವುಗಳಿಂದ ದೊಡ್ಡ ಸಂಶೋಧಕರು ಮತ್ತು ವಿಚಾರವಂತರು, ಅದರಿಂದ ರಾಷ್ಟ್ರವು ನಿರ್ಮಾಣವಾಗುತ್ತದೆ. ಸ್ವಾತಂತ್ರ್ಯದ ನಂತರ ಈ ಪ್ರಕ್ರಿಯೆಯು ವೇಗವಾಗಿ ನಡೆಯಬೇಕಿತ್ತು; ಆದರೆ ಹಾಗಾಗಲಿಲ್ಲ. ಕೆಲವು ಕುಟುಂಬಗಳು ತಮ್ಮ ಸ್ವಾರ್ಥಕ್ಕಾಗಿ ತಮ್ಮಲ್ಲಿದ್ದ ಅತ್ಯಂತ ದುರ್ಲಭವಾದ ಜ್ಞಾನಗ್ರಂಥಗಳನ್ನು ವಿದೇಶಗಳಿಗೆ ಮಾರಾಟ ಮಾಡಿದವು.

ಶಹಾ ಅವರು ತಾವು ಕೇವಲ ಪ್ರದರ್ಶನದ ಉದ್ಘಾಟನೆಗೆ ಮಾತ್ರ ಬಂದಿಲ್ಲ, ಬದಲಿಗೆ ಇನ್ನು ಮುಂದೆ ದೇಶದ ಎಲ್ಲಾ ದೊಡ್ಡ ಗ್ರಂಥಾಲಯಗಳು, ವಿಶ್ವವಿದ್ಯಾಲಯಗಳು, ದೇವಾಲಯಗಳು, ಕುಟುಂಬಗಳು ಮುಂತಾದವುಗಳಲ್ಲಿರುವ ಪ್ರಾಚೀನ ಹಸ್ತಪ್ರತಿಗಳು, ಗ್ರಂಥಗಳು, ನಕ್ಷೆಗಳು, ವಸ್ತುಗಳನ್ನು 'ಡಿಜಿಟಲೀಕರಣ' (ಗಣಕೀಕರಣ) ಮಾಡಿ ಸಂರಕ್ಷಿಸುವ 'ಜ್ಞಾನ ಭಾರತಂ' ಎಂಬ ಬೃಹತ್ ಯೋಜನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ದೇಶಾದ್ಯಂತ ಇರುವ ಈ ಜ್ಞಾನಪರಂಪರೆಯ ಸಮೀಕ್ಷೆ, ನೋಂದಣಿ, ವರ್ಗೀಕರಣ ಮತ್ತು ಸಂರಕ್ಷಣೆ ಮಾಡುವುದು ಹಾಗೂ ಎಲ್ಲಾ ಭಾಗದ ಅಧ್ಯಯನಕಾರರಿಗೆ ಈ ಜ್ಞಾನಸಾಹಿತ್ಯವನ್ನು ಲಭ್ಯಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಮುಂಗಡಪತ್ರದಲ್ಲೂ (ಬಜೆಟ್) ಇದಕ್ಕಾಗಿ ಅನುದಾನದ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವ್ಯಾಪಕ ಮಟ್ಟದಲ್ಲಿ ಲಭ್ಯವಿರುವ ಪ್ರಾಚೀನ ಹಸ್ತಪ್ರತಿಗಳು ಮತ್ತು ಗ್ರಂಥಗಳ ಅಧ್ಯಯನಕ್ಕೆ ಉತ್ತೇಜನ ನೀಡುವ ಉದ್ದೇಶ ಸ್ಪಷ್ಟವಾಗುತ್ತದೆ. ಭವಿಷ್ಯದಲ್ಲಿ ದೈವಿ ಭಾರತೀಯ ಜ್ಞಾನಪರಂಪರೆಯು ಜಾಗತಿಕ ಮಟ್ಟದಲ್ಲಿ ಪುನರುಜ್ಜೀವನಗೊಳ್ಳಲಿದೆ ಎಂದು ಅನೇಕ ದಾರ್ಶನಿಕ ಸಂತರು ಹೇಳಿದ್ದಾರೆ. ಒಂದು ಅರ್ಥದಲ್ಲಿ ಇದಕ್ಕೆ ಪೂರಕವಾಗುವ ಪ್ರಾಥಮಿಕ ಹಂತ ಇದಾಗಿದೆ; ಏಕೆಂದರೆ 'ಡಿಜಿಟಲೀಕರಣ' ಎಂಬ ಪ್ರಕ್ರಿಯೆಯು ಕೇವಲ ಸಂರಕ್ಷಣೆ ಮಾಡುವುದು ಮಾತ್ರವಲ್ಲ, ಜ್ಞಾನದ ಆ ಅಮೂಲ್ಯ ಸಂಪತ್ತನ್ನು ಅಥವಾ ಸಾಕ್ಷ್ಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತದೆ!

ಏಶಿಯಾಟಿಕ್ ಸೊಸೈಟಿಯ ಮಹತ್ವ

ಪ್ರಸ್ತುತ ಮುಂಬಯಿನ 'ಏಶಿಯಾಟಿಕ್ ಸೊಸೈಟಿ'ಯಲ್ಲಿ ೫ ಸಾವಿರಕ್ಕೂ ಹೆಚ್ಚು ಪ್ರಾಚೀನ ಹಸ್ತಪ್ರತಿಗಳು ಲಭ್ಯವಿವೆ. ಅವುಗಳಲ್ಲಿ ಅತ್ಯಂತ ಪ್ರಾಚೀನ ಹಸ್ತಪ್ರತಿಯು ೭ ನೇ ಶತಮಾನದ್ದಾಗಿದ್ದು, ಅದರ ವೈಶಿಷ್ಟ್ಯವೆಂದರೆ ಅದರ ಲಿಪಿಯು 'ಗುಪ್ತ ಬ್ರಾಹ್ಮಿ'ಯಾಗಿದೆ; ಆದರೆ ಅದರ ಭಾಷೆ ಸಂಸ್ಕೃತವಾಗಿದೆ. (ಮೊಬೈಲ್‌ನಲ್ಲಿ ಕಿರುಸಂದೇಶದ ಭಾಷೆ ಹೆಚ್ಚಾಗಿ ಕನ್ನಡವಾಗಿರುತ್ತದೆ, ಆದರೆ ಲಿಪಿ ಇಂಗ್ಲಿಷ್ ಆಗಿರುತ್ತದೆ; ಅಥವಾ ಗೋವಾದಲ್ಲಿ ಕೊಂಕಣಿಯನ್ನು ಇಂಗ್ಲಿಷ್‌ನಲ್ಲೂ ಬರೆಯಲಾಗುತ್ತದೆ). ಅತ್ಯಂತ ಪ್ರಾಚೀನ ಕಾಲದಲ್ಲಿ ಭಾರತದ ಸಾಮಾನ್ಯ ಜನರ ಭಾಷೆಯೂ ಸಂಸ್ಕೃತವಾಗಿತ್ತು ಎಂದು ಒಂದು ಸಂಶೋಧನೆ ಹೇಳುತ್ತದೆ. ಮೇಲಿನ ಈ ಸಾಕ್ಷ್ಯವು ಬಹುಶಃ ಅದಕ್ಕೆ ಪೂರಕವಾಗಿರಬಹುದು. ಲಿಪಿಯು ಹೊರಗಿನ ಸಂಸ್ಕೃತಿಯ ಆಕ್ರಮಣವಾಗಿರಬಹುದು; ಆದರೆ ಜನರ ಮೂಲ ಭಾಷೆ ಅದೇ ಆಗಿರುತ್ತದೆ. ಇದೊಂದು ಉದಾಹರಣೆಯಷ್ಟೇ. ಈ ರೀತಿ ಇಲ್ಲಿರುವ ಅಮೂಲ್ಯ ಸಂಪತ್ತನ್ನು ಭಾರತೀಯ ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ಭಾಷಿಕ, ಆರ್ಥಿಕ, ಭೌಗೋಳಿಕ, ಐತಿಹಾಸಿಕ, ಮಾನವವಂಶಶಾಸ್ತ್ರೀಯ ಮತ್ತು ವೈಜ್ಞಾನಿಕ ಜ್ಞಾನದ ದೃಷ್ಟಿಕೋನದಿಂದ ಪರಿಗಣಿಸಿ, ಇಲ್ಲಿರುವ ದಾಖಲೆಗಳ ಪ್ರಯೋಜನವನ್ನು ಸಂಬಂಧಪಟ್ಟ ಅಭ್ಯಾಸಕರು ಪಡೆದುಕೊಳ್ಳುವುದು ಅಗತ್ಯವಾಗಿದೆ. ಪ್ರಸ್ತುತ ಹಿಂದೂ ಸಂಸ್ಕೃತಿಯ ಮೇಲೆ ಪಾಶ್ಚಿಮಾತ್ಯ ಮತ್ತು ಸಾಮ್ಯವಾದಿ ವಿಚಾರವಂತರಿಂದ ನಡೆಯುತ್ತಿರುವ ಭಯಾನಕ ವೈಚಾರಿಕ ದಾಳಿಗಳನ್ನು ಇದರ ಮೂಲಕ ಸುಲಭವಾಗಿ ಹಿಮ್ಮೆಟ್ಟಿಸಲು ಸಾಧ್ಯವಾಗುತ್ತದೆ. ೧೪ ನೇ ಶತಮಾನದ 'ಋಗ್ವೇದ ಪದಪಾಠ'ದ ಪ್ರತಿಯೂ ಇಲ್ಲಿ ಲಭ್ಯವಿದೆ.

ಪ್ರಾಚೀನ ದಾಖಲೆಗಳ ಅಧ್ಯಯನದ ಪ್ರಯೋಜನಗಳು

ವಿವಿಧ ವೈಚಾರಿಕ ಮತ್ತು ಕ್ರಿಯಾತ್ಮಕ ಹಂತದ ನವರೂಢಿಗಳ ('ಟ್ರೆಂಡ್', 'ಟೂಲ್', 'ಫ್ಯಾಷನ್' ಮುಂತಾದವುಗಳ) ಮೂಲಕ ಭಾರತೀಯರನ್ನು ಅವರ ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಯಿಂದ ದೂರವಿಟ್ಟು, ಧರ್ಮಾಭಿಮಾನ ಹಾಗೂ ರಾಷ್ಟ್ರಾಭಿಮಾನಗಳನ್ನು ಕುಗ್ಗಿಸುವುದು, ಅದಕ್ಕಾಗಿ ಭಾರತೀಯ ಸಂಸ್ಕೃತಿಯಲ್ಲಿರುವ ಪ್ರತಿಯೊಂದನ್ನೂ ತುಚ್ಛವಾಗಿ ಕಾಣುವುದು, ಭಾರತದಲ್ಲಿ ಜಾತಿವಾದವನ್ನು ಹೆಚ್ಚಿಸಿ ಹಿಂದೂಗಳ ಒಗ್ಗಟ್ಟನ್ನು ನಾಶಪಡಿಸುವುದು - ಈ ಸಂಗತಿಗಳು ಕಳೆದ ೨೫೦ ವರ್ಷಗಳಿಂದ ನಡೆಯುತ್ತಿವೆ. ಈಗ ಭಾರತದಲ್ಲಿರುವ ಬುದ್ಧಿಜೀವಿಗಳೆನಿಸಿಕೊಂಡವರೇ ಅದನ್ನು ಬೆಂಬಲಿಸುತ್ತಿದ್ದಾರೆ ಮತ್ತು ಅವರನ್ನು ಪ್ರತಿವಾದಿಸಲು ಧರ್ಮಾಭಿಮಾನಿಗಳ ಬಳಿ ಸಾಕ್ಷ್ಯಗಳು ಲಭ್ಯವಿರುವುದಿಲ್ಲ. ಕೆಲವು ದಿನಗಳ ಹಿಂದೆ ಪ್ರಸಿದ್ಧ ಪತ್ರಿಕೆಯೊಂದರ ಸಂಪಾದಕರು ಕಾರ್ಯಕ್ರಮವೊಂದರಲ್ಲಿ, 'ಎಲ್ಲೋ ಒಂದು ಕಡೆ ವಿಮಾನದ ಉಲ್ಲೇಖ ಸಿಕ್ಕ ತಕ್ಷಣ, ಪ್ರಾಚೀನ ಭಾರತದಲ್ಲಿ ಅನೇಕ ವಿಮಾನಗಳಿದ್ದವು ಅಥವಾ ಅದರ ಪೂರ್ಣ ತಂತ್ರಜ್ಞಾನವಿತ್ತು ಎಂದು ಅರ್ಥವಲ್ಲ' ಎಂಬ ಧಾಟಿಯಲ್ಲಿ ಹೇಳಿಕೆ ನೀಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರು, ಛತ್ರಪತಿ ಸಂಭಾಜಿ ಮಹಾರಾಜರು, ರಜಪೂತರು, ಪೇಶ್ವೆ ಮನೆತನ, ಪಾಣಿಪತ್ ಯುದ್ಧ ಮುಂತಾದ ಇತಿಹಾಸದ ಸತ್ಯವನ್ನು ಮರೆಮಾಚಿ, ಸುಳ್ಳು ಇತಿಹಾಸವನ್ನು ಹರಡುವ ಪ್ರಯತ್ನವನ್ನು ತಮ್ಮನ್ನು ವಿದ್ರೋಹಿಕಾರರು ಮತ್ತು ಪ್ರಗತಿಪರರೆಂದು (ಅಧೋಗತಿಪರರೆಂದು) ಕರೆದುಕೊಳ್ಳುವವರು ಜಾತಿ ದ್ವೇಷದಿಂದ ಮಾಡುತ್ತಿದ್ದಾರೆ. ಇಂತಹವರಿಗೆ ಮತ್ತು ಭಾರತೀಯ ಶಾಸ್ತ್ರಗಳನ್ನು 'ಹುಸಿ ವಿಜ್ಞಾನ' (ಛದ್ಮ ವಿಜ್ಞಾನ) ಎಂದು ಟೀಕಿಸುವವರಿಗೆ ಈ ಸಂಶೋಧನೆಗಳಿಂದ ತಕ್ಕ ಉತ್ತರ ಸಿಗಬಹುದು. ಛತ್ರಪತಿ ಶಿವಾಜಿ ಮಹಾರಾಜರಿಗಿಂತ ಮುಂಚಿನ ಕೆಲವು ಶತಮಾನಗಳ ಇತಿಹಾಸವು ಬಹುತೇಕ ಲಭ್ಯವೇ ಇಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಾಚೀನ ಮತ್ತು ಅರ್ವಾಚೀನ ಕಾಲದ ಗ್ರಂಥಗಳು, ಹಸ್ತಪ್ರತಿಗಳು, ಬ್ರಾಹ್ಮಿ, ಪ್ರಾಕೃತ, ಮೋಡಿ ಮುಂತಾದ ಲಿಪಿಗಳಲ್ಲಿರುವ ಹಸ್ತಪ್ರತಿಗಳ ಅನನ್ಯ ಸಾಧಾರಣ ಮಹತ್ವವು ತಿಳಿಯುತ್ತದೆ. 'ಚರಕಸಂಹಿತೆ'ಯ ನೂರಾರು ಶ್ಲೋಕಗಳು ಇಂದು ಲಭ್ಯವಿಲ್ಲ. 'ನಾಲಂದಾ ವಿಶ್ವವಿದ್ಯಾಲಯದಲ್ಲಿ ಸಾವಿರಾರು ಗ್ರಂಥಗಳನ್ನು ಸುಡಲಾಯಿತು; ಆದರೆ ಶ್ರುತಿ (ಮೌಖಿಕ ಪರಂಪರೆಯಿಂದ ಬಂದ ವೇದಾದಿ ಜ್ಞಾನ ಮತ್ತು ಸಂಬಂಧಿತ ಗ್ರಂಥಗಳು) ಹಾಗೂ ಸ್ಮೃತಿ (ಆಚರಣೆಗೆ ತರಬೇಕಾದ ಧರ್ಮಜ್ಞಾನವನ್ನು ಸಂಕಲಿಸಿದ ಗ್ರಂಥಗಳು) ಆಧಾರದ ಮೇಲೆ ಅಸ್ತಿತ್ವದಲ್ಲಿರುವ ನಮ್ಮ ಜ್ಞಾನಪರಂಪರೆಯನ್ನು ನೀವು ನಾಶಪಡಿಸಲು ಸಾಧ್ಯವಿಲ್ಲ. ಈ ಸತ್ಯವನ್ನು ಪ್ರಪಂಚದ ಮುಂದೆ ತರುವುದೇ 'ಡಿ-ಕೊಲನೈಸೇಶನ್' (ವಸಾಹತುಶಾಹಿ ಮುಕ್ತ) ಪ್ರಕ್ರಿಯೆಯಾಗಿದೆ' ಎಂದು ಶಹಾ ಹೇಳಿದರು. ಐತಿಹಾಸಿಕ ಪರಂಪರೆಯಿರುವ ಸಾತಾರಾ ಜಿಲ್ಲೆಯ ಪಾಟಣ ತಹಶೀಲ ಕಚೇರಿಯಲ್ಲಿದ್ದ, ೧೮೯೦ ರಿಂದ ಈಚೆಗೆ ನಾಶವಾಗುತ್ತಿದ್ದ ಕಂದಾಯ ದಾಖಲೆಗಳನ್ನು ಯೇರಾಡ್ ಗ್ರಾಮದ ಯುವಕರು ತಾವಾಗಿಯೇ ಒಂದಾಗಿ 'ಡಿಜಿಟಲೀಕರಣ' ಮಾಡಿದರು. ಈ ದಾಖಲೆಗಳು ಇತಿಹಾಸದಲ್ಲಿ ದೊಡ್ಡ ಸಾಕ್ಷ್ಯಗಳಾಗಬಹುದು. ಸರಕಾರದ 'ರಾಷ್ಟ್ರೀಯ ಜ್ಞಾನ ಸಂರಕ್ಷಣೆ ಮತ್ತು ಸಂಶೋಧನೆ' ಯೋಜನೆಯ ಫಲಿತಾಂಶ ಹೇಗೆ ಬರುತ್ತದೆ ಮತ್ತು ಅದರ ಉದ್ದೇಶ ಈಡೇರುತ್ತದೆಯೇ? ಎಂಬುದನ್ನು ಗಮನಿಸಬೇಕಾಗಿದೆ. ಅದಕ್ಕಾಗಿ ಧರ್ಮ ಮತ್ತು ರಾಷ್ಟ್ರದ ಪ್ರಖರ ಅಭಿಮಾನವಿರುವ, ನಿರಂತರ ಪರಿಶ್ರಮ ಪಡುವ, ಬುದ್ಧಿವಂತ ಹಾಗೂ ಅಪಾರ ತ್ಯಾಗ ಮಾಡುವ ಮಾನವಶಕ್ತಿ ಅಗತ್ಯವಿದೆ ಎಂಬುದು ಮಾತ್ರ ನಿಶ್ಚಿತ!

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada