ಪಿತೃಪಕ್ಷದ ನಿಮಿತ್ತ...
ಪಿತೃಗಳ ಬಗ್ಗೆ ಗೌರವವನ್ನು ವ್ಯಕ್ತಪಡಿಸುವ ಆಚರಣೆಗಳು ಎಲ್ಲ ಧರ್ಮಗಳಲ್ಲಿಯೂ ಇವೆ ಮತ್ತು ಆಯಾ ಧರ್ಮದ ಬಹುತೇಕ ಎಲ್ಲರೂ ಅವುಗಳನ್ನು ಪಾಲಿಸುತ್ತಾರೆ; ಆದರೆ ಇದರ ಗೇಲಿ, ತಮಾಷೆ ಕೇವಲ ಹಿಂದೂ ಧರ್ಮದಲ್ಲಿಯೇ ಆಗುತ್ತದೆ. ಪಿತೃಪಕ್ಷ ಬಂದಿತೆಂದರೆ, ಗೊಂದಲ ಸೃಷ್ಟಿಸುವ ಲೇಖನಗಳು ಪುನಃ ಪುನಃ ಬರತೊಡಗುತ್ತವೆ.
ಮಾಧ್ಯಮಗಳಲ್ಲಿ ಹಿಂದೂ ಧರ್ಮದ ಟೀಕೆ-ಟಿಪ್ಪಣೆಗಳು ಆರಂಭವಾಗುತ್ತವೆ. ಇದರ ಸ್ಪಷ್ಟೀಕರಣಕ್ಕಾಗಿ ಕೆಲವು ವಿಷಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಕುತೂಹಲದಿಂದ ನಾನು ಮಾಡಿದ ಈ ವಿಷಯದ ಸ್ವಲ್ಪ ಅಧ್ಯಯನ, ಕೆಲವು ಉತ್ತಮ ಜ್ಞಾನಿಗಳ ಮಾರ್ಗದರ್ಶನ, ನನಗೆ ಬಂದ ಅನೇಕ ಅನುಭವಗಳಿಂದ ಹಲವು ನಿಷ್ಕರ್ಷಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಮತ್ತು ಅವು ನನ್ನ ಅನೇಕ ಪ್ರಶ್ನೆಗಳಿಗೆ ಹಾಗೂ ಸಂಶಯಗಳಿಗೆ ಬಹುಮಟ್ಟಿಗೆ ನಿಖರವಾದ ಉತ್ತರವನ್ನು ನೀಡಿದವು.
೧. ಸಪ್ತಪಾತಾಳ, ಮಾನವಲೋಕ ಮತ್ತು ಸಪ್ತಸ್ವರ್ಗ ಇವೆಲ್ಲ ಏನು ? ೮೪ ಲಕ್ಷ ಜನ್ಮಗಳ ನಂತರ ಮನುಷ್ಯ ಜನ್ಮ ಸಿಗುತ್ತದೆ ಅಂದರೆ ಏನು ?
ಮರಣದ ನಂತರದ ಜೀವನ ಮತ್ತು ಮೋಕ್ಷದ ಸಂಕಲ್ಪನೆಯನ್ನು ಹಿಂದೂ ಧರ್ಮದಲ್ಲಿ ಮಂಡಿಸಿರುವಂತೆ, ಜಗತ್ತಿನ ಇನ್ನು ಯಾವುದೇ ಸಂಸ್ಕೃತಿಯಲ್ಲೂ ಇಷ್ಟೊಂದು ಪರಿಪೂರ್ಣವಾಗಿ ಮಂಡಿಸಿಲ್ಲ; ಇದಕ್ಕಾಗಿ ಹಿಂದೂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಪ್ರಚಲಿತವಿರುವ ಪುನರ್ಜನ್ಮ, ಕರ್ಮಸಿದ್ಧಾಂತ, ಪಂಚಮಹಾಭೂತಗಳಿಂದ ನಿರ್ಮಿತವಾದ ಮನುಷ್ಯ ದೇಹ, ಇವುಗಳಂತಹ ವಿಷಯಗಳನ್ನು ಒಮ್ಮೆ ಅರ್ಥಮಾಡಿಕೊಳ್ಳಬೇಕು. ಪ್ರಸಿದ್ಧ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ ವಿಕಾಸವಾದದ ಶೋಧಕ್ಕೂ ಸಾವಿರಾರು ವರ್ಷಗಳ ಮೊದಲೇ ಹಿಂದೂ ಧರ್ಮದಲ್ಲಿ ವಿಕಾಸದ ತತ್ತ್ವಜ್ಞಾನವನ್ನು ಹೇಳಲಾಗಿದೆ. ಅತ್ಯಂತ ಸಂಕ್ಷಿಪ್ತದಲ್ಲಿ ಹೇಳುವುದಾದರೆ ಏಕ ಕೋಶೀಯ ಜೀವಿಯಿಂದ ಅನೇಕ ಬದಲಾವಣೆಗಳು ಆಗುತ್ತಾ ಸಜೀವಗಳ ನಿರ್ಮಾಣವಾಯಿತು ಎಂಬುದು ಅವರ ಸಿದ್ಧಾಂತ ! ಹಿಂದೂ ಧರ್ಮದ ತತ್ತ್ವಜ್ಞಾನವೇನು ಹೇಳುತ್ತದೆ ? ಸಪ್ತಪಾತಾಳ, ಮಾನವಲೋಕ ಮತ್ತು ಸಪ್ತಸ್ವರ್ಗ ಇವೆಲ್ಲ ಏನು ? ೮೪ ಲಕ್ಷ ಜನ್ಮಗಳ ನಂತರ ಮನುಷ್ಯ ಜನ್ಮ ಸಿಗುತ್ತದೆ ಎಂದರೇನು ?
ಡಾರ್ವಿನ್‌ನಿಗೆ ಕೇವಲ ದೇಹದ ವಿಕಾಸವನ್ನು ಮಾತ್ರ ಹೇಳಲು ಸಾಧ್ಯವಾಯಿತು. ಹಿಂದೂ ಧರ್ಮದಲ್ಲಿ ದೇಹದೊಂದಿಗೆ ಅದರ ಆತ್ಮದ ಪೂರ್ವಕರ್ಮ, ಪಾಪ-ಪುಣ್ಯ, ಒಳ್ಳೆಯ-ಕೆಟ್ಟ ಸಂಸ್ಕಾರಗಳು ಮುಂತಾದ ಅನೇಕ ವಿಷಯಗಳನ್ನು ಒಟ್ಟಾಗಿ ವಿಚಾರ ಮಾಡಲಾಗಿದೆ. ವಿಜ್ಞಾನಕ್ಕೆ ಮನುಷ್ಯ ಜನ್ಮದ ವರೆಗಿನ ವಿಕಾಸವನ್ನು ಮಾತ್ರ ಹೇಳಲು ಸಾಧ್ಯವಾಗಿದೆ; ಆದರೆ ನಮ್ಮ ಹಿಂದೂ ಧರ್ಮವು ಮುಂದೆ ಭೂ, ಭುವ, ಮಹಾ, ಜನ, ತಪ ಮತ್ತು ಸತ್ಯ ಲೋಕ ಅಥವಾ ಸ್ತರಗಳಂತಹ ಮುಂದಿನ ವಿಕಾಸದ ಹಂತಗಳನ್ನೂ ಹೇಳಿದೆ. ಅಲ್ಲಿನ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ನೀಡಿದೆ. ಮನುಷ್ಯನ ಮರಣದ ನಂತರ ಅವನ ದೇಹ (ಕೋಶ) ಕಳಚಿ ಬಿದ್ದರೂ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಈ ಕೋಶಗಳು ಹಾಗೆಯೇ ಉಳಿದು ಮುಂದೆ ಪ್ರಗತಿ ಮಾಡುತ್ತವೆ. ಮನುಷ್ಯದೇಹದಲ್ಲಿರುವ ನೀರು, ವಾಯು, ಅಗ್ನಿ, ಆಕಾಶ ಇವೆಲ್ಲವೂ ಊರ್ಜೆ (eಟಿeಡಿgಥಿ) ಆಗಿರುವುದರಿಂದ ಲಾ ಆಫ್ ಇನ್‌ಡಿಸ್ಟ್ರಕ್ಟಿಬಿಲಿಟಿ ಆಫ್ ಏನರ್ಜಿ ಪ್ರಕಾರ ಅವು ನಾಶವಾಗದೆ ಅನಂತದಲ್ಲಿ ವಿಲೀನವಾಗುತ್ತವೆ, ಅಂದರೆ ಒಂದು ದೊಡ್ಡ ಕೋಶಕ್ಕೆ (Uಟಿiveಡಿsಚಿಟ ಖeseಡಿvoiಡಿ) ಸೆಳೆಯಲ್ಪಡುತ್ತವೆ. ಭೌತಿಕ ಶರೀರವು ಸುಟ್ಟು ಇತರ ಅನೇಕ ಭೌತಿಕ ರೂಪಗಳಲ್ಲಿ ರೂಪಾಂತರವಾಗುತ್ತದೆ.
೨. ಹಿಂದೂ ತತ್ತ್ವಜ್ಞಾನದ ಪ್ರಕಾರ ಜೀವಂತ ಮನುಷ್ಯನು ತಮ್ಮ ದೇಹವನ್ನು ತೊರೆದು ಹೋದ ಪೂರ್ವಜರ ಆತ್ಮಗಳ ಸರಣಿಯ ಭಾಗವೇ ಆಗಿರುತ್ತಾನೆ. ಮನುಷ್ಯನ ದೇಹವು ಮೆಟೀರಿಯಲ್ (ಭೌತಿಕ) ಆಗಿದ್ದರೂ, ಆತ್ಮವು ನಾಶವಾಗದ ಶಕ್ತಿಯಾಗಿದೆ. ಈ ಶಕ್ತಿಯ ಮೇಲೆ ಅನೇಕ ಜನ್ಮಗಳಿಂದ ದೃಢವಾದ ಆಸಕ್ತಿ, ಭಾವ-ಭಾವನೆಗಳು, ಇಚ್ಛೆ, ವಾಸನೆಗಳು, ಒಳ್ಳೆಯ-ಕೆಟ್ಟ ಕರ್ಮಗಳ ಸಂಸ್ಕಾರಗಳಾಗಿರುತ್ತವೆ. ಅನೇಕ ಬಾರಿ ಪುನರ್ಜನ್ಮದಲ್ಲಿ ಇವೆಲ್ಲವುಗಳ ಪ್ರತಿಬಿಂಬ ಕಾಣಿಸಬಹುದು.
೩. ವಿಜ್ಞಾನವು ಎಷ್ಟು ಪ್ರಗತಿ ಸಾಧಿಸಿದೆಯೆಂದರೆ, ಈಗ ಮನುಷ್ಯನ ಹೆಜ್ಜೆಗಳು ಚಂದ್ರನ ಮೇಲೆಯೂ ಮೂಡಿವೆ ! ಇತ್ಯಾದಿ…. ಆದರೆ ಒಂದು ಅತ್ಯಂತ ಪ್ರಮುಖವಾದ ವಿಷಯವನ್ನು ನಾವು ಮರೆಯುತ್ತೇವೆ. ಅದೇನೆಂದರೆ, ಮನುಷ್ಯನು ಚಂದ್ರನ ಮೇಲೆ ಕಾಲಿಟ್ಟಿದ್ದರೂ, ಆ ಚಂದ್ರನಿಂದಾಗಿ ಭೂಮಿಯ ಮೇಲೆ (ಸಮುದ್ರದಲ್ಲಿ) ಉಂಟಾಗುವ ಉಬ್ಬರ ಮತ್ತು ಇಳಿತ- ನಿಂತಿಲ್ಲ. ಅದರಿಂದ ನಮ್ಮ ಮೇಲೆ ಉಂಟಾಗುವ ಪರಿಣಾಮ ಬದಲಾಗಿಲ್ಲ.
೪. ಇನ್ನೊಂದು ಅತ್ಯಂತ ಮಹತ್ವದ ವಿಷಯವೆಂದರೆ, ಜೀವಂತವಿದ್ದಾಗ ಅನೇಕ ಬಾರಿ ಮನುಷ್ಯನ ದೇಹದ ಆಕಾರದ ಪ್ರಮಾಣದಲ್ಲಿ ಅವನಿಗೆ ಹೆಚ್ಚು-ಕಡಿಮೆ ಆಹಾರ ಬೇಕಾಗುತ್ತದೆ. ದೇಹ ತೊರೆದ ನಂತರ ಆತ್ಮಕ್ಕೆ ಆಹಾರದ ವಾಸನೆ ಮಾತ್ರ ಸಾಕಾಗುತ್ತದೆ. ಆದ್ದರಿಂದ ಅಲ್ಲಿ ಆಹಾರದ ಪ್ರಮಾಣದೊಂದಿಗೆ (ಕ್ವಾಂಟಿಟಿ) ಸಂಬಂಧವಿರುವುದಿಲ್ಲ. ಪದಾರ್ಥಗಳ ವಾಸನೆ ಯಿಂದಲೇ ಅದು ತೃಪ್ತವಾಗುತ್ತದೆ; ಅದಕ್ಕಾಗಿಯೇ ಆತ್ಮಕ್ಕಾಗಿ ಇಡುವ ಊಟದ ಎಲೆಯಲ್ಲಿ ವಾಸನೆಗಾಗಿ ಸ್ವಲ್ಪ ಸ್ವಲ್ಪವೇ ಅನ್ನವನ್ನು ಬಡಿಸಲಾಗುತ್ತದೆ. ಅದೇ ರೀತಿ ಆ ಆತ್ಮಕ್ಕೆ ಆಹಾರದಲ್ಲಿ ಖಂಡಿತವಾಗಿ ಯಾವ ರಸ ಇಷ್ಟವಾಗುತ್ತದೆ ? ಎಂಬ ಕಲ್ಪನೆ ಇಲ್ಲದಿರುವುದರಿಂದ ಶ್ರಾದ್ಧಕ್ಕೆ ಎಲ್ಲಾ ರುಚಿಯ ರಸಗಳ ಅಂದರೆ ಕಹಿ, ಸಿಹಿ, ಖಾರ, ಉಪ್ಪು, ಒಗರು ಮತ್ತು ಹುಳಿ ಹೀಗೆ ಎಲ್ಲಾ ರುಚಿಯ ಪದಾರ್ಥಗಳನ್ನು ಮಾಡಲಾಗುತ್ತದೆ. ಉದಾ - ಹಾಗಲಕಾಯಿ ಪಲ್ಯ, ನೆಲ್ಲಿಕಾಯಿ - ಕೋಕಮ್(ಪುನರ್ಪಳಿ) ಚಟ್ನಿ, ಲಾಡು-ಪಾಯಸ, ವಡೆ, ಗೋರಿಕಾಯಿ(ಚವಳಿಕಾಯಿ) ಕುಂಬಳಕಾಯಿ ಪಲ್ಯ ಇತ್ಯಾದಿ. ತೀವ್ರ ಮಧುಮೇಹವಿರುವ ಮನುಷ್ಯನು ಜೀವಂತವಿದ್ದಾಗ ಸಿಹಿ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರೂ, ಅವನ ಮರಣದ ನಂತರ ಅವನಿಗೆ ಆ ಬಂಧನವನ್ನು ಪಾಲಿಸುವ ಅಗತ್ಯವಿರುವುದಿಲ್ಲ. ಮಧುಮೇಹವು ಶರೀರಕ್ಕೆ ಬರುತ್ತದೆ, ಆತ್ಮಕ್ಕಲ್ಲ.
೫. ಎರಡನೆಯ ಮಹತ್ವದ ವಿಷಯವೆಂದರೆ, ನಮ್ಮ ಧರ್ಮ ಶಾಸ್ತ್ರದಲ್ಲಿ ಪಿತೃಗಳ ೩ ತಲೆಮಾರುಗಳನ್ನು ಆವಾಹನೆ ಮಾಡಲಾಗುತ್ತದೆ. ಅದರೊಂದಿಗೆ ಕುಟುಂಬದಲ್ಲಿ ಅದಕ್ಕಿಂತ ಮೊದಲಿನ ಮೋಕ್ಷ, ಮುಕ್ತಿ, ಸದ್ಗತಿ ಸಿಗದವರಿಗೆ, ಯಾರಿಗೆ ಶಾಸ್ತ್ರೋಕ್ತವಾಗಿ ದಹನಸಂಸ್ಕಾರ ಮಾಡಲು ಸಾಧ್ಯವಾಗಿಲ್ಲವೋ ಅವರಿಗೆ, ಗರ್ಭದಲ್ಲೇ ಮೃತಪಟ್ಟವರಿಗೆ ಹಾಗೂ ವಿವಿಧ ಅವಸ್ಥೆಗಳಲ್ಲಿ ಮೃತಪಟ್ಟವರಿಗೆ ಅನ್ನ ಅಥವಾ ಪಿಂಡವನ್ನು ನೀಡಲಾಗುತ್ತದೆ. ಶಸ್ತ್ರಾಘಾತದಿಂದ ಮೃತರಾದ, ವಿಧ್ವಂಸಕ ಕೃತ್ಯಗಳಿಂದ ಮೃತರಾದ, ಸಂನ್ಯಾಸ ಸ್ವೀಕರಿಸಿದ ಮುಂತಾದ ಪೂರ್ವಜರಿಗಾಗಿ ಮಾಡುವ ಶ್ರಾದ್ಧಕ್ಕೆ ನಿರ್ದಿಷ್ಟ ದಿನಗಳನ್ನು ಕಾಯ್ದಿರಿಸಲಾಗಿದೆ.
೬. ಶ್ರಾದ್ಧಕ್ಕಾಗಿ ತಜ್ಞ ಪುರೋಹಿತರು ಸಿಗದಿದ್ದರೆ, ಊಟಕ್ಕೆ ಶಾಸ್ತ್ರೋಕ್ತವಾಗಿ ಪದಾರ್ಥಗಳನ್ನು ತಯಾರಿಸಲು ಸಾಧ್ಯವಾಗದಿದ್ದರೆ, ಎಲ್ಲಾ ಧಾರ್ಮಿಕ ವಿಧಿಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಯಾವುದೇ ಕಾರಣದಿಂದ ಎಲ್ಲವನ್ನು ಮಾಡಲು ಸಾಧ್ಯವಾಗದಿದ್ದರೆ, ಅತ್ಯಂತ ಶ್ರದ್ಧೆಯಿಂದ ಅರ್ಪಿಸಿದ, ಹೇಗೆ ಸಾಧ್ಯವೋ ಹಾಗೆ, ಧಾನ್ಯ-ನೈವೇದ್ಯವು ಪಿತೃಗಳನ್ನು ಖಂಡಿತವಾಗಿ ತಲುಪುತ್ತದೆ. ಅದಕ್ಕಾಗಿ ಸಾಲ ಸೋಲ ಮಾಡಿ, ಎರವಲು ಮಾಡಿ, ಆಡಂಬರ ಮಾಡಬಾರದು.
೭. ಕೆಲವು ಜನರಿಗೆ ಇವೆಲ್ಲವೂ ಪಿತೃಗಳಿಗೆ ತಲುಪುತ್ತವೆ ಎಂದು ಯಾವುದರ ಆಧಾರದ ಮೇಲೆ ಹೇಳುತ್ತೀರಿ ? ಎಂದು ಅನಿಸುತ್ತದೆ. ನಾವು ೩೬೪ ದಿನಗಳು ಪಿತೃಗಳಿಗಾಗಿ ಹೆಚ್ಚಾಗಿ ಏನನ್ನೂ ಮಾಡುವುದಿಲ್ಲ, ನಂತರ ಕೇವಲ ಶ್ರಾದ್ಧದ, ಸರ್ವಪಿತೃಗಳ ಯಾವುದೋ ಒಂದು ದಿನ ಎಲ್ಲಾ ಪಿತೃಗಳಿಗಾಗಿ ಒಟ್ಟಾಗಿ ಚಮಚ-ಚಮಚ ಬಡಿಸಿದ ಆಹಾರದ ಬಗ್ಗೆ ಇಷ್ಟೊಂದು ಆಲೋಚನೆ ಏಕೆ ಮಾಡಬೇಕು ? ಒಂದು ವೇಳೆ ಪಿತೃಗಳಿಗೆ ತಲುಪದಿದ್ದರೂ, ಕಾಗೆ ಮತ್ತು ಇತರ ಪಕ್ಷಿಗಳು, ಕೀಟಗಳು, ಪ್ರಾಣಿಗಳು ಆ ಆಹಾರವನ್ನು ತಿನ್ನುತ್ತವೆಯಲ್ಲವೇ !
೮. ಆ ಆಹಾರವನ್ನು ತಿನ್ನುವ ಕಾಗೆ ಮತ್ತು ಇತರ ಪಕ್ಷಿಗಳು, ಕೀಟಗಳು, ಪ್ರಾಣಿಗಳು ಜೀವನಚಕ್ರದ ಒಂದೊಂದು ಕೊಂಡಿಯಾಗಿವೆ. ಆ ಮೂಕ ಪ್ರಾಣಿಗಳ ಆಶೀರ್ವಾದ ನಮಗೆ ಸಿಗುತ್ತದೆ. ಪರಿಸರದ ಸಂದರ್ಭದಲ್ಲಿ ಕಾಗೆಯು ನಮ್ಮ ಸುತ್ತಮುತ್ತಲಿನ, ನಮ್ಮ ದೃಷ್ಟಿಯಲ್ಲಿ ಅನೇಕ ತ್ಯಾಜ್ಯ ವಸ್ತುಗಳನ್ನು ತಿಂದು ಸ್ವಚ್ಛತೆಯನ್ನು ಕಾಪಾಡುತ್ತದೆ.
ಮನುಷ್ಯನಿಗೆ ಗರಿಷ್ಠ ಪ್ರಮಾಣದಲ್ಲಿ ಪ್ರಾಣವಾಯು, ನೆರಳನ್ನು ನೀಡುವ, ಮಣ್ಣಿನ ಸವಕಳಿಯನ್ನು ತಡೆಯುವ ಆಲದ ಮರ-ಅರಳಿ ಮರದಂತಹ ವೃಕ್ಷಗಳು ಕಾಗೆಯ ಹಿಕ್ಕೆಯಿಂದಲೇ ಮೊಳಕೆ ಯೊಡೆಯುತ್ತವೆ. ಆದ್ದರಿಂದ ಕಾಗೆಗೆ ಆತ್ಮ ಕಾಣಿಸುತ್ತದೆಯೋ ಇಲ್ಲವೋ ? ಎಂಬುದಕ್ಕಿಂತ ಅದರ ಈ ಉಪಯುಕ್ತತೆಯನ್ನು ನಮ್ಮ ಸ್ವಾರ್ಥಕ್ಕಾಗಿಯಾದರೂ ನಾವು ಪೋಷಿಸಬೇಕು.
೯. ಸದ್ಯಕ್ಕೆ ಮೃತ ವ್ಯಕ್ತಿಗಳ ಹೆಸರಿನಲ್ಲಿ ವರ್ತಮಾನಪತ್ರಿಕೆಗಳಲ್ಲಿ ವರ್ಷಾನುಗಟ್ಟಲೆ ಅವರ ಛಾಯಾಚಿತ್ರಗಳು, ಕವನಗಳು, ಶ್ರದ್ಧಾಂಜಲಿಯ ಬರಹಗಳು, ದೂರದರ್ಶನದಲ್ಲಿ ಜಾಹೀರಾತುಗಳು, ಊರತುಂಬ ದೊಡ್ಡ ದೊಡ್ಡ ಪ್ಲೆಕ್ಸ್ ಬ್ಯಾನರ್ ಇತ್ಯಾದಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಮಾಡಲಾಗುತ್ತದೆ. ಅತ್ಯಂತ ಕಳಕಳಿಯಿಂದ ಭಾವನೆಗಳನ್ನು ವ್ಯಕ್ತಪಡಿಸಿರುವುದು ಕಾಣಿಸುತ್ತದೆ. ವಾಟ್ಸಾಪ್, ಫೇಸ್‌ಬುಕ್ ಮುಖಾಂತರವೂ ಈ ಸಂದೇಶಗಳು ಹರಿದಾಡುತ್ತವೆ. ಇವು ಆ ಮೃತ ವ್ಯಕ್ತಿಗಳಿಗೆ ಅಥವಾ ಪಿತೃಗಳಿಗೆ ತಲುಪುತ್ತವೆ ಎಂದು ಯಾವುದರ ಆಧಾರದ ಮೇಲೆ ಹೇಳುತ್ತೀರಿ ಎಂಬ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ. ಬಹುತೇಕ ಎಲ್ಲಾ ಮಾಧ್ಯಮಗಳು ಕೇವಲ ಹಿಂದೂಗಳ ವಿಷಯದಲ್ಲಿ ಮಾತ್ರ ಪ್ರಗತಿ(ಅಧೋಗತಿ)ಪರ ಆಗಿರುತ್ತವೆ; ಆದರೆ ಅವುಗಳೂ ಇಂತಹ ಜಾಹೀರಾತುಗಳನ್ನು ಮುದ್ರಿಸಿ ಹಣ ಸಂಪಾದಿಸುವ ಧಂದೆಯನ್ನು ಮಾಡುತ್ತವೆಯಲ್ಲವೇ !
೧೦. ನಿಮ್ಮ ದಿವಂಗತ ತಂದೆ-ತಾಯಿಯರು ನಿಮಗೆ ಬಹಳ ಸ್ಪಷ್ಟವಾಗಿ ಹೇಳಿದ್ದರೆ ಅಥವಾ ಅವರ ಉತ್ತರಕ್ರಿಯೆ, ಶ್ರಾದ್ಧವನ್ನು ಮಾಡಬೇಡಿ ಎಂದು ಬರೆದಿಟ್ಟಿದ್ದರೂ, ಅವರ ಮರಣದ ನಂತರ ಈ ಆಚರಣೆಗಳನ್ನು ನೀವು ಖಂಡಿತವಾಗಿಯೂ ಮಾಡಿರಿ; ಏಕೆಂದರೆ ಮನುಷ್ಯರು ಇಂತಹ ವಿಷಯಗಳನ್ನು ಹೇಳುವಾಗ, ಅವರ ಆಲೋಚನೆಗಳು ಇಲ್ಲಿನ ಅನುಭವ ಮತ್ತು ಜ್ಞಾನಕ್ಕೆ ಅನುಗುಣವಾಗಿರುತ್ತವೆ; ಆದರೆ ಪರಲೋಕಕ್ಕೆ ಹೋದ ಮೇಲೆ ನಾವು ಭೂಮಿಯಲ್ಲಿದ್ದಾಗ ಮಕ್ಕಳಲ್ಲಿ ಹೀಗೆ ಹೇಳಿ ತಪ್ಪು ಮಾಡಿದೆವು, ಎಂಬುದು ಅವರಿಗೆ ತಿಳಿದುಬಂದರೆ, ಅವರು ನಿಮ್ಮ ಬಳಿಗೆ ಮರಳಿ ಬಂದು ಮಗನೇ, ನನ್ನ ಶ್ರಾದ್ಧವನ್ನು ಮಾಡು, ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸಾವಿರಾರು ವರ್ಷಗಳಿಂದ ನಮ್ಮ ಧರ್ಮದಲ್ಲಿ ಅಸ್ತಿತ್ವದಲ್ಲಿರುವ ವಿಧಿಗಳನ್ನು ಒಂದು ದಿನ ಮಾಡಲು ಏನು ತೊಂದರೆ ಇದೆ ?
೧೧. ದಿವಂಗತ ಪೂರ್ವಜರ ಸ್ಮರಣಾರ್ಥ ಯಾವುದಾದರೂ ಸಂಸ್ಥೆಗೆ ದೇಣಿಗೆ ನೀಡುವುದು, ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಅಥವಾ ಬಾವಿ ತೋಡುವುದು, ದೇವಸ್ಥಾನಕ್ಕೆ ದಾನ ನೀಡುವುದು, ಇವೆಲ್ಲವೂ ಅತ್ಯಂತ ದೊಡ್ಡ ಸತ್ಕಾರ್ಯಗಳು - ಪುಣ್ಯಕರ್ಮಗಳಾಗಿವೆ; ಆದರೆ ಇವು ಶ್ರಾದ್ಧಕ್ಕೆ ಪರ್ಯಾಯ ಖಂಡಿತವಾಗಿಯೂ ಅಲ್ಲ.
೧೨. ನಮ್ಮ ಧರ್ಮದಲ್ಲಿ ಇಂತಹದೊಂದು ನಂಬಿಕೆಯೂ ಇದೆ - ಮನುಷ್ಯನಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ದೇವರು ತನ್ನ ಕೈಯಲ್ಲಿಟ್ಟುಕೊಂಡಿದ್ದಾನೆ; ಆದರೆ ಮನುಷ್ಯನಿಗೆ ಸಂತಾನ ಮತ್ತು ಸಂಪತ್ತನ್ನು ನೀಡುವ ಎಲ್ಲಾ ಅಂಶಗಳನ್ನು ಮಾತ್ರ ಅವನು ಮನುಷ್ಯನ ದಿವಂಗತ ಪೂರ್ವಜರಿಗೆ ಒಪ್ಪಿಸಿದ್ದಾನೆ.
೧೩. ಕರ್ಮಫಲದ ಬಗ್ಗೆ ಅನಗತ್ಯ ಗೊಂದಲ ಮಾಡಿಕೊಳ್ಳಬೇಡಿ. ನಿಮ್ಮ ಜನ್ಮಕುಂಡಲಿ ನಿಖರವಾಗಿದ್ದರೆ, ಅದರಲ್ಲಿರುವ ಗ್ರಹಸ್ಥಿತಿಗಳು ನೀವು ಜನ್ಮ ತಾಳುವಾಗ ಇದ್ದ ಗುಣಗಳನ್ನು ತೋರಿಸುವ ಪ್ರಗತಿ ಪತ್ರಿಕೆಯಾಗಿರುತ್ತದೆ. ಅದರಿಂದ ನಿಮ್ಮ ಆಯುಷ್ಯ ಹೇಗಿರ ಬಹುದು ? ಎಂಬುದನ್ನು ಕೇವಲ ಊಹಿಸಬಹುದು; ಆದರೆ ಹಾಗೆಯೇ ನಿಖರವಾಗಿಯೇ ನಡೆಯುವುದಿಲ್ಲ; ಏಕೆಂದರೆ ಅದು ನಿಮ್ಮ ಭವಿಷ್ಯವಲ್ಲವೇ ಅಲ್ಲ ! ನಿಮ್ಮ ಜೀವನದಲ್ಲಿ ಉತ್ತಮ ಪ್ರಯತ್ನದಿಂದ ನಿಮಗೆ ಅನೇಕ ವಿಷಯಗಳನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿದೆ. ಅಷ್ಟಕ್ಕೂ ಅದನ್ನೇ ಮಾಡಲು ನೀವು ಜನ್ಮ ತಳೆದಿರುತ್ತೀರಿ. ಹಿಂದಿನ ತರಗತಿಯ ಪ್ರಗತಿಪತ್ರಿಕೆಯು ನಿಮ್ಮ ಅಲ್ಲಿಯವರೆಗಿನ ಕರ್ಮಫಲವನ್ನು ತೋರಿಸುತ್ತದೆ. ಮುಂದಿನ ತರಗತಿಯಲ್ಲಿ ನೀವು ಶ್ರಮವಹಿಸಿ ಅಭ್ಯಾಸ ಮಾಡಿ ಸುವರ್ಣ ಪದಕವನ್ನೂ ಗೆಲ್ಲಬಹುದು; ಅದಕ್ಕಾಗಿಯೇ ಅತ್ಯಂತ ಅಶಿಕ್ಷಿತ, ಬಡ ಮತ್ತು ಹಿಂದುಳಿದ ಪ್ರದೇಶದಲ್ಲಿ ಜನಿಸಿದ ಮನುಷ್ಯನೂ ಕಷ್ಟಪಟ್ಟು ದುಡಿದು ವಿಜ್ಞಾನಿಯಾಗುವುದನ್ನು ನಾವು ನೋಡುತ್ತೇವೆ. ರಿಕ್ಷಾವಾಲಾನ ಮಗಳು ಚಾರ್ಟರ್ಡ್ ಅಕೌಂಟೆಂಟ್, ಪಾತ್ರೆ ತೊಳೆಯುವ ಮಹಿಳೆಯ ಮಗ ಜಿಲ್ಲಾಧಿಕಾರಿ, ಕೂಲಿ ಕಾರ್ಮಿಕನ ಮಗಳು ವೈದ್ಯೆಯಾಗುವುದನ್ನು ನಾವು ನೋಡುತ್ತೇವೆ. ಕರ್ಮದ ಫಲವನ್ನು ಹೇಳುವ ಕರ್ಮವಿಪಾಕ ಸಿದ್ಧಾಂತದೊಂದಿಗೆ ನಿಮ್ಮ ಪ್ರಯತ್ನ, ಶ್ರದ್ಧೆಯಿಂದ ಮಾಡಿದ ಕಷ್ಟಗಳು ಫಲ ನೀಡುತ್ತವೆ.
- ಶ್ರೀ. ಮಕರಂದ ಕರಂದೀಕರ, ಠಾಣೆ

