Dailyhunt Logo
  • Light mode
    Follow system
    Dark mode
    • Play Story
    • App Story
ಶ್ರೀ ಗಣೇಶನ ಪಂಚೋಪಚಾರ ಪೂಜೆ ಹೇಗೆ ಮಾಡಬೇಕು ?

ಶ್ರೀ ಗಣೇಶನ ಪಂಚೋಪಚಾರ ಪೂಜೆ ಹೇಗೆ ಮಾಡಬೇಕು ?

ಇಂದಿನ ಧಾವಂತದ ಜೀವನದಲ್ಲಿ ಪ್ರತಿದಿನ ಷೋಡಶೋಪಚಾರ ಪೂಜೆ ಮಾಡುವುದು ಕಠಿಣವಾಗಿದೆ; ಹಾಗಾದರೆ ಶ್ರೀ ಗಣೇಶನ ಪೂಜೆ ಹೇಗೆ ಮಾಡಬೇಕು ? ಪ್ರತಿದಿನ 'ಪಂಚೋಪಚಾರ ಪೂಜೆಯನ್ನು ಮಾಡಬೇಕು.

ಪಂಚೋಪಚಾರ ಪೂಜೆ ಎಂದರೆ ೧. ಸ್ನಾನ, ೨. ಗಂಧ, ೩. ಪುಷ್ಪ, ೪. ಧೂಪ-ದೀಪ, ೫.

ನೈವೇದ್ಯ - ಇವುಗಳಿಂದ ಕ್ರಮಬದ್ಧವಾಗಿ ಮಾಡುವ ಪೂಜೆ.

೧. ಮೊದಲು ಗಣೇಶನಿಗೆ ಉಗುರುಬೆಚ್ಚಗಿನ ಅಥವಾ ತಣ್ಣೀರಿನಿಂದ ಸ್ನಾನ (ಅಭಿಷೇಕ) ಮಾಡಿಸಿ, ಒಣ ಬಟ್ಟೆಯಿಂದ ಒರೆಸಬೇಕು.

೨. ಗಂಧವನ್ನು ಹಣೆಗೆ, ಎರಡೂ ಹೆಗಲಿಗೆ ಮತ್ತು ಹೊಕ್ಕಳಿನ ಭಾಗಕ್ಕೆ ಹಚ್ಚಬೇಕು. ಗಂಧವನ್ನು ಯಾವಾಗಲೂ ಅನಾಮಿಕದಿಂದ ಉಂಗುರದ ಬೆರಳಿನಿಂದ (ಕಿರುಬೆರಳಿನ ಪಕ್ಕದ ಬೆರಳು) ಹಚ್ಚಬೇಕು. ನಂತರ ಅರಿಶಿನ-ಕುಂಕುಮವನ್ನು ಹಚ್ಚಬೇಕು.

೩. ಪುಷ್ಪ : ಹೂವು ಮತ್ತು ಗರಿಕೆಗಳನ್ನು ಅರ್ಪಿಸಬೇಕು.

೪. ಧೂಪ : ಧೂಪ-ದೀಪ ಹಚ್ಚಬೇಕು, ಊದುಬತ್ತಿ ಹಚ್ಚಬೇಕು ಮತ್ತು ನೀಲಾಂಜನ ದಿಂದ ಆರತಿ ಬೆಳಗಬೇಕು.

೫. ನೈವೇದ್ಯ : ಬೆಲ್ಲ-ಕೊಬ್ಬರಿ, ಹಣ್ಣು ಅಥವಾ ಪಂಚಪಕ್ವಾನ್ನಗಳ ನೈವೇದ್ಯವನ್ನು ಅರ್ಪಿಸಬೇಕು. ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಕೆಳಗೆ ನೀರು ಚಿಮುಕಿಸಿ ಚೌಕಾಕಾರದ ಮಂಡಲವನ್ನು (ನೀರಿನಿಂದ) ಬರೆಯಬೇಕು. ನೈವೇದ್ಯದ ಮೇಲೆ ಎರಡು ಗರಿಕೆಗಳನ್ನು ಇಟ್ಟು ನಂತರ ದೇವರಿಗೆ ನೈವೇದ್ಯ ತೋರಿಸಬೇಕು.

ಗಣಪತಿಯ ನಾಮಸ್ಮರಣೆ ಮಾಡುವಾಗ ಅವನ ರೂಪವನ್ನು ಮನಸ್ಸಿನಲ್ಲಿ ತರಬೇಕು, ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು ಮತ್ತು ಚಿತ್ತದಲ್ಲಿ ಏಕಾಗ್ರಗೊಳಿಸಬೇಕು. ಇದರೊಂದಿಗೆ 'ಶ್ರೀ ಗಣೇಶಾಯ ನಮಃ | ಎಂಬ ನಾಮಜಪವನ್ನು ಮಾಡಬೇಕು.

- ಸೌ. ಅನುರಾಧಾ ಕುಲಕರ್ಣಿ, ಸಾತಾರಾ (ಆಧಾರ : 'ಆನಂದಿ ಜ್ಯೋತಿಷ)

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada