Dailyhunt Logo
  • Light mode
    Follow system
    Dark mode
    • Play Story
    • App Story
ಶ್ರೀ ಗಣೇಶೋತ್ಸವದಿಂದ ಹಿಂದೂ ರಾಷ್ಟ್ರ : ಲೋಕಮಾನ್ಯ ತಿಲಕರ ದೂರದೃಷ್ಟಿ !

ಶ್ರೀ ಗಣೇಶೋತ್ಸವದಿಂದ ಹಿಂದೂ ರಾಷ್ಟ್ರ : ಲೋಕಮಾನ್ಯ ತಿಲಕರ ದೂರದೃಷ್ಟಿ !

ಶ್ರೀಗಣೇಶೋತ್ಸವದಲ್ಲಿನ ಮೆರವಣಿಗೆಯಿಂದ ಮರಳಿ ಬಂದ ನಂತರ ಲೋಕಮಾನ್ಯ ತಿಲಕರು 'ನಮ್ಮ ರಾಷ್ಟ್ರೀಯ ಹಬ್ಬಗಳು' ಎಂಬ ಶೀರ್ಷಿಕೆಯ ಅಡಿಯಲ್ಲಿ ಸಂಪಾದಕೀಯವನ್ನು ಬರೆದಿದ್ದರು. ಅವರ ಈ ಸಂಪಾದಕೀಯ ಲೇಖನದಿಂದ ಸ್ವಾತಂತ್ರ್ಯ ಚಳವಳಿಯಲ್ಲಿ ಒಂದು ಅಧ್ಯಾಯ ಆರಂಭವಾಯಿತು ಮತ್ತು ಅದರಿಂದ ಸ್ವಾತಂತ್ರ್ಯ ಸಂಗ್ರಾಮದ ಅನೇಕ ಚಟುವಟಿಕೆಗಳು ಆರಂಭವಾದವು.

ತಿಲಕರು ೧೯೦೦ ರಿಂದ ೧೯೧೫ ರ ಅವಧಿಯಲ್ಲಿ ಹೀಗೆ ಬರೆದಿಟ್ಟಿದ್ದರು, 'ಇನ್ನೂ ಸ್ವಾತಂತ್ರ್ಯ ಸಿಗಲು ಎಷ್ಟು ಸಮಯ ಬೇಕಾಗಬಹುದು ಎಂದು ಹೇಳಲಾಗುವುದಿಲ್ಲ; ಆದರೆ ಸ್ವಾತಂತ್ರ್ಯ ಸಿಕ್ಕಾಗ, ಅಂದಿನ ಯುವ ಪೀಳಿಗೆಯು ಬೃಹತ್ ಭಾರತದ ಗಡಿಯನ್ನು ನಿರ್ಧರಿಸಬೇಕು. ಆ ಗಡಿಗಳನ್ನು ನಿಗದಿಪಡಿಸುವ ಅಂಶವೆಂದರೆ, ಎಲ್ಲೆಲ್ಲಿ ಗಣಪತಿ ದೇವರು ತಲುಪಿದ್ದಾರೆ, ಅಲ್ಲೆಲ್ಲಾ ಬೃಹತ್ ಭಾರತದ ನಾಲ್ಕೂ ದಿಕ್ಕಿನ ಗಡಿಗುರುತುಗಳನ್ನು ಸ್ಥಾಪಿಸಬೇಕು. ವಿದೇಶಗಳಲ್ಲೂ ಇಂದು ಎಲ್ಲೆಲ್ಲಿ ಗಣಪತಿ ಇರುವನೋ, ಆ ಪ್ರದೇಶದವರೆಗೆ ಒಂದಾನೊಂದು ಕಾಲದಲ್ಲಿ ಬೃಹತ್ ಭಾರತವು ವಿಸ್ತರಿಸಿತ್ತು ಎಂಬುದನ್ನು ನೆನಪಿನಲ್ಲಿಡಬೇಕು. ಪ್ರಸ್ತುತ ಪಾರತಂತ್ರ್ಯದ (ದಾಸ್ಯದ) ಕಾಲದಲ್ಲಿ ಇದು ಸತ್ಯವೆನಿಸಲಿಕ್ಕಿಲ್ಲ ಮತ್ತು ಸ್ವಾತಂತ್ರ್ಯ ಸಿಕ್ಕ ತಕ್ಷಣವೂ ಇದರ ಅನುಭವವಾಗದಿರಬಹುದು; ಆದರೆ ಮುಂದಿನ ೧೦೦ ವರ್ಷಗಳಲ್ಲಿ ಇದು ಸ್ಪಷ್ಟವಾಗಲಿದೆ.'

- ಶ್ರೀ ಮೊರೇಶ್ವರ ಜೋಶಿ (ಆಧಾರ: 'ಆಧ್ಯಾತ್ಮಿಕ ಓಂ ಚೈತನ್ಯ', ಗುರುಪೂರ್ಣಿಮಾ ವಿಶೇಷಾಂಕ)

(ಅನೇಕ ಸಂತ-ಮಹಾತ್ಮರು ಹೇಳಿರುವಂತೆ ೨೦೨೫ ರಿಂದ ಭಾರತದಲ್ಲಿ ಹಾಗೂ ಮುಂದೆ ಜಗತ್ತಿನಾದ್ಯಂತ 'ಹಿಂದೂ ರಾಷ್ಟ್ರ' (ರಾಮರಾಜ್ಯ) ಸ್ಥಾಪನೆಯಾಗಲಿದೆ. ಆ ಸಮಯದಲ್ಲಿ ಇತರ ದೇಶಗಳ ನಾಗರಿಕರೂ ಧರ್ಮಾಚರಣೆಯನ್ನು (ಶ್ರೀ ಗಣಪತಿ ಮುಂತಾದ ದೇವತೆಗಳ ಉಪಾಸನೆ) ಮಾಡಲಿದ್ದಾರೆ. ಅಂದರೆ ಸತ್ಯ, ತ್ರೇತಾ ಮತ್ತು ದ್ವಾಪರ ಯುಗಗಳಂತೆ ಜಗತ್ತಿನಾದ್ಯಂತ ಜನರು ಈಶ್ವರ ಪ್ರಾಪ್ತಿಗಾಗಿ ಸಾಧನೆ ಮಾಡುತ್ತಾರೆ. ಈ ವಿಷಯವು ಲೋಕಮಾನ್ಯ ತಿಲಕರಿಗೆ ತಮ್ಮ ಸಾಧನೆಯಿಂದ ಲಭಿಸಿದ ದೂರದೃಷ್ಟಿಯಿಂದ ೧೯೧೫ ಕ್ಕಿಂತ ಮೊದಲೇ ತಿಳಿದಿತ್ತು ಎಂಬುದು ಅವರ ಮೇಲಿನ ಮಾತುಗಳಿಂದ ಸ್ಪಷ್ಟವಾಗುತ್ತದೆ. - ಸಂಕಲನಕಾರರು)

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada