ಪ್ರಸ್ತುತ ಇಡೀ ವಿಶ್ವದ ಮೇಲೆ ಯುದ್ಧದ ಆತಂಕವಿದೆ. ಇಂತಹ ಸಮಯದಲ್ಲಿ ತಪೋಭೂಮಿ ಭಾರತದ ರಕ್ಷಣೆಗಾಗಿ 'ರಾಜಮಾತಂಗಿ' ದೇವಿಯ ಕವಚ ಅತ್ಯಗತ್ಯವಾಗಿದೆ !
ರಾಜಮಾತಂಗಿ ದೇವಿಯ ಬಗ್ಗೆ
ಶ್ರೀ. ಚೇತನ ರಾಜಹಂಸದೇವಿ ಮಾತಂಗಿಯು ಆದಿಶಕ್ತಿಯ ಪ್ರಧಾನ ಮಂತ್ರಿಯಾಗಿರುವುದರಿಂದ ಆಕೆಯನ್ನು 'ರಾಜಮಾತಂಗಿ' ಎಂದು ಕರೆಯಲಾಗುತ್ತದೆ.
ಪ್ರಸ್ತುತ ಇಡೀ ವಿಶ್ವದ ಮೇಲೆ ಯುದ್ಧದ ಆತಂಕವಿದೆ. ಇಂತಹ ಸಮಯದಲ್ಲಿ ತಪೋಭೂಮಿ ಭಾರತದ ರಕ್ಷಣೆಗಾಗಿ 'ರಾಜಮಾತಂಗಿ' ದೇವಿಯ ಕವಚ ಅತ್ಯಗತ್ಯವಾಗಿದೆ. ದಶಮಹಾವಿದ್ಯೆಗಳಲ್ಲಿ ೯ ನೇ ದೇವಿಯಾಗಿರುವ 'ರಾಜಮಾತಂಗಿ' ದೇವಿಯು ವಾಣಿಯನ್ನು ಶುದ್ಧಗೊಳಿಸುವ ಮತ್ತು ಜ್ಞಾನವನ್ನು ಕರುಣಿಸುವ ದೇವತೆಯಾಗಿದ್ದಾಳೆ. ಭಗವಾನ್ ಶ್ರೀವಿಷ್ಣುವಿನ ದಶಾವತಾರಗಳ ಸಮಯದಲ್ಲೂ ದಶಮಹಾವಿದ್ಯೆಗಳು ಕಾರ್ಯನಿರತವಾಗಿರುತ್ತವೆ. ಶ್ರೀರಾಮ ಅವತಾರದಲ್ಲಿ ರಾಜಮಾತಂಗಿಯ ತತ್ತ್ವವು ಕಾರ್ಯನಿರತವಾಗಿತ್ತು, ಆದ್ದರಿಂದ ಈಗ ರಾಮರಾಜ್ಯದ ಸ್ಥಾಪನೆಗಾಗಿ ನಮಗೆ ರಾಜಮಾತಂಗಿ ದೇವಿಯ ಉಪಾಸನೆಯ ಅವಶ್ಯಕತೆಯಿದೆ. ಮಾತಂಗಿಯು ದಶಮಹಾವಿದ್ಯೆಗಳಲ್ಲಿ ಒಂಬತ್ತನೇ ವಿದ್ಯೆ (ಮಹಾವಿದ್ಯೆ) ಆಗಿದ್ದಾಳೆ. ಮಾತಂಗಿಯು 'ಮಾತಂಗ ಶಿವನ' ಪತ್ನಿ ಎಂದು ನಂಬಲಾಗಿದೆ. ಅವರು 'ಮಾತಂಗ ಭೈರವ' ಎಂದು ಪ್ರಸಿದ್ಧರಾಗಿದ್ದಾರೆ. ನಿಜವಾದ ಅರ್ಥದಲ್ಲಿ ಆಕೆ 'ಮಾತಂಗ ಶಿವನ' ಶಕ್ತಿಯಾಗಿದ್ದಾಳೆ. ಆಕೆ 'ವರದಾಯಿನಿ' ಆಗಿದ್ದಾಳೆ, ಭಕ್ತರಿಗೆ ತಕ್ಷಣವೇ ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುತ್ತಾಳೆ. ರಾಜಮಾತಂಗಿ ದೇವಿಯು ಸಾಕ್ಷಾತ್ ಆದಿಪರಾಶಕ್ತಿಯ ಅವತಾರವಾಗಿದ್ದಾಳೆ.
ನಾರದರು ಬ್ರಹ್ಮದೇವನಲ್ಲಿ ಮಾತಂಗಿಯ ಉಗಮದ ಬಗ್ಗೆ ಕೇಳಿದಾಗ, ಬ್ರಹ್ಮದೇವರು, 'ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು 'ಮಾತಂಗಿ'ಯ ರೂಪದಲ್ಲಿ ಮಾತಂಗ ಋಷಿಗಳ ಮುಂದೆ ಪ್ರಕಟಳಾದಳು. ತ್ರಿಪುರಾಸುರನನ್ನು ವಧಿಸಲು ಭಗವಾನ್ ರುದ್ರನು ಸಹ ಇದೇ ಮಾತಂಗಿ ದೇವಿಯ ಉಪಾಸನೆ ಮಾಡಿ ಆ ಕಾರ್ಯಕ್ಕಾಗಿ ಅವಳನ್ನು ಪ್ರಾರ್ಥಿಸಿದ್ದನು,' ಎಂದು ಹೇಳಿದರು.
ಶ್ರೀ. ಚೇತನ ರಾಜಹಂಸ (೭.೫.೨೦೨೬)

