Dailyhunt Logo
  • Light mode
    Follow system
    Dark mode
    • Play Story
    • App Story
ಟಾಸ್ಮೇನಿಯಾ ಮಾಡಿ ತೋರಿಸಿತು !

ಟಾಸ್ಮೇನಿಯಾ ಮಾಡಿ ತೋರಿಸಿತು !

ಟಾಸ್ಮೇನಿಯಾವು ಆಸ್ಟ್ರೇಲಿಯಾದ ಒಂದು ಪುಟ್ಟ ದ್ವೀಪ !

ಇದು ಪ್ರವಾಸೋದ್ಯಮಕ್ಕೆ ಪ್ರಸಿದ್ಧವಾಗಿದೆ; ಆದರೆ ಪ್ರಸ್ತುತ ಪರಿಸರ ರಕ್ಷಣೆಗಾಗಿ ಮಾಡಿದ ಅಪ್ರತಿಮ ಸಾಧನೆಯಿಂದಾಗಿ ಈ ದ್ವೀಪವು ಜಗತ್ತಿನಾದ್ಯಂತದ ಪರಿಸರಪ್ರೇಮಿಗಳಲ್ಲಿ ಚರ್ಚೆಯಲ್ಲಿದೆ. ವಿಷಯವೇನೆಂದರೆ, ಸರಿಸುಮಾರು ೧೯೯೫ ರಲ್ಲಿ ಈ ದ್ವೀಪದಲ್ಲಿರುವ 'ಸೊರೆಲ್ ಮತ್ತು 'ಕ್ರೆಸೆಂಟ್ ಎಂಬ ೨ ದೊಡ್ಡ ಮತ್ತು ಪರಸ್ಪರ ಸಂಪರ್ಕ ಹೊಂದಿದ ಸರೋವರಗಳಲ್ಲಿ 'ಯುರೋಪಿಯನ್ ಕಾರ್ಪ್ ಮೀನುಗಳು ಕಂಡುಬಂದವು.

'ಕಾರ್ಪ್ ಮೀನುಗಳು ಆಕ್ರಮಣಕಾರಿ ಎಂದು ಕರೆಯಲ್ಪಡುತ್ತವೆ. ಈ ಜಲಾಶಯವನ್ನು ಪ್ರವೇಶಿಸುತ್ತಿದ್ದಂತೆಯೇ ಅವು ಸರೋವರದ ತಳಭಾಗದಲ್ಲಿರುವ ಮೃದುವಾದ ಆಹಾರವನ್ನು ಹುಡುಕುವಾಗ ಅಲ್ಲಿನ ಮಣ್ಣು ಮತ್ತು ಕೆಸರನ್ನು ಅಗೆದು ಹೊರಹಾಕಿದವು. ಇದರಿಂದಾಗಿ ಸರೋವರಗಳ ನೀರು ಅತ್ಯಂತ ಮಲೀನವಾಯಿತು. ಕಲಕಿದ ನೀರಿನಿಂದಾಗಿ ಸೂರ್ಯನ ಬೆಳಕು ತಳಭಾಗಕ್ಕೆ ತಲುಪದಂತಾಯಿತು. ಇದರ ನೇರ ಪರಿಣಾಮ ಅಲ್ಲಿನ ಜಲಸಸ್ಯಗಳು ಮತ್ತು ಸ್ಥಳೀಯ ಜೀವ ಪ್ರಭೇದಗಳ ಮೇಲಾಯಿತು. 'ಇದಕ್ಕೆ ಪರಿಹಾರವೇನು ?, ಎಂಬುದು ಸಿಹಿನೀರಿನ ನೈಸರ್ಗಿಕ ಸಂರಕ್ಷಣಾ ಸಂಸ್ಥೆಯಾದ 'ಇನ್ಲ್ಯಾಂಡ್ ಫಿಶರೀಸ್ ಸರ್ವಿಸ್ (ಐ.ಎಫ್.ಎಸ್.) ಎದುರಿಗಿದ್ದ ಜಟಿಲ ಪ್ರಶ್ನೆಯಾಗಿತ್ತು ! ಏಕೆಂದರೆ ಎರಡೂ ಸರೋವರಗಳು ೫೦ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿವೆ. ಹೀಗಾಗಿ ಅಷ್ಟು ದೊಡ್ಡ ಮತ್ತು ಆಳವಾದ ನೀರಿನಲ್ಲಿ ಅಡಗಿರುವ ಕಾರ್ಪ್ ಮೀನುಗಳನ್ನು ಹುಡುಕುವುದು ಕಠಿಣವಿತ್ತು. ಇದಕ್ಕೆ ಪರಿಹಾರವಾಗಿ ಐ.ಎಫ್.ಎಸ್. 'ಜ್ಯುಡಾಸ್ ಫಿಶ್ ತಂತ್ರಜ್ಞಾನವನ್ನು ಬಳಸುವ ಉಪಾಯವನ್ನು ಕಂಡುಕೊಂಡಿತು ಮತ್ತು ೨೮ ವರ್ಷಗಳ ತಾಳ್ಮೆ ಹಾಗೂ ಕಠಿಣ ಪರಿಶ್ರಮವನ್ನು ಪರೀಕ್ಷಿಸುವ ಸುದೀರ್ಘ ಪ್ರಯಾಣ ಪ್ರಾರಂಭವಾಯಿತು ! ಈ ತಂತ್ರಜ್ಞಾನದ ಪ್ರಕಾರ ಕೆಲವು ಗಂಡು ಕಾರ್ಪ್ ಮೀನುಗಳ ದೇಹದಲ್ಲಿ 'ರೇಡಿಯೋ ಟ್ರಾನ್ಸ್‌ಮೀಟರ್ಗಳನ್ನು ಅಳವಡಿಸಿ ಅವುಗಳನ್ನು ಮತ್ತೆ ನೀರಿನಲ್ಲಿ ಬಿಡಲಾಯಿತು. ಕಾರ್ಪ್ ಮೀನುಗಳಿಗೆ ಗುಂಪಿನಲ್ಲಿ ವಾಸಿಸುವ ಅಭ್ಯಾಸವಿರುತ್ತದೆ. ಆದ್ದರಿಂದ ಈ ಟ್ರಾನ್ಸ್‌ಮೀಟರ್ ಅಳವಡಿಸಿದ ಮೀನುಗಳು ಇತರ ಕಾರ್ಪ್ ಮೀನುಗಳ ಗುಂಪನ್ನು ಸೇರಲು ಹೋದಲ್ಲೆಲ್ಲಾ, ವಿಜ್ಞಾನಿಗಳು ನಿಖರವಾಗಿ ಅಲ್ಲಿಗೆ ತಲುಪಿ ಬಲೆ ಬೀಸಿ ಇಡೀ ಗುಂಪನ್ನೇ ಹಿಡಿಯುತ್ತಿದ್ದರು. ಈ ರೀತಿಯ ನಿರಂತರ ಪ್ರಯತ್ನದ ನಂತರ ವಿಜ್ಞಾನಿಗಳು ೪೯ ಸಾವಿರದ ೩೦೧ ಕಾರ್ಪ್ ಮೀನುಗಳನ್ನು ಹಿಡಿದು ಈ ಸರೋವರಗಳನ್ನು ಸಂಪೂರ್ಣವಾಗಿ 'ಕಾರ್ಪ್ ಮುಕ್ತಗೊಳಿಸಿದರು. ಈ ೨೮ ವರ್ಷಗಳಲ್ಲಿ ಹಲವಾರು ಬಾರಿ ಪ್ರವಾಹಗಳು ಬಂದವು, ಇದರಿಂದಾಗಿ ಮೀನು ಹಿಡಿಯುವುದು ಕಷ್ಟಕರವಾಯಿತು. ಅದರಲ್ಲಿಯೂ ಕಾರ್ಪ್ ಮೀನುಗಳು ನೀರನ್ನು ಕಲಕಿದ್ದರಿಂದ ಜಲಾಶಯದಲ್ಲಿ ಮೀನುಗಳನ್ನು ಹುಡುಕುವುದು ಬಹಳ ಕಷ್ಟದ ಕೆಲಸವಾಗಿತ್ತು. ಮುಖ್ಯವಾಗಿ ಹೆಣ್ಣು ಕಾರ್ಪ್ ಮೀನು ಒಂದೇ ಬಾರಿಗೆ ೩ ಲಕ್ಷಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ.

ಮಾಗೂರು ಮೀನುಗಳ ಹಾವಳಿ !

ಇಲ್ಲಿ ಮುಖ್ಯ ಪ್ರಶ್ನೆಯೆಂದರೆ, ಟಾಸ್ಮೇನಿಯಾವು ಕೇವಲ ಒಂದು ಮೀನಿನ ಪ್ರಭೇದದಿಂದ ಸರೋವರವನ್ನು ಉಳಿಸಲು ೨೮ ವರ್ಷಗಳ ಕಾಲ ಹೋರಾಟ ನಡೆಸಬಹುದಾದರೆ, ಭಾರತವು ತನ್ನ 'ಜೀವವಾಹಿನಿಗಳಾದ ನದಿಗಳನ್ನು ಮಾಲಿನ್ಯದ ಕಪಿಮುಷ್ಟಿಯಿಂದ ರಕ್ಷಿಸುವಲ್ಲಿ ಏಕೆ ವಿಫಲವಾಗುತ್ತಿದೆ ? ನದಿಗಳ ಮಾಲಿನ್ಯವು ಭಾರತವನ್ನು ಕಾಡುತ್ತಿರುವ ಸಮಸ್ಯೆಯಾಗಿದೆ; ಭಾರತದ ಅನೇಕ ಜಲಾಶಯಗಳಲ್ಲಿಯೂ ವಿದೇಶಿ ಆಕ್ರಮಣಕಾರಿ ಮೀನುಗಳಿಂದಾಗಿ ಅಲ್ಲಿನ ಪರಿಸರ ವ್ಯವಸ್ಥೆ (ಇಕೋಸಿಸ್ಟಮ್) ಅಪಾಯದಲ್ಲಿದೆ. ಟಾಸ್ಮೇನಿಯಾದಲ್ಲಿ 'ಇನ್ಲ್ಯಾಂಡ್ ಫಿಶರೀಸ್ ಸರ್ವಿಸ್ ಕಾರ್ಪ್ ಮೀನಿನ ವಿರುದ್ಧ ೨೮ ವರ್ಷಗಳ ಕಾಲ ವೈಜ್ಞಾನಿಕ ಹೋರಾಟ ನಡೆಸಿದಂತೆ ಇಂದು ಭಾರತವೂ ಹೋರಾಟ ಮಾಡುವ ಆವಶ್ಯಕತೆ ಇದೆ.

ಪರಿಸರ ರಕ್ಷಣೆ, ಒಂದು ಸಂಕಲ್ಪ !

ಭಾರತವು ಟಾಸ್ಮೇನಿಯಾದಿಂದ 'ನಿರಂತರ ಶ್ರಮ ಮತ್ತು 'ವೈಜ್ಞಾನಿಕ ನಿಖರತೆಯನ್ನು ಕಲಿಯುವ ಅಗತ್ಯವಿದೆ. ನದಿಗಳ ಶುದ್ಧೀಕರಣವು ೧-೨ ವರ್ಷಗಳ ಅಭಿಯಾನವಲ್ಲ, ಅದು ನಿರಂತರ ನಡೆಯುವ ಪ್ರಕ್ರಿಯೆಯಾಗಿದೆ. ಪ್ರಕೃತಿಗೆ ಆದ ಹಾನಿಯನ್ನು ಪ್ರಕೃತಿಯ ವೇಗದಲ್ಲೇ ಸರಿಪಡಿಸಬೇಕಾಗುತ್ತದೆ ಅದನ್ನು 'ಸಂಕಲ್ಪ ವಾಗಿ ಕೈಗೆತ್ತಿಕೊಂಡರೆ ಪರಿಸರದ ಸಮತೋಲನ ಸಾಧ್ಯ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada