ಮುಜಾಫರನಗರ (ಉತ್ತರ ಪ್ರದೇಶ) - ಇಲ್ಲಿನ ೧೪ ವರ್ಷದ ಹುಡುಗಿಯ ಮೇಲೆ ಆಕೆಯ ತಂದೆ ಮತ್ತು ಚಿಕ್ಕಪ್ಪ ಹಲವು ಬಾರಿ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಾಯಿ ಈಗಾಗಲೇ ಮನೆಯನ್ನು ತೊರೆದಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಹುಡುಗಿಯ ಚಿಕ್ಕಪ್ಪ ಕಳೆದ ೪ ತಿಂಗಳಿಂದ ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತೆಯು ಧೈರ್ಯ ಮಾಡಿ ಈ ವಿಷಯವನ್ನು ತನ್ನ ತಂದೆಗೆ ತಿಳಿಸಿದಾಗ, ತಂದೆಯು ಮಗಳಿಗೆ ಸಹಾಯ ಮಾಡುವ ಬದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ನೊಂದ ಸಂತ್ರಸ್ತೆಯು ತನ್ನ ಚಿಕ್ಕಮ್ಮನಿಗೆ (ತಾಯಿಯ ತಂಗಿ) ಸಂಪೂರ್ಣ ಘಟನೆಯನ್ನು ತಿಳಿಸಿದ್ದಾಳೆ. ತದನಂತರ ಚಿಕ್ಕಮ್ಮ ಏಪ್ರಿಲ್ ೩೦, ೨೦೨೬ ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸಂತ್ರಸ್ತೆಯ ತಂದೆ ಮತ್ತು ಚಿಕ್ಕಪ್ಪನ ವಿರುದ್ಧ 'ಪೊಕ್ಸೊ' ಕಾಯ್ದೆಯಡಿ ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ.

