Dailyhunt
ಟ್ರಂಪ್ ಅವರಿಂದ 'ಹಾರ್ಮುಜ್'ಗೆ 'ಸ್ಟ್ರೇಟ್ ಆಫ್ ಟ್ರಂಪ್' ಎಂದು ಮರುನಾಮಕರಣ!

ಟ್ರಂಪ್ ಅವರಿಂದ 'ಹಾರ್ಮುಜ್'ಗೆ 'ಸ್ಟ್ರೇಟ್ ಆಫ್ ಟ್ರಂಪ್' ಎಂದು ಮರುನಾಮಕರಣ!

(ಸ್ಟ್ರೇಟ್ ಅಂದರೆ ಸಮುದ್ರ ಧುನಿ (ಜಲಸಂಧಿ) - ಅಂದರೆ ಎರಡು ದೊಡ್ಡ ಜಲಮಾರ್ಗಗಳನ್ನು ಸಂಪರ್ಕಿಸುವ ಕಿರಿದಾದ ಜಲಮಾರ್ಗ)

ವಾಷಿಂಗ್ಟನ್ (ಅಮೆರಿಕಾ) - ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ 'ಟ್ರುಥ್ ಸೋಶಿಯಲ್' ಎಂಬ ಸಾಮಾಜಿಕ ಮಾಧ್ಯಮದಲ್ಲಿ ತಮ್ಮದೇ ಹಳೆಯ ಪೋಸ್ಟ್ ಒಂದನ್ನು ಮರುಪ್ರಸಾರ (ರಿಪೋಸ್ಟ್) ಮಾಡಿದ್ದಾರೆ.

ಅದರಲ್ಲಿ ಒಂದು ಚಿತ್ರವಿದ್ದು, ಅದರ ಮೇಲೆ 'ಸ್ಟ್ರೇಟ್ ಆಫ್ ಹಾರ್ಮುಜ್' ನ ಹೆಸರನ್ನು ಬದಲಿಸಿ 'ಸ್ಟ್ರೇಟ್ ಆಫ್ ಟ್ರಂಪ್' ಎಂದು ಉಲ್ಲೇಖ ಮಾಡಲಾಗಿದೆ. ವಿಶೇಷವೆಂದರೆ, ಟ್ರಂಪ್ ಅವರು ಪೋಸ್ಟ್ ಮಾಡಿದ ಆ ಮೂಲ ಪೋಸ್ಟ್ ಅನ್ನು ಬಳಕೆದಾರನು ಈ ಮೊದಲೇ ಅಳಿಸಿ ಹಾಕಿದ್ದಾನೆ (ಡಿಲೀಟ್ ಮಾಡಿದ್ದಾನೆ).

ಅಮೆರಿಕವು ಹಾರ್ಮುಜ್ ಮೇಲೆ ದಿಗ್ಬಂಧನ ವಿಧಿಸಿರುವುದರಿಂದ ಇರಾನ್‌ನ ಸಂಕಷ್ಟಗಳು ಈಗಾಗಲೇ ಹೆಚ್ಚಿವೆ. ಇರಾನ್‌ಗೆ ತನ್ನ ತೈಲ ಮತ್ತು ಇತರ ವಸ್ತುಗಳನ್ನು ರಫ್ತು ಮಾಡಲು ಅಡೆತಡೆಗಳು ಉಂಟಾಗಿವೆ. ಬಾಂಬ್ ಎಸೆಯುವುದರಿಂದಲ್ಲ, ಬದಲಾಗಿ ಇಂತಹ ದಿಗ್ಬಂಧನದಿಂದ ಇರಾನ್ ದಾರಿಗೆ ಬರುತ್ತದೆ ಮತ್ತು ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸುತ್ತದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಟ್ರಂಪ್ ಮುಂದೆ ಮಾತನಾಡಿ, ಬಾಂಬ್ ದಾಳಿಗಿಂತ ದಿಗ್ಬಂಧನವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದ್ದಾರೆ. ಇರಾನ್ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು, ಅದರ ಉಸಿರುಕಟ್ಟಿದಂತಾಗಿದೆ ಮತ್ತು ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್‌ನ ಇಂಧನ ಯೋಜನೆಗಳ ಕಾರ್ಯಾಚರಣೆ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದ್ದು, ತೈಲವನ್ನು ರಫ್ತು ಮಾಡಲು ಸಾಧ್ಯವಾಗದ ಕಾರಣ ಅಲ್ಲಿನ ಸರಕಾರದ ಮೇಲೆ ಭಾರಿ ಒತ್ತಡ ಬಂದಿದೆ, ಎಂದು ಟ್ರಂಪ್ ಅವರು ದಾವೆ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada