ಮಹಾವಿತರಣ್' ಎಂಜಿನಿಯರ್‌ಗೆ ಕಪಾಳಮೋಕ್ಷ ಮಾಡಿದ ಪ್ರಕರಣ
ವಾಶಿಮ - ಇಲ್ಲಿಯ ಸರಕಾರಿ ಕಚೇರಿಗೆ ನುಗ್ಗಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಾಜಿ ಕೃಷಿ ಸಭಾಪತಿ ವೈಭವ್ ಸರನಾಯಕ್ ಅವರಿಗೆ ಜಿಲ್ಲಾ ಸತ್ರ ನ್ಯಾಯಾಲಯವು 4 ವರ್ಷಗಳ ಸಶ್ರಮ ಜೈಲುಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿದೆ.
2013 ರಲ್ಲಿ ವೈಭವ್ ಅವರು ಮಹಾವಿತರಣ್ ಸಹಾಯಕ ಎಂಜಿನಿಯರ್ ಸಂಜಯ್ ಮಾಳಿ ಅವರ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು 6 ನೇರ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಪುರಾವೆಗಳಾಗಿ ಪರಿಗಣಿಸಲಾಯಿತು.
ಟ್ರಾನ್ಸ್‌ಫಾರ್ಮರ್ ನೀಡಲಿಲ್ಲ ಎಂಬ ಕಾರಣಕ್ಕೆ ವೈಭವ್ ಅವರು ಸಂಜಯ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ಕುರಿತು ದೂರು ದಾಖಲಿಸಿದ ನಂತರ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.

