Dailyhunt Logo
  • Light mode
    Follow system
    Dark mode
    • Play Story
    • App Story
ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿಯ ವರದಿ ಅತ್ಯಂತ ದ್ವೇಷಪೂರಿತ! - ಭಾರತ

ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿಯ ವರದಿ ಅತ್ಯಂತ ದ್ವೇಷಪೂರಿತ! - ಭಾರತ

  • ಸಮಿತಿಯ ಭಾರತ ವಿರೋಧಿ ವರದಿಗೆ ಕೇಂದ್ರ ಸರಕಾರದ ಬಲವಾದ ಪ್ರತಿಕ್ರಿಯೆ
  • ಸಮಿತಿಯ ಆಧಾರರಹಿತ ಆರೋಪಗಳನ್ನು ತಳ್ಳಿಹಾಕಿದ ಭಾರತ!

ನವದೆಹಲಿ - ಭಾರತವನ್ನು ಗುರಿಯಾಗಿಸುವ 'ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿ'ಯ ('ಯು.ಎನ್. ಸಿ.ಇ.ಆರ್.ಡಿ.'ಯ) ವರದಿಗೆ ಕೇಂದ್ರ ಸರಕಾರವು ಬಲವಾದ ಪ್ರತಿಕ್ರಿಯೆ ನೀಡಿದೆ.

ಈ ವರದಿಯಲ್ಲಿ ಸಮಿತಿಯು ಮಂಡಿಸಿರುವ ತೀರ್ಮಾನಗಳು ರಾಜಕೀಯ ಪ್ರೇರಿತ ಮತ್ತು ಅತ್ಯಂತ ದ್ವೇಷಪೂರಿತವಾಗಿವೆ ಎಂಬ ಮಾತುಗಳಲ್ಲಿ ಭಾರತದ ವಿದೇಶಾಂಗ ಸಚಿವಾಲಯವು ಈ ಭಾರತದ್ವೇಷಿ ವರದಿಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಇದರೊಂದಿಗೆ ಸಮಿತಿಯ ಎಲ್ಲಾ ಆಧಾರರಹಿತ ಆರೋಪಗಳನ್ನು ತಳ್ಳಿಹಾಕಿದೆ. ಜಿನಿವಾನಲ್ಲಿ ಆಗಸ್ಟ 11 ಮತ್ತು 12 ರಂದು ನಡೆದ ಭಾರತದ 11 ನೇ 'ಐ.ಸಿ.ಆರ್.ಡಿ.' (ಎಲ್ಲಾ ರೀತಿಯ ಜನಾಂಗೀಯ ತಾರತಮ್ಯ ನಿರ್ಮೂಲನೆಗಾಗಿನ ಅಂತರರಾಷ್ಟ್ರೀಯ ಸಮಾವೇಶ) ನಿಯತಕಾಲಿಕ ಪರಾಮರ್ಶೆಯ ನಂತರ ಈ ವರದಿಯನ್ನು ಪ್ರಕಟಿಸಲಾಗಿತ್ತು. ವಿದೇಶಾಂಗ ಸಚಿವಾಲಯವು 'ನಾವು ಈ ಸಮಿತಿಯು ದಾಖಲಿಸಿದ ವೀಕ್ಷಣೆಗಳ ಪರಾಮರ್ಶೆ ನಡೆಸಿದ್ದೇವೆ' ಎಂದು ಸ್ಪಷ್ಟಪಡಿಸಿದೆ.

ವಿದೇಶಾಂಗ ಸಚಿವಾಲಯವು 'ಇದೊಂದು ಮಾನದಂಡ ಒಪ್ಪಂದದ ಅಡಿಯಲ್ಲಿ ಮಾಡಿದ ಮೌಲ್ಯಮಾಪನವಾಗಿತ್ತು ಮತ್ತು ಭಾರತವು ಈ ಪ್ರಕ್ರಿಯೆಯಲ್ಲಿ ರಚನಾತ್ಮಕವಾಗಿ ಭಾಗವಹಿಸಿತ್ತು. ಜನಾಂಗೀಯ ತಾರತಮ್ಯವನ್ನು ಕೊನೆಗೊಳಿಸುವ ತನ್ನ ಸಂಕಲ್ಪಕ್ಕೆ ಭಾರತವು ಬದ್ಧವಾಗಿದೆ. ಮೌಲ್ಯಮಾಪನದ ಹಂತದಲ್ಲಿ ಭಾರತವು ತನ್ನ ಸಾಂವಿಧಾನಿಕ ರಕ್ಷಣೆಗಳು, ವ್ಯಾಪಕ ಕಾನೂನು ವ್ಯವಸ್ಥೆ, ಬಹುತ್ವದ ಸಂಸ್ಕೃತಿ ಮತ್ತು ವಂಚಿತ ವರ್ಗಗಳ ರಕ್ಷಣೆಗಾಗಿ ನಡೆಯುತ್ತಿರುವ ಉಪಕ್ರಮಗಳನ್ನು ಎತ್ತಿ ತೋರಿಸಿದೆ' ಎಂದು ಹೇಳಿದೆ.

ನಾವು ಎಲ್ಲಾ ಭಾರತೀಯರಿಗಾಗಿ ಸಮಾನತೆ, ಘನತೆ ಮತ್ತು ಅವಕಾಶಗಳನ್ನು ಖಚಿತಪಡಿಸುತ್ತಿದ್ದೇವೆ!

ಸಚಿವಾಲಯದ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ, 'ಭಾರತೀಯ ನಿಯೋಗವು ದೇಶದ ಸಂಸ್ಕೃತಿ, ವೈವಿಧ್ಯತೆ, ವ್ಯಾಪ್ತಿ ಮತ್ತು ಸಂಕೀರ್ಣತೆ, ಕಾನೂನು ಚೌಕಟ್ಟು, ರಕ್ಷಣೆಗಳು, ಸಕಾರಾತ್ಮಕ ಕ್ರಮಗಳು, ಪ್ರಜಾಸತ್ತಾತ್ಮಕ ಹೊಣೆಗಾರಿಕೆ ಮುಂತಾದ ಎಲ್ಲಾ ವಿಷಯಗಳ ಮೇಲೆ ಒತ್ತು ನೀಡಿದೆ; ಏಕೆಂದರೆ ನಾವು ಎಲ್ಲಾ ಭಾರತೀಯರಿಗಾಗಿ ಸಮಾನತೆ, ಘನತೆ ಮತ್ತು ಅವಕಾಶಗಳನ್ನು ಖಚಿತಪಡಿಸುತ್ತಿದ್ದೇವೆ' ಎಂದು ತಿಳಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada