Dailyhunt Logo
  • Light mode
    Follow system
    Dark mode
    • Play Story
    • App Story
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !

ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !

ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ - ೪೩

'ಆಧುನಿಕ ಜೀವನಶೈಲಿಯಿಂದ ಉಂಟಾಗುವ ಅನೇಕ ದೈಹಿಕ ಸಮಸ್ಯೆಗಳಿಗೆ 'ವ್ಯಾಯಾಮ' ಒಂದು ಪರಿಣಾಮಕಾರಿ ಉಪಾಯವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಪ್ರೇರಣೆ ಪಡೆಯಬಹುದು.

ಈ ಲೇಖನಮಾಲೆಯ ಮೂಲಕ ನಾವು 'ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, 'ಅರ್ಗೋನಾಮಿಕ್ಸ್' ತತ್ವ ಮತ್ತು ವ್ಯಾಧಿಗನುಗುಣವಾಗಿ ಯೋಗ್ಯ ವ್ಯಾಯಾಮ', ಇವುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ವ್ಯಾಯಾಮದ ಮಾಧ್ಯಮದಿಂದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪ್ರಯಾಣವು ಎಲ್ಲರಿಗೂ ಖಂಡಿತವಾಗಿಯೂ ಪ್ರೇರಣಾದಾಯಿಯಾಗಲಿದೆ !

ಈ ಲೇಖನದಲ್ಲಿ ನಾವು 'ನಿರಂತರ ವ್ಯಾಯಾಮ ಮತ್ತು ನಮ್ಮಲ್ಲಿನ ಸಾಮರ್ಥ್ಯವನ್ನು ಬಳಸಿ ಶಕ್ತಿಯನ್ನು ಹೆಚ್ಚಿಸಲು ಹೇಗೆ ಪ್ರಯತ್ನಿಸಬೇಕು ?', ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಈ ಹಿಂದಿನ ಲೇಖನ ಓದಲು ಇಲ್ಲಿ ಲಿಂಕ್‌ಮೇಲೆ ಕ್ಲಿಕ್‌ ಮಾಡಿ :https://sanatanprabhat.org/kannada/178318.html

೧. ಶರೀರದಲ್ಲಿನ ರೋಗನಿರೋಧಕ ಶಕ್ತಿಯಲ್ಲಿ ಹೆಚ್ಚಳವಾಗುತ್ತಿರುವುದು

ನಮ್ಮನ್ನು ಅನೇಕ ರೋಗಾಣುಗಳಿಂದ ಸುರಕ್ಷಿತವಾಗಿರಿಸುವ ಮತ್ತು ಅನಾರೋಗ್ಯಕ್ಕೆ ಒಳಗಾದಾಗ ಸೋಂಕಿನ ವಿರುದ್ಧ ಹೋರಾಡಿ ನಮ್ಮನ್ನು ಗುಣಪಡಿಸುವ ರೋಗನಿರೋಧಕ ಶಕ್ತಿಯು ನಿರಂತರವಾಗಿ ವೃದ್ಧಿಯಾಗುತ್ತಲೇ ಇರುತ್ತದೆ. ಮಲೇರಿಯಾ, ಟೈಫಾಯಿಡ್ ಮುಂತಾದ ಕಾಯಿಲೆಗಳಿಂದ ಬೇಗನೆ ಗುಣಮುಖರಾಗುವ ಪ್ರಮಾಣವು ಈಗ ಹಿಂದಿಗಿಂತ ಹೆಚ್ಚಾಗಿದೆ. ಕೊರೊನಾ ಸಾಂಕ್ರಾಮಿಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅದರ ಮೇಲೆ ಕಾಲ ಕ್ರಮೇಣ ವಿಜಯ ಸಾಧಿಸುವ ಕ್ಷಮತೆಯನ್ನು ಶರೀರವೇ ನಿರ್ಮಿಸಿಕೊಂಡಿದೆ.

೨. ಪ್ರತಿ ಕ್ಷಣವೂ ನವೀಕರಣಗೊಳ್ಳುವ ರೋಗನಿರೋಧಕ ಶಕ್ತಿಯಿಂದಲೇ ಮನುಷ್ಯನು ಆರೋಗ್ಯವಾಗಿರಲು ಸಾಧ್ಯವಾಗುವುದು

ನಾವು ಯಾವುದಾದರೂ ಹೊಸ ರೋಗಾಣುವಿನ ಸಂಪರ್ಕಕ್ಕೆ ಬಂದಾಗ, ದೇಹವು ಅದರ ವಿರುದ್ಧ ಹೋರಾಡಲು ನಿರ್ದಿಷ್ಟ ಬಿಳಿ ರಕ್ತಕಣಗಳನ್ನು ಸಿದ್ಧಪಡಿಸಲು ಆರಂಭಿಸುತ್ತದೆ. ಒಮ್ಮೆ ಆ ಕಾಯಿಲೆ ಗುಣವಾದರೂ, ಯಾವುದಾದರೊಂದು ರೋಗಾಣುವಿನ ಸಂಪರ್ಕ ಮತ್ತೆ ಬಂದರೆ ಶರೀರವು ಹೋರಾಡಲು ಸಿದ್ಧವಾಗಿರುತ್ತದೆ. ಈ ರೀತಿ ಪ್ರತಿ ಕ್ಷಣವೂ ನವೀಕರಣ ಆಗುವ ರೋಗನಿರೋಧಕ ಶಕ್ತಿಯಿಂದಲೇ ನಾವು ಆರೋಗ್ಯವಾಗಿರಲು ಸಾಧ್ಯವಾಗುತ್ತಿದೆ. ಸೃಷ್ಟಿ ಮತ್ತು ಶರೀರವು ಎಂದಿಗೂ ಒಂದೇ ಸ್ಥಿತಿಯಲ್ಲಿ ಇರದೆ ಸತತವಾಗಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿರುತ್ತವೆ. ಇದರಲ್ಲಿ ಎಂದಿಗೂ ಅಡೆತಡೆಯಿಲ್ಲ.

 ಶ್ರೀ. ನಿಮಿಷ ಮ್ಹಾತ್ರೆ

೩. ಅನೇಕ ಜನರು ನೈಸರ್ಗಿಕ ಜೀವನಶೈಲಿಗೆ ಒಗ್ಗಿಕೊಳ್ಳಲು ತಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ಸಾವಯವ ಆಹಾರ, ದೇಶಿ ತುಪ್ಪ, ಗೀರ ಹಸುವಿನ ಹಾಲು ಮುಂತಾದವುಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಪ್ರಕೃತಿಯಲ್ಲಿರುವ 'ಸಾತತ್ಯ, ಶಿಸ್ತು ಮತ್ತು ಪರಿವರ್ತನೆ' ಎಂಬ ಗುಣಗಳನ್ನು ರೂಢಿಸಿಕೊಂಡು ಸ್ವಂತ ಪ್ರಗತಿ ಸಾಧಿಸುವುದು ಅವಶ್ಯಕವಾಗಿದೆ.

೪. ವ್ಯಾಯಾಮದಲ್ಲಿ ಸಾತತ್ಯ, ಸಾಮರ್ಥ್ಯದ ಸರಿಯಾದ ಬಳಕೆ ಮತ್ತು ವ್ಯಾಯಾಮದ ಅವಧಿಯನ್ನು ಹೆಚ್ಚಿಸಿದರೆ, ಸ್ನಾಯುಗಳು ದೀರ್ಘಕಾಲ ಕಾರ್ಯನಿರ್ವಹಿಸುವ ಕ್ಷಮತೆ ಬಲಗೊಳ್ಳುವುದು

ವ್ಯಾಯಾಮದ ಸಾತತ್ಯವು ಅದರ ತೀವ್ರತೆ, ಕಾಲಾವಧಿ ಮತ್ತು ಆವರ್ತನಗಳಲ್ಲಿ ಇರಬೇಕು.

ಅ. ನಾವು ತೂಕ ಎತ್ತುವ ವ್ಯಾಯಾಮ ಮಾಡುತ್ತಿದ್ದರೆ, ನಮಗೆ ಸಾಧ್ಯವಾಗುವಷ್ಟು ತೂಕ ಎತ್ತುವಲ್ಲಿ ಸಾತತ್ಯ ಇದ್ದರೆ ಮಾತ್ರ ನಮ್ಮ ಸಾಮರ್ಥ್ಯ ಹೆಚ್ಚುತ್ತದೆ. ಸಾಮರ್ಥ್ಯ ಚೆನ್ನಾಗಿದ್ದರೂ ಕಡಿಮೆ ತೀವ್ರತೆಯ ತೂಕ ಎತ್ತಿದರೆ ಸಾಮರ್ಥ್ಯ ಬೇಗನೆ ಹೆಚ್ಚಾಗುವುದಿಲ್ಲ. ಆ. ಓಡುವುದು, ನಡೆಯುವುದು ಮತ್ತು ಈಜುವಂತಹ ವ್ಯಾಯಾಮಗಳಲ್ಲಿ ತೀವ್ರತೆಯನ್ನು ಹೆಚ್ಚಿಸುವುದು ವೇಗ ಮತ್ತು ಏರುಮುಖದ (Iಟಿಛಿಟiಟಿe) ಬದಲಾವಣೆಯಿಂದ ಸಾಧ್ಯವಾಗುತ್ತದೆ. ವ್ಯಾಯಾಮ ಮಾಡುವ ಅವಧಿ ಹೆಚ್ಚಿಸುವುದರಿಂದಲೂ ಸ್ನಾಯುಗಳ ದೀರ್ಘಕಾಲ ಕಾರ್ಯನಿರತವಾಗಿರಲು ಕ್ಷಮತೆ ಹೆಚ್ಚಾಗುತ್ತದೆ.

ಇ. ಯೋಗಾಸನ ಮಾಡುವಾಗ ಒಂದು ಆಸನವನ್ನು ಎಷ್ಟು ಸಮಯ ಮತ್ತು ಎಷ್ಟು ಬಾರಿ ಮಾಡುತ್ತೇವೆ ಎಂಬ ಬದಲಾವಣೆಯಿಂದ ಪ್ರಗತಿ ಸಾಧಿಸಬಹುದು. ಸುಲಭವಾದ ಆಸನಗಳಿಂದ ಕಠಿಣ ಆಸನಗಳ ವರೆಗೆ ಹಂತಹಂತವಾಗಿ ತೀವ್ರತೆಯನ್ನು ಹೆಚ್ಚಿಸುತ್ತಾ ಹೋಗಬಹುದು.

೫. ವ್ಯಾಯಾಮವನ್ನು ಅದರ ಎಲ್ಲಾ ಸೂಕ್ಷ್ಮತೆಗಳನ್ನು ತಿಳಿದುಕೊಂಡು ಮಾಡಿದರೆ ಅದರಿಂದ ದೇಹದ ಮೇಲೆ ಬೀಳುವ ಒತ್ತಡದ ಅರಿವಾಗಿ ಒಂದು ರೀತಿಯ ಸಮಾಧಾನ ಸಿಗುವುದು ಮತ್ತು ಅದಕ್ಕಾಗಿ ವ್ಯಾಯಾಮವನ್ನು ಮನಃಪೂರ್ವಕವಾಗಿ ಉತ್ಸಾಹದಿಂದ ಮಾಡುವುದು ಆವಶ್ಯಕ !

ವ್ಯಾಯಾಮವು ಎಲ್ಲ ಸೂಕ್ಷ್ಮತೆಯೊಂದಿಗೆ ಮಾಡುವುದರಲ್ಲಿ ವ್ಯಾಯಾಮದಲ್ಲಿನ ಶಿಸ್ತು ಅಡಗಿದೆ. ಶಾಲೆಯಲ್ಲಿ ಓದುವಾಗ ಯಾರಿಗೆ ಕವಾಯತು ಮಾಡಲು ಬೇಸರವಿದೆಯೋ, ಅವರು ಶಿಕ್ಷಕರ ಗಮನವಿಲ್ಲದಿದ್ದಾಗ ಆಲಸ್ಯ ತೋರುತ್ತಾರೆ. ಅದೇ ರೀತಿ ವ್ಯಾಯಾಮವನ್ನು ಕೇವಲ 'ಮಾಡಬೇಕು' ಎಂಬ ಕಾರಣಕ್ಕೆ ಮಾಡಿದರೆ ಅದರ ಪ್ರಯೋಜನಗಳಿಂದ ನಾವು ವಂಚಿತರಾಗುತ್ತೇವೆ. ಮನಃಪೂರ್ವಕವಾಗಿ, ಉತ್ಸಾಹದಿಂದ ಮತ್ತು ಗಮನವಿಟ್ಟು ವ್ಯಾಯಾಮ ಮಾಡುವುದರಿಂದ ಇಡೀ ದಿನದ ಕಾರ್ಯಕ್ಷಮತೆಯೂ ಹೆಚ್ಚಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

೬. ವ್ಯಾಯಾಮದಲ್ಲಿ ಪ್ರಗತಿಪರ ಬದಲಾವಣೆಗಳನ್ನು ಮಾಡುತ್ತಾ ಹೋದರೆ ದೈಹಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೆ, ಶರೀರ ಮತ್ತು ಮನಸ್ಸಿನ ಮಟ್ಟದಲ್ಲಿ ಒಂದು ಹೊಸ ಚೈತನ್ಯ ಬಂದಂತಾಗುತ್ತದೆ ಮತ್ತು ವ್ಯಾಯಾಮದ ಮೇಲೆ ಹೆಚ್ಚು ಆಸಕ್ತಿ ಮೂಡುತ್ತದೆ.

ಈ ರೀತಿ ವ್ಯಾಯಾಮ ಮಾಡುವಾಗ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ವಂತ ಸಾಮರ್ಥ್ಯದ ಅಭ್ಯಾಸ ಮಾಡೋಣ ಅಥವಾ ತಜ್ಞರ ಸಹಾಯದಿಂದ ಅಗತ್ಯ ಬದಲಾವಣೆಗಳನ್ನು ಮಾಡುತ್ತಾ ದೇಹದ ಬಲವರ್ಧನೆ ಮಾಡಿಕೊಳ್ಳೋಣ !

- ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ (ಫಿಜಿಯೋಥೆರೊಪಿಸ್ಟ್), ಫೋಂಡಾ, ಗೋವಾ. (೪.೧.೨೦೨೫)

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada