ಸ್ಕಾಟಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಒಪ್ಪಂದ ಮಾಡಿಕೊಂಡು ಪ್ರತ್ಯೇಕವಾಗುವ ಇಚ್ಛೆಯನ್ನು ಘೋಷಿಸಿದವು!
ಲಂಡನ (ಬ್ರಿಟನ) - ಯುನೈಟೆಡ್ ಕಿಂಗಡಮ್ ('ಯುಕೆ'ಯ) ೪ ಭಾಗಗಳಲ್ಲಿ ವಿಭಜನೆಯಾಗುವ ಸಾಧ್ಯತೆಯಿದೆ. ಸ್ಕಾಟಲ್ಯಾಂಡ್, ವೇಲ್ಸ್ ಮತ್ತು ಐರ್ಲೆಂಡ್ ಇಂಗ್ಲೆಂಡನಿಂದ ಪ್ರತ್ಯೇಕವಾಗುವ ಇಚ್ಛೆಯನ್ನು ಘೋಷಿಸಿರುವುದರಿಂದ ಸಂಚಲನ ಉಂಟಾಗಿದೆ.
ಯುಕೆಯ ಈ ೩ ಭಾಗಗಳು ಇಂಗ್ಲೆಂಡನಿಂದ ಪ್ರತ್ಯೇಕವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಈಗ ಯುಕೆಯ ಅಸ್ತಿತ್ವಕ್ಕೇ ಅಪಾಯ ನಿರ್ಮಾಣವಾಗಿದೆ.
೧. ಯುಕೆಯ ೩ ವಿಕೇಂದ್ರೀಕೃತ ಶಾಸನಸಭೆಗಳ ಸ್ಕಾಟಲ್ಯಾಂಡ, ಉತ್ತರ ಐರ್ಲೆಂಡ ಮತ್ತು ವೇಲ್ಸನ ಚುನಾಯಿತ ಪ್ರತಿನಿಧಿಗಳು ಸೆಪ್ಟೆಂಬರ್ ೧೪ ರಂದು ಒಂದು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ವೆಸ್ಟಮಿನಸ್ಟರ್ ವ್ಯವಸ್ಥೆಯ (ಸಂಸದೀಯ ಸರಕಾರ) ನಿಯಂತ್ರಣದಿಂದ ಮುಕ್ತವಾಗುವ ಇಚ್ಛೆಯನ್ನು ಘೋಷಿಸಿದರು. 'ನಮ್ಮ ರಾಷ್ಟ್ರಗಳಿಗೆ ಸ್ವಯಂನಿರ್ಣಯದ ಹಕ್ಕಿದೆ. ಯಾವುದೇ ವೆಸ್ಟಮಿನಸ್ಟರ್ (ಸಂಸದೀಯ ಸರಕಾರ) ಸರಕಾರಕ್ಕೆ ಪ್ರಜಾಪ್ರಭುತ್ವವನ್ನು ತಡೆಯುವ ಅಥವಾ 'ಜನರು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುತ್ತಾರೆ', ಎಂಬ ತತ್ತ್ವವನ್ನು ಕೀಳಾಗಿ ಕಾಣುವ ಹಕ್ಕಿಲ್ಲ', ಎಂದು ಈ ಒಪ್ಪಂದದಲ್ಲಿ ಹೇಳಲಾಗಿದೆ.
೨. ಈ ಐತಿಹಾಸಿಕ ಒಪ್ಪಂದಕ್ಕೆ ಸ್ಕಾಟಲ್ಯಾಂಡನ ಪ್ರಥಮ ಸಚಿವರು (ಮುಖ್ಯಮಂತ್ರಿ) ಜಾನ್ ಸ್ವಿನ್ನಿ, ವೇಲ್ಸನ ಪ್ರಥಮ ಸಚಿವರು (ಮುಖ್ಯಮಂತ್ರಿ) ರುನ್ ಎಪಿ ಇಓರ್ವೇರ್ಥ ಮತ್ತು ಉತ್ತರ ಐರ್ಲೆಂಡನ ಪ್ರಥಮ ಸಚಿವೆ (ಮುಖ್ಯಮಂತ್ರಿ) ಮಿಶೆಲ್ ಓ'ನೀಲ್ ಅವರು ಕಾರ್ಡಿಫನಲ್ಲಿ ನಡೆದ ಒಂದು ಶೃಂಗಸಭೆಯಲ್ಲಿ ಈ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹಾಗೆಯೇ ಐರ್ಲೆಂಡನ ವಿರೋಧ ಪಕ್ಷದ ನಾಯಕಿ ಹಾಗೂ 'ಸಿನ್ ಫೇನ್'ನ (ಉತ್ತರ ಐರ್ಲೆಂಡನ ಪ್ರಮುಖ ರಾಜಕೀಯ ಪಕ್ಷ) ಅಧ್ಯಕ್ಷೆ ಮೇರಿ ಲೂ ಮೆಕಡೊನಾಲ್ಡ್ ಅವರು ನಾಲ್ಕನೇ ಸಹಿದಾರರಾಗಿದ್ದಾರೆ.

