ಮೂಲಭೂತ ಹಕ್ಕುಗಳು ವ್ಯಕ್ತಿತ್ವ ವಿಕಸನದ ಅವಿಭಾಜ್ಯ ಅಂಗಗಳಾಗಿವೆ. ಭಾರತದ ಸಂವಿಧಾನದ ಮೂರನೆಯ ಭಾಗವು ತನ್ನ ಪ್ರಜೆಗಳಿಗೆ ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತ್ತು ಸಂವಿಧಾನಾತ್ಮಕ ಪರಿಹಾರಗಳ ಹಕ್ಕು ಹೀಗೆ ಆರು ಮೂಲಭೂತ ಹಕ್ಕುಗಳನ್ನು ನೀಡಿದೆ. ಸಂವಿಧಾನದ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದೆ, ಆದ್ದರಿಂದ ಸರ್ವೋಚ್ಛ ನ್ಯಾಯಾಲಯವನ್ನು "ಭಾರತ ಸಂವಿಧಾನದ ರಕ್ಷಕ/ಕಾವಲುಗಾರ" ಎಂದು ಕರೆಯಲಾಗುತ್ತದೆ.
ಹಕ್ಕುಗಳು ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕೆ, ವ್ಯಕ್ತಿಯ ಅಭಿವೃದ್ದಿಗೆ ಅಗತ್ಯವಾಗಿವೆ. ಸಂವಿಧಾನದಲ್ಲಿ ನಮೂದಿಸಿ ರಕ್ಷಿಸಲ್ಪಡುವ ಹಕ್ಕುಗಳೇ ಮೂಲಭೂತ ಹಕ್ಕುಗಳು. ಮ್ಯಾಗ್ನಕಾರ್ಟ್ ಎಂಬುದು 1215 ರಲ್ಲಿ ಇಂಗ್ಲೇಂಡಿನ ಜಾನ್ ದೊರೆ ಹೊರಡಿಸಿದ ಮೂಲಭೂತ ಹಕ್ಕುಗಳ ಪ್ರಣಾಳಿಕೆಯಾಗಿದೆ.
No Internet connection |