ಆಸ್ಟ್ರೇಲಿಯಾ ವಿರುದ್ಧ ಎರಡನೇ ಓಡಿಐ ಪಂದ್ಯದಲ್ಲಿ ಮಾರ್ನಸ್ ಲಾಬುಶೇನ್ ಅವರ ಕ್ಯಾಚ್ ಕೈ ಚೆಲ್ಲಿದ ಬಳಿಕ ಅಂದಿನ ರಾತ್ರಿ ನಿದ್ರೆಯೇ ಮಾಡಿರಲಿಲ್ಲವೆಂದು ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬಹಿರಂಗಪಡಿಸಿದ್ದಾರೆ.ಬುಧವಾರ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ 13 ರನ್‌ಗಳ ಗೆಲುವಿನಲ್ಲಿ ರವೀಂದ್ರಾ ಜಡೇಜಾ ತಂಡಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದರು. ಅವರು 50 ಎಸೆತಗಳಲ್ಲಿ ಅಜೇಯ 66 ರನ್‌ಗಳನ್ನು ಸಿಡಿಸಿದ್ದರು ಹಾಗೂ ಹಾರ್ದಿಕ್ ಪಾಂಡ್ಯ ಅವರೊಂದಿಗೆ 6ನೇ ವಿಕೆಟ್‌ಗೆ 150 ರನ್‌ಗಳ ಜತೆಯಾಟವನ್ನು ಆಡಿದ್ದರು. ಒಟ್ಟಾರೆ ಭಾರತ ತನ್ನ ಪಾಲಿನ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 302 ರನ್‌ಗಳನ್ನು ದಾಖಲಿಸಿತ್ತು.ಬಳಿಕ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 289 ರನ್‌ಗಳಿಗೆ ಆಲೌಟ್ ಆಯಿತು.
ಆ ಪಂದ್ಯದಲ್ಲಿ ಭಾರತ 51 ರನ್‌ಗಳಿಂದ ಸೋಲು ಅನುಭವಿಸಿತ್ತು. ಇಂದಿನ (ಬುಧವಾರ) ಪಂದ್ಯದಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಕ್ಯಾಮೆರಾನ್ ಗ್ರೀನ್ ಅವರ ಅದ್ಭುತ ಕ್ಯಾಚ್ ಹಿಡಿದಿದ್ದು ಸ್ವಲ್ಪ ಸಮಾಧಾನ ತರಿಸಿತು ಎಂದು ಹೇಳಿದರು.ಕಳೆದ ಪಂದ್ಯದಲ್ಲಿ ಕ್ಯಾಚ್ ಚೆಲ್ಲಿದ್ದರಿಂದ ಅಂದಿನ ರಾತ್ರಿ ನಿದ್ರೆಯೇ ಮಾಡಿರಲಿಲ್ಲ. ಅಂದು ಚೆಂಡು ನೇರವಾಗಿ ಬರುತ್ತಿದ್ದ ವೇಳೆ ನನ್ನ ಕಣ್ಣುಗಳನ್ನು ಮುಚ್ಚಿಕೊಂಡಿದ್ದಕ್ಕಾಗಿ ಕ್ಯಾಚ್ ಕೈಚೆಲ್ಲಿತು," ಎಂದು ತಿಳಿಸಿದರು.50-50 ಪರಿಸ್ಥಿತಿ ಇದ್ದರೆ, ಕ್ಯಾಚ್‌ಗೆ ಹೋಗುತ್ತೇನೆಂದು ಇಂದು ನಾನು ಯೋಚಿಸಿದ್ದೆ. ಏಕೆಂದರೆ ನಾನು ಕ್ಯಾಚ್‌ಗೆ ಹೋಗದಿದ್ದರೆ ತಂಡದ ಗೆಲುವಿಗೆ ಶೇ.
100% ರಷ್ಟು ಪ್ರಯತ್ನ ನೀಡುತ್ತಿಲ್ಲ ಎಂದು ಭಾವನೆ ಉಂಟಾಗುತ್ತದೆ," ಎಂದು ಎಡಗೈ ಬ್ಯಾಟ್ಸ್‌ಮನ್ ಹೇಳಿದರು.ಏಕದಿನ ಸರಣಿಯನ್ನು ಮುಗಿಸಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಶುಕ್ರವಾರದಿಂದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಬಳಿಕ ಡಿ.17 ರಿಂದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿವೆ. ಅಡಿಲೇಡ್‌ನಲ್ಲಿ ನಡೆಯುವ ಮೊದಲನೇ ಟೆಸ್ಟ್ ಬಳಿಕ ಕೊಹ್ಲಿ ತವರಿಗೆ ಮರಳಲಿದ್ದು, ಅವರ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.

