Posts
ಟೀಮ್ ಇಂಡಿಯಾದ ಡಿಆರ್‌ಎಸ್ ಡ್ರಾಮಾ ಟೀಕಿಸಿದ ನೆಟ್ಟಿಗರು!

: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ವೈಟ್‌ವಾಶ್ ಸೋಲಿನ ಮುಖಭಂಗ ತಪ್ಪಿಸಿಕೊಳ್ಳುವ ಹೋರಾಟ ನಡೆಸಿದ ಟೀಮ್ ಇಂಡಿಯಾ, ತನ್ನ ಬ್ಯಾಟಿಂಗ್ ವೇಳೆ ಅಂಪೈರ್ ತೀರ್ಪು ಮರು ಪರಿಶೀಲನೆ (ಡಿಆರ್‌ಎಸ್) ಸೇವೆ ಸರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದಕ್ಕೆ ಸಿಕ್ಕಾಪಟ್ಟೆ ಟೀಕೆಗಳನ್ನು ಎದುರಿಸುವಂತ್ತಾಗಿದೆ.
ಏಕದಿನ ಕ್ರಿಕೆಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 66 ಮತ್ತು 51 ರನ್‌ಗಳಿಂದ ಜಯ ದಾಖಲಿಸಿದ ಆಸ್ಟ್ರೇಲಿಯಾ ತಂಡ ಸರಣಿ ಗೆಲುವು ತನ್ನದಾಗಿಸಿಕೊಂಡಿತು. ಆದರೆ, ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 13 ರನ್‌ಗಳ ಜಯ ದಾಖಲಿಸಿದ ವಿರಾಟ್ ಕೊಹ್ಲಿ ಬಳಗ ವೈಟ್‌ವಾಶ್ ಸೋಲಿನ ಆಘಾತ ತಪ್ಪಿಸಿಕೊಂಡಿತು.ಆದರೆ, ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳಾದ ಶುಭಮನ್ ಗಿಲ್, ಕೆಎಲ್ ರಾಹುಲ್ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಡಿಆರ್‌ಎಸ್ ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾದರು. ಎಲ್ಲವೂ ಕ್ಲೀನ್ ಔಟ್ ಎಂಬುದನ್ನು ತಿಳಿದಿದ್ದರು ಕೂಡ ಡಿಆರ್‌ಎಸ್ ತೆಗದುಕೊಂಡು ಡ್ರಾಮಾ ಮಾಡಿದ್ದಕ್ಕೆ ನೆಟ್ಟಿಗರು ಟೀಕೆಗಳ ಸುರಿಮಳೆಗೈದಿದ್ದಾರೆ.ಮೊದಲಿಗೆ ಆಷ್ಟನ್ ಅಗರ್ ಬೌಲಿಂಗ್‌ನಲ್ಲಿ ಅನಗತ್ಯ ಸ್ವೀಪ್ ಶಾಟ್‌ಗೆ ಮುಂದಾದ ಶುಭಮನ್ ಗಿಲ್ ವಿಕೆಟ್ ಮಧ್ಯದಲ್ಲಿ ಎಲ್‌ಬಿಡಬ್ಲ್ಯ ಬಲೆಗೆ ಬಿದಿದ್ದರು. ಮೇಲ್ನೋಟಕ್ಕೆ ಅದು ಸ್ಪಷ್ಟ ಔಟ್ ಎಂಬುದನ್ನು ತಿಳಿದಿದ್ದರೂ ಕೂಡ ಕ್ರೀಸ್‌ನಲ್ಲಿದ್ದ ಗಿಲ್ ಮತ್ತು ಕೊಹ್ಲಿ ಡಿಆರ್‌ಎಸ್ ಮೊರೆ ಹೋಗಿ ಅದೃಷ್ಠ ಪರೀಕ್ಷೆ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಇದರ ಬೆನ್ನಲ್ಲೇ ಕೆಎಲ್ ರಾಹುಲ್ ಕೂಡ ಅಂಥದ್ದೇ ತಪ್ಪು ಮಾಡಿದರು. ಮತ್ತದೇ ಸ್ವೀಪ್ ಶಾಟ್ ಪ್ರಯತ್ನಲ್ಲಿ ಎಲ್‌ಬಿಡಬ್ಲ್ಯು ಖೆಡ್ಡಾಗೆ ಬಿದ್ದಿದ್ದರು. ಇಲ್ಲಿಯೂ ರಾಹುಲ್ ಉಳಿಯುವ ಯಾವುದೇ ಸುಳಿವಿರಲಿಲ್ಲ. ಆದರೂ ಡಿಆರ್‌ಎಸ್ ತೆಗೆದುಕೊಳ್ಳಲಾಯಿತು. ಸತತ ಎರಡನೇ ಬಾರಿ ಭಾರತಕ್ಕೆ ಡಿಆರ್‌ಎಸ್‌ನಲ್ಲಿ ನಿರಾಸೆ ಎದುರಾಯ್ತು.ಈ ಮಧ್ಯೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ 12 ಸಾವಿರ ರನ್‌ಗಳನ್ನು ಗಳಿಸಿದ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ, ಎದಿರಾಳಿ ತಂಡದ ಸ್ಟ್ರೈಕ್ ಬೌಲರ್ ಜಾಶ್ ಹೇಝಲ್‌ವುಡ್ ಎದುರು ಆಕ್ರಮಣಕಾರಿ ಆಟವಾಡುವ ಪ್ರಯತ್ನ ಮಾಡಿದರು. ಶಾರ್ಟ್ ಪಿಚ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯುವ ಪ್ರಯತ್ನ ಮಾಡಿದ ಕೊಹ್ಲಿ ಕಾಟ್ ಬಿಹೈಂಡ್ ಆಗಿದ್ದರು.ಆದರೆ ಅಂಪೈರ್ ನಾಟ್‌ಔಟ್ ತೀರ್ಪನ್ನು ನೀಡಿದ್ದರು. ಆಸೀಸ್ ತಂಡ ಅಂಪೈರ್ ತೀರ್ಪನ್ನು ಪ್ರಶ್ನಿಸಿ ಡಿಆರ್‌ಎಸ್ ತೆಗೆದುಕೊಂಡಿತು. ಡಿಆರ್‌ಎಸ್ ಪರಿಶೀಲನೆಯ ಸ್ನಿಕೊ ಮೀಟರ್ ವೀಕ್ಷಣೆಯಲ್ಲಿ ಚೆಂಡು ಕೊಹ್ಲಿ ಬ್ಯಾಟ್‌ನ ಅಂತಿಗೆ ತಾಗಿರುವುದು ಸ್ಪಷ್ಟವಾಗಿ ಕಂಡುಬಂದಿತ್ತು. ಕೊಹ್ಲಿ ಕಿಂಚಿತ್ತೂ ಪ್ರತಿಕ್ರಿಯೆ ನೀಡದೆ ಪೆವಿಲಿಯನ್ ಕಡೆಗೆ ಹೆಜ್ಜೆಹಾಕಿದರು. ಔಟ್ ಎಂದರು ಗೊತ್ತಿದ್ದರೂ ಕೂಡ ಕ್ರೀಡಾ ಸ್ಫೂರ್ತಿ ಮೆರೆಯದ ಕಾರಣ ಕೊಹ್ಲಿ ವಿರುದ್ಧ ನೆಟ್ಟಿಗರು ಕೊಂಚ ಗರಂ ಆದರು.ಔಟ್ ಆಗುವ ಮುನ್ನ ಕೊಹ್ಲಿ ಮನಮೋಹ 63 ರನ್‌ಗಳನ್ನು ಸಿಡಿಸಿದ್ದರು. ಶತಕವನ್ನು ಎದುರು ನೋಡುತ್ತಿದ್ದ ಕೊಹ್ಲಿ ವಿಕೆಟ್ ಕೈಚೆಲ್ಲುವ ಮೂಲಕ 2020ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಕನಿಷ್ಠ ಒಂದು ಶತಕ ಕೂಡ ದಾಖಲಿಸದೇ ಹೋದರು. ತಮ್ಮ ವೃತ್ತಿ ಬದುಕಿನಲ್ಲಿ ಮೊದಲ ಬಾರಿ ವರ್ಷವೊಂದರಲ್ಲಿ ಒಡಿಐ ಶತಕದ ಬರ ಅನುಭವಿಸಿದ್ದಾರೆ.