Dailyhunt Logo
  • Light mode
    Follow system
    Dark mode
    • Play Story
    • App Story
₹4,200 ಕೋಟಿ ವೆಚ್ಚದ ಕಾನ್‌ಪುರ-ಲಕ್ನೋ ಎಕ್ಸ್‌ಪ್ರೆಸ್‌ವೇ ಬಿರುಕು: ಟೋಲ್ ಸಂಗ್ರಹ ಸಂಪೂರ್ಣ ಸ್ಥಗಿತ, ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ!

₹4,200 ಕೋಟಿ ವೆಚ್ಚದ ಕಾನ್‌ಪುರ-ಲಕ್ನೋ ಎಕ್ಸ್‌ಪ್ರೆಸ್‌ವೇ ಬಿರುಕು: ಟೋಲ್ ಸಂಗ್ರಹ ಸಂಪೂರ್ಣ ಸ್ಥಗಿತ, ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ!

Suddikshana 1 week ago

ಕ್ನೋ: ಉದ್ಘಾಟನೆಯಾದ ಮೂರೇ ವಾರಗಳಲ್ಲಿ ಉತ್ತರ ಪ್ರದೇಶದ ಹೆಮ್ಮೆಯ ₹4,200 ಕೋಟಿ ವೆಚ್ಚದ ಕಾನ್‌ಪುರ-ಲಕ್ನೋ ಎಕ್ಸ್‌ಪ್ರೆಸ್‌ವೇಯ ಹಲವು ಭಾಗಗಳು ಕುಸಿದುಬಿದ್ದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಘಟನೆಯ ಬೆನ್ನಲ್ಲೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಡೀ ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಂಗ್ರಹವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ಅಮಾನತುಗೊಳಿಸಿದೆ.

ರಸ್ತೆ ದುರಸ್ತಿಗೆ ಅಗೆತ: ಜುಲೈ 13 ರಂದು ಲೋಕಾರ್ಪಣೆಗೊಂಡಿದ್ದ ಈ 63 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇನಲ್ಲಿ, ಜುಲೈ 26 ರಂದೇ ಪ್ರಥಮವಾಗಿ ಬಿರುಕು ಹಾಗೂ ರಸ್ತೆ ಕುಸಿತ ಕಾಣಿಸಿಕೊಂಡಿತ್ತು. ಇದೀಗ ಕಿಲೋಮೀಟರ್ 64 ರ ಬಳಿ ಸುಮಾರು 300 ಮೀಟರ್‌ಗೂ ಹೆಚ್ಚು ಉದ್ದದ ರಸ್ತೆಯನ್ನು ತಡೆಗೋಡೆ ನಿರ್ಮಿಸಿ ಸಂಪೂರ್ಣವಾಗಿ ಅಗೆದು ಮರುನಿರ್ಮಾಣ ಮಾಡಲಾಗುತ್ತಿದೆ.

ವಾಹನ ಸವಾರರ ಪರದಾಟ:ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಏಕಮುಖ ಸಂಚಾರಕ್ಕೆ (Single Carriageway) ಅವಕಾಶ ನೀಡಲಾಗಿದೆ.ಉನ್ನಾವೋ ಎಂಟ್ರಿ ಪಾಯಿಂಟ್ ಬಳಿ ಟೋಲ್ ಪಾವತಿಸಿದ ನಂತರವೂ ಚಾಲಕರಿಗೆ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸುವಂತೆ ಸೂಚಿಸಲಾಗುತ್ತಿದ್ದು, ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.

ನಿರ್ಮಾಣ ಸಂಸ್ಥೆ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ:

ಕಾಮಗಾರಿ ಗುತ್ತಿಗೆ ಪಡೆದ PNC Infratech Ltd ಸಂಸ್ಥೆಯನ್ನು 'ಕಳಪೆ ಸಾಧನೆ' (Non-performer) ಪಟ್ಟಿಗೆ ಸೇರಿಸಲು ನೋಟಿಸ್ ನೀಡಲಾಗಿದ್ದು, ₹3 ಕೋಟಿ ವೆಚ್ಚದ ಸಂಪೂರ್ಣ ದುರಸ್ತಿ ವೆಚ್ಚ ಹಾಗೂ ಟೋಲ್ ನಷ್ಟವನ್ನು ಅದೇ ಸಂಸ್ಥೆಯಿಂದ ವಸೂಲಿ ಮಾಡಲು ನಿರ್ಧರಿಸಲಾಗಿದೆ.

ಯೋಜನಾ ವ್ಯವಸ್ಥಾಪಕ ವಿವೇಕ್ ಕುಮಾರ್ ಗುಪ್ತಾ ಹಾಗೂ ಸ್ವತಂತ್ರ ಎಂಜಿನಿಯರ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ವಜಾಗೊಳಿಸಿ, 2 ವರ್ಷಗಳ ಕಾಲ ಕಪ್ಪುಪಟ್ಟಿಗೆ ಸೇರಿಸಲಾಗಿದೆ.

ಹಾಲಿ ಯೋಜನೆ ನಿರ್ದೇಶಕ ನಕುಲ್ ಪ್ರಕಾಶ್ ವರ್ಮಾ ಮತ್ತು ಮಾಜಿ ನಿರ್ದೇಶಕ ಸೌರಭ್ ಚೌರಾಸಿಯಾ ಅವರಿಗೆ ಕಾರಣ ಕೇಳಿ ಚಾರ್ಜ್‌ಶೀಟ್ ನೀಡಲಾಗಿದೆ.

ತಾಂತ್ರಿಕ ತನಿಖೆಗೆ IIT ಖರಗ್‌ಪುರ ತಂಡ:ರಸ್ತೆ ಕುಸಿತಕ್ಕೆ ಮಳೆಯ ನೀರು ಕೆಳಭಾಗದ ಮಣ್ಣಿಗೆ ಸೇರಿರುವುದೇ ಪ್ರಾಥಮಿಕ ಕಾರಣ ಎಂದು ಹೇಳಲಾಗಿದ್ದರೂ, ಸಂಪೂರ್ಣ ಗುಣಮಟ್ಟ ತನಿಖೆಗೆ IIT ಖರಗ್‌ಪುರದ ಪ್ರೊ. ಕೆ.ಎಸ್. ರೆಡ್ಡಿ ನೇತೃತ್ವದ ತಜ್ಞರ ತಂಡವನ್ನು ನಿಯೋಜಿಸಲಾಗಿದೆ.ಲೆಸರ್ ಪ್ರೊಫೈಲೊಮೀಟರ್ ತಂತ್ರಜ್ಞಾನ ಬಳಸಿ ರಸ್ತೆಯ ಆಡಿಟ್ ನಡೆಸಲಾಗುತ್ತಿದೆ.

ಸಂಪೂರ್ಣ ರಸ್ತೆ ಸುರಕ್ಷಿತ ಹಾಗೂ ಸಂಚಾರ ಯೋಗ್ಯವಾಗುವವರೆಗೂ ಯಾವುದೇ ರೀತಿಯ ಟೋಲ್ ವಸೂಲಿ ಮಾಡುವುದಿಲ್ಲ ಎಂದು NHAI ಸ್ಪಷ್ಟಪಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddikshana