ಬೆಂಗಳೂರು: ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ಪಡೆಯುವುದು ಪ್ರತಿಯೊಬ್ಬ ಉದ್ಯೋಗಿಯ ಡ್ರೀಮ್ ಮೈಲಿಗಲ್ಲು.ಆದರೆ, ಈ ಮಟ್ಟದ ಆದಾಯವೇ ವೃತ್ತಿಜೀವನದ ಅತ್ಯಂತ 'ಅಪಾಯಕಾರಿ ಹಂತ' ಎಂದು ಬೆಂಗಳೂರಿನ ಸಾಫ್ಟ್‌ವೇರ್ ವೃತ್ತಿಪರ ಶಶಾಂಕ್ ದೀಕ್ಷಿತ್ ಹೇಳಿದ್ದಾರೆ.ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಟೆಕ್ಕಿ ಹಂಚಿಕೊಂಡಿರುವ ಪೋಸ್ಟ್ ಈಗ ಉದ್ಯೋಗಿಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆರಂಭದಲ್ಲಿ ಆರ್ಥಿಕ ಸ್ವಾತಂತ್ರ್ಯದಂತೆ ಕಾಣುವ ಈ ವೇತನ, ಕಾಲಕ್ರಮೇಣ ಉದ್ಯೋಗಿಯನ್ನು ಗಿಲ್ಡೆಡ್ ಕೇಜ್ (ಬಂಗಾರದ ಪಂಜರ) ನಲ್ಲಿ ಬಂಧಿಸುತ್ತದೆ.ಸ್ವಂತ ಉದ್ಯಮ ಆರಂಭಿಸಲು, ಹೊಸ ಕ್ಷೇತ್ರಕ್ಕೆ ಜಿಗಿಯಲು ಅಥವಾ ಇಷ್ಟದ ಕೆಲಸ ಮಾಡಲು ಬಯಸುವವರು ತಮ್ಮ ಪ್ರಸ್ತುತ ಲೈಫ್‌ಸ್ಟೈಲ್ ಹಾಗೂ ಆರ್ಥಿಕ ಭದ್ರತೆಯನ್ನು ಕಳೆದುಕೊಳ್ಳುವ ಭಯಕ್ಕೆ ಬೀಳುತ್ತಾರೆ.ಪರಿಣಾಮವಾಗಿ, 'ಮುಂದಿನ ತಿಂಗಳು, ಮುಂದಿನ ವರ್ಷ ನೋಡೋಣ' ಎಂದು ನಿರ್ಧಾರಗಳನ್ನು ಮುಂದೂಡುತ್ತಾ ತಮ್ಮ ಮೂಲ ಮಹತ್ವಾಕಾಂಕ್ಷೆಯನ್ನೇ ಮರೆತುಬಿಡುತ್ತಾರೆ.

